ಸೋಮವಾರಪೇಟೆ: ಪಟ್ಟಣ ಪಂಚಾಯಿತಿ ಖಡತ ನಾಪತ್ತೆ ಪ್ರಕರಣ ಕೆಲವು ಸದಸ್ಯರು ಶಾಮೀಲು ಆರೋಪ
ಸೋಮವಾರಪೇಟೆ:- ಇಲ್ಲಿನ ಪಟ್ಟಣ ಪಂಚಾಯಿತಿ ಭ್ರಷ್ಟಾಚಾರ ಮಿತಿಮೀರಿದೆ,ಪೌರ ಕಾರ್ಮಿಕರಿಗೆ ಅನ್ಯಾಯವಾಗಿದೆ, ಖಡತ ನಾಪತ್ತೆಯಾಗಿದೆ ಕೆಲವು ಸದಸ್ಯರು ಶಾಮೀಲಾಗಿದ್ದಾರೆಂದು ಇಂದಿರಾಗಾಂಧಿ ಅಭಿಮಾನಿ ಸಂಘದ ಅಧ್ಯಕ್ಷ ಹಾಗೂ ಪಟ್ಟಣ ಪಂಚಾಯ್ತಿ ನಾಮನಿರ್ದೇಶಿತ ಸದಸ್ಯ ಹೆಚ್. ಎ.ನಾಗರಾಜ್ ಗಂಭೀರ ಆರೋಪ ಮಾಡಿದ್ದಾರೆ.
ಇಂದು ಪತ್ರಿಕಾ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಪೌರ ಕಾರ್ಮಿಕರಿಗೆ ನಿವೇಶನ ಕೊಡುವ ವಿಚಾರ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದೆ ಆದರೆ ಇತ್ತೀಚೆಗೆ ಅನುಮೋದನೆಗೊಂಡ ಕಡತವೇ ನಾಪತ್ತೆ ಆಗಿದೆ ಆದರೆ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ.ಇದರಲ್ಲಿ ಕೆಲವು ಸದಸ್ಯರು ಶಾಮೀಲಾಗಿದ್ದು,ಭ್ರಷ್ಟಾಚಾರ ನಡೆಸಿದ್ದಾರೆಂದು ಗಂಭೀರ ಆರೋಪ ಮಾಡಿದರು. ಕಡತ ನಾಪತ್ತೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ವ್ಯಕ್ತಿಯನ್ನು ಪುನಃ ಕೆಲಸಕ್ಕೆ ತೆಗೆದುಕೊಳ್ಳುವ ಬಗ್ಗೆ ತೆರೆಮರೆಯಲ್ಲಿ ಪ್ರಯತ್ನಗಳು ನಡೆಯುತ್ತಿವೆ ಎಂದರು. ಪಂಚಾಯಿತಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನಾಂಗದವರಿಗೆ ಸರಿಯಾದ ಸೌಲಭ್ಯ ದೊರಕುತ್ತಿಲ್ಲ ಎಂದ ಅವರು 17 ಲಕ್ಷ ಅನುದಾನವಿದ್ದರೂ ಕೇವಲ ಒಬ್ಬ ಫಲಾನುಭವಿಯನ್ನು ಆಯ್ಕೆ ಮಾಡಿದ್ದಾರೆ ಎಂದು ಆರೋಪಿಸಿದರು.
