ಸೋಮವಾರಪೇಟೆ:ಸಂಜೆ ಸುರಿದ ಧಾರಾಕಾರ ಮಳೆಗೆ ಮನೆಗೆ ನುಗ್ಗಿದ ನೀರು
ಸೋಮವಾರಪೇಟೆ:- ಪಟ್ಟಣದಲ್ಲಿ ಇಂದು ಸಂಜೆ ಧಾರಾಕಾರ ಮಳೆ ಸುರಿದು ಅವಾಂತರ ಸೃಷ್ಟಿಸಿದೆ. ಬೆಳಗಿನಿಂದ ಸಾಧಾರಣ ಬಿಸಿಲಿನ ವಾತಾವರಣವಿದ್ದು ಮಳೆ ಬರುವ ಮುನ್ಸೂಚನೆ ಇರಲಿಲ್ಲ.ಸಂಜೆ 4ಗಂಟೆಯ ನಂತರ ಇದ್ದಕಿದ್ದಂತೆ ಧಾರಾಕಾರವಾಗಿ ಸುರಿಯಲಾರಂಭಿಸಿತು.ಒಂದಷ್ಟು ಹೊತ್ತು ವಾಹನಗಳು ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಪಟ್ಟಣದ ಅಲೆಕಟ್ಟೆ ರಸ್ತೆಯ ಆರ್.ಎಂ.ಸಿ ಮಾರುಕಟ್ಟೆ ಮುಂಭಾಗದಲ್ಲಿ ಕಕ್ಕೆ ಸೇರುವ ಕೊಲ್ಲಿ ಕಟ್ಟಿಕೊಂಡ ಪರಿಣಾಮ ಪಕ್ಕದಲ್ಲಿಯೇ ಅಡುಗೆ ನಿಂಗರಾಜು ಎಂಬುವರ ಮನೆಯೊಳಗೆ ನೀರು ನುಗ್ಗಿ,ಮನೆ,ವಾಹನಗಳು ಜಲಾವೃತಗೊಂಡು ಮನೆಯ ಹಲವು ವಸ್ತುಗಳು ನೀರಿಗೆ ಆಹುತಿಯಾಗಿದೆ. ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.