ಮಾಲಂಬಿ ಗ್ರಾಮ ದೇವತಾ ದೇವಾಲಯದಲ್ಲಿ ವಿಶೇಷ ಪೂಜೆ
admincoorgdaily

ಶನಿವಾರಸಂತೆ :ಸಮೀಪದ ಮಾಲಂಬಿ ಗ್ರಾಮ ದೇವತಾ ದೇವಾಲಯ ಪುನರ್ ಪ್ರತಿಷ್ಠಾಪನೆಯಾಗಿ 48ದಿನ ಕಳೆದ ನಂತರ ಮಂಗಳವಾರ ರಾತ್ರಿ ದೇವರ ಗುಡಿಯಲ್ಲಿ ಮಳೆ ಹಾಗೂ ಬೆಳೆ ಸರಿಯಾದ ಸಮಯಕ್ಕೆ ಬಂದು ಎಲ್ಲಾ ರೀತಿಯ ಸಂಕಷ್ಟದಿಂದ ಭಕ್ತರು ಪಾರಾಗಲಿ ಎಂದು ಹೋಮ ಹವನ ಹಾಗೂ ಪೂಜಾ ವಿಧಿವಿದಾನಗಳು ನೆರವೇರಿತು.
ದೇವರ ಮೂರ್ತಿಯನ್ನು ಹೂವಿನಿಂದ ಅಲಂಕರಿಸಿ ನಂತರ ಹಾಲು, ಮೊಸರು, ಎಳನೀರು, ಜೇನು ಸೇರಿದಂತೆ ಇನ್ನಿತರ ಅಭಿಷೇಕ ಮಹಾ ಮಂಗಳಾರತಿ ಪ್ರಸಾದ ವಿನಿಯೋಗ ನೆರವೇರಿತು ಪೂಜಾ ವಿಧಿವಿಧಾನಗಳನ್ನು ಅರ್ಚಕರಾದ ಮಾಲತೇಶ್ ಭಟ್ ಹಾಗೂ ಸುಹಾಸ್ ಭಟ್ ನೆರವೇರಿಸಿದರು ಈ ಸಂದರ್ಭದಲ್ಲಿ ಸಮಿತಿ ಸದಸ್ಯರು ಹಾಗೂ ಮಾಲಂಬಿ ಹಾಗೂ ಸುತ್ತಮುತ್ತಲಿನ ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.