ಪ್ರಸ್ತುತ ಪಂಚಾಯ್ತಿಯಲ್ಲಿರುವ ಸಿಬ್ಬಂದಿಗಳ ವರ್ತನೆ ಬದಲಾಯಿಸಲು ಸಾಧ್ಯವೇ ಇಲ್ಲಾ ಎನ್ನುವಂತಾಗಿದೆ,ಎಲ್ಲಿ ನಮ್ಮ ಖಡತ ಕಾಣೆಯಾಗಿಬಿಡುತ್ತೆ ಎಂಬ ಭಯದಿಂದ ಸಾರ್ವಜನಿಕರು ಖಚೇರಿಗೆ ಅರ್ಜಿ ಅಥವಾ ದಾಖಲಾತಿಗಳನ್ನು ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದರು.ಇಲ್ಲಿನ ಪರಿಸ್ಥಿತಿ ಅರಿತು ಮುಖ್ಯಾಧಿಕಾರಿಗಳಾಗಿ ದ್ದವರು ವರ್ಗಾವಣೆ ಪಡೆದು ಹೋಗುತ್ತಿದ್ದಾರೆ. ಪಟ್ಟಣದಲ್ಲಿ ರಸ್ತೆಗಳೆಲ್ಲಾ ಗುಂಡಿಬಿದ್ದುಹೋಗಿದೆ ಅದನ್ನು ಮುಚ್ಚುವ ಕೆಲಸ ಮಾಡಿಲ್ಲ, ಖಾಸಗಿ ಬಸ್ಸುನಿಲ್ದಾಣ ಹಾಗೂ ಮಾರುಕಟ್ಟೆ ಸಮೀಪವಿರುವ ಶೌಚಾಲಯಗಳು ಗಬ್ಬೆದ್ದು ನಾರುತಿವೆ ಅದನ್ನು ಸರಿಪಡಿಸುವ ಬದಲು ಆಗಾಗ ಬಣ್ಣ ಬಳಿಯುತ್ತಾರೆ ಬಿಲ್ ಮಾಡುತ್ತಿರುತ್ತಾರೆ ಎಂದು ವ್ಯಂಗ್ಯವಾಡಿದರು. ಹೈಟೆಕ್ ಮಾರುಕಟ್ಟೆಯ ಬಳಿ ಅವಶ್ಯವಿಲ್ಲದಿದ್ದರೂನಿರ್ಮಿಸಿರುವ ಕಾಂಕ್ರಿಟ್ ರಸ್ತೆ ಕಳಪೆಯಿಂದ ಕೂಡಿದೆ ಎಂದು ಹಿಂದೆಯೇ ಹೇಳಿದ್ದೂ ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದ ಅವರು ರಸ್ತೆಯಲ್ಲಿ ಹೊಂದುವಾಗಿದ್ದು ಇತ್ತೀಚೆಗೆ ವಾಹನವೊಂದು ಕೆಳಗೆ ಬೀಳುವಂತಾಗಿತ್ತು ಎಂದರು.ಇಂದಿರಾ ಕ್ಯಾಂಟೀನ್ ನಲ್ಲಿ ಆರಂಭದಲ್ಲಿ ಉತ್ತಮ ಆಹಾರ ನೀಡುತ್ತಿದ್ದರು. ಈಗ ಸರಿಯಾಗಿ ನೀಡುತ್ತಿಲ್ಲ ಈ ಬಗ್ಗೆ ಪಟ್ಟಣ ಪಂಚಾಯ್ತಿ ಗಮನ ಹರಿಸುತ್ತಿಲ್ಲವೆಂದ ಅವರು ಕೆಲವೆಡೆ ರಸ್ತೆ ಬದಿಯಲ್ಲಿ ಕಸಸುರಿಯುತಿದ್ದಾರೆ,ನಾಯಿ,ದನಗಳ ಹಾವಳಿ ಮಿತಿಮೀರಿದೆ ಎಂದರು. ಪಟ್ಟದ ಸಮಸ್ಯೆಗಳ ಬಗ್ಗೆ ಮಾನ್ಯ ಶಾಸಕರು ಮಧ್ಯಪ್ರವೇಶಿಸಬೇಕು,ಗಮನಹರಿಸಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ದಲಿತ ಮುಖಂಡರುಗಳಾದ ಹೆಚ್.ಜಿ.ರಘು,ಸಿ.ಕೆ.ಜಗದೀಶ್,ಎಸ್.ಎನ್.ರಾಜು,ಹೆಚ್.ಜಿ.ರವೀಂದ್ರ ಉಪಸ್ತಿತರಿದ್ದರು.