ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2026 ವೇಳಾಪಟ್ಟಿ ಪರಿಷ್ಕರಣೆ:ಎನ್ಯುಮರೇಶನ್ ಫಾರ್ಮ್ ಹಿಂತಿರುಗಿಸಲು ಆಗಸ್ಟ್ 8 ಕೊನೆ ದಿನ

Jul 15, 2026 - 18:48
 0  70
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2026 ವೇಳಾಪಟ್ಟಿ ಪರಿಷ್ಕರಣೆ:ಎನ್ಯುಮರೇಶನ್ ಫಾರ್ಮ್ ಹಿಂತಿರುಗಿಸಲು ಆಗಸ್ಟ್ 8 ಕೊನೆ ದಿನ

ಬೆಂಗಳೂರು: ಮುಖ್ಯ ಚುನಾವಣಾಧಿಕಾರಿಯವರ ಕಚೇರಿ, ಕರ್ನಾಟಕವು 2026ರ ವಿಶೇಷ ಸಮಗ್ರ ಪರಿಷ್ಕರಣೆ - SIR ವೇಳಾಪಟ್ಟಿಯನ್ನು ಪರಿಷ್ಕರಿಸಿ ಆದೇಶ ಹೊರಡಿಸಿದೆ. ಭಾರತ ಚುನಾವಣಾ ಆಯೋಗದ ಪತ್ರ ಸಂಖ್ಯೆ 23/2026-ERS (Vol.II) ದಿನಾಂಕ 15.07.2026 ರಂತೆ ಈ ಪರಿಷ್ಕೃತ ವೇಳಾಪಟ್ಟಿ ಜಾರಿಯಾಗಿದೆ ಎಂದು ಜಂಟಿ ಮುಖ್ಯ ಚುನಾವಣಾಧಿಕಾರಿ ಅವರು ತಿಳಿಸಿದ್ದಾರೆ.

ಮನೆ ಮನೆ ಭೇಟಿ - BLO ಗಳಿಂದ 30.06.2026 ರಿಂದ 08.08.2026, Rationalization/Re-arrangement 08.08.2026, ಕರಡು ಪ್ರಕಟಣೆ 17.08.2026 ಕ್ಲೈಮ್ ಮತ್ತು ಆಕ್ಷೇಪ ಸಲ್ಲಿಸಲು ಅವಧಿ 17.08.2026 ರಿಂದ 16.09.2026, ಕ್ಲೈಮ್ ಮತ್ತು ಆಕ್ಷೇಪ ವಿಲೇವಾರಿ 17.08.2026 ರಿಂದ 15.10.2026,ಅಂತಿಮ ಪ್ರಕಟಣೆ 19.10.2026 ಸೋಮವಾರ,

ಮನೆ ಮನೆ ಭೇಟಿ: ಜೂನ್ 30 ರಿಂದ ಆಗಸ್ಟ್ 8 ರವರೆಗೆ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ತೆರಳಲಿದ್ದಾರೆ. ಕರಡು ಪಟ್ಟಿ,ಆಗಸ್ಟ್ 17 ರಂದು ಪ್ರಕಟವಾಗಲಿದೆ. ಆಕ್ಷೇಪಣೆ*: ಸೆಪ್ಟೆಂಬರ್ 16 ರವರೆಗೆ ಹೆಸರು ಸೇರ್ಪಡೆ/ತಿದ್ದುಪಡಿ/ಕೈಬಿಡಲು ಅರ್ಜಿ ಸಲ್ಲಿಸಬಹುದು. ಅಂತಿಮ ಮತದಾರರ ಪಟ್ಟಿ‌ಅಕ್ಟೋಬರ್ 19 ರಂದು ಪ್ರಕಟವಾಗಲಿದೆ. ರಾಜ್ಯದ ಎಲ್ಲಾ ಜಿಲ್ಲಾ ಚುನಾವಣಾಧಿಕಾರಿಗಳು, ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ವೇಳಾಪಟ್ಟಿಯಂತೆ SIR-2026 ಕಾರ್ಯವನ್ನು ನಿಯಮಾನುಸಾರ ಕೈಗೊಳ್ಳುವಂತೆ ಮುಖ್ಯ ಚುನಾವಣಾಧಿಕಾರಿಯವರ ಕಚೇರಿ ಸೂಚಿಸಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0