Kodagu

ಸ್ವಾತಂತ್ರ್ಯೋತ್ಸವದ ಅಂಗವಾಗಿ ಬಿಎಸ್‍ಎನ್‍ಎಲ್‍ನಿಂದ ವಿಶೇಷ ಕೊಡುಗೆ

admincoorgdaily

ಸ್ವಾತಂತ್ರ್ಯೋತ್ಸವದ ಅಂಗವಾಗಿ ಬಿಎಸ್‍ಎನ್‍ಎಲ್‍ನಿಂದ ವಿಶೇಷ ಕೊಡುಗೆ

ಮಡಿಕೇರಿ ಆ.14:-80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬಿಎಸ್‍ಎನ್‍ಎಲ್ ವತಿಯಿಂದ ಗ್ರಾಹಕರಿಗೆ ವಿಶೇಷ ಕೊಡುಗೆ