ಟಿವಿ ಆಫ್ ಮಾಡಿ ಕಣ್ಣಿಗೆ ಡ್ರಾಪ್ಸ್ ಹಾಕಲು ಹೇಳಿದ್ದಕ್ಕೆ ತಂದೆಯನ್ನೇ ಇರಿದು ಕೊಂದ ಮಗ!

Oct 4, 2025 - 11:45
 0  1.4k
ಟಿವಿ ಆಫ್ ಮಾಡಿ ಕಣ್ಣಿಗೆ ಡ್ರಾಪ್ಸ್  ಹಾಕಲು ಹೇಳಿದ್ದಕ್ಕೆ ತಂದೆಯನ್ನೇ ಇರಿದು ಕೊಂದ ಮಗ!
Photo credit: INDIA TODAY

ಪುಣೆ: ಟಿವಿ ಆಫ್ ಮಾಡಿ ಕಣ್ಣಿಗೆ ಡ್ರಾಪ್ಸ್ ಹಾಕಲು ಹೇಳಿದ್ದಕ್ಕೆ ತಂದೆಯನ್ನೇ ಮಗ ಇರಿದು ಕೊಂದ ಘಟನೆ ಪುಣೆಯಲ್ಲಿ ನಡೆದಿದೆ.

 ತಾನಾಜಿ ಪೈಗುಡೆ ಮೃತಪಟ್ಟವರು. ಆರೋಪಿಯನ್ನು ಕೊಥ್ರುಡ್ ಪ್ರದೇಶದ ನಿವಾಸಿ ಸಚಿನ್ ಪೈಗುಡೆ ಎಂದು ಗುರುತಿಸಲಾಗಿದೆ.

ತಾನಾಜಿ ಪೈಗುಡೆಯವರು ತಮ್ಮ ಮಗ ಸಚಿನ್ ಪೈಗುಡೆಗೆ “ಟಿವಿ ಆಫ್ ಮಾಡಿ ಕಣ್ಣಿನ ಡ್ರಾಪ್ಸ್ ಹಾಕು”ವಂತೆ ಹೇಳಿದಾಗ ಮಗ ಅವರೊಂದಿಗೆ ತೀವ್ರ ವಾಗ್ವಾದಕ್ಕಿಳಿದಿದ್ದಾನೆ. ಮಾತಿನ ಚಕಮಕಿಯು ವಿಕೋಪಕ್ಕೆ ತಿರುಗಿ, ಸಚಿನ್ ಅಡಿಗೆ ಮನೆಯಲ್ಲಿದ್ದ ಚಾಕುವಿನಿಂದ ತಂದೆಯ ಮೇಲೆ ದಾಳಿ ನಡೆಸಿದ್ದಾನೆ.

ಈ ವೇಳೆ ತಾನಾಜಿ ಪೈಗುಡೆ ಅವರ ಮುಖ ಮತ್ತು ಕುತ್ತಿಗೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 ಘಟನೆಯ ನಂತರ, ಸಚಿನ್ ನ ತಾಯಿ ಸುಮನ ಪೈಗುಡೆ ಪೊಲೀಸರಿಗೆ ದೂರು ನೀಡಿದ್ದು, ಕೊಥ್ರುಡ್ ಪೊಲೀಸರು ಆರೋಪಿಯನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

What's Your Reaction?

Like Like 2
Dislike Dislike 1
Love Love 2
Funny Funny 1
Angry Angry 2
Sad Sad 3
Wow Wow 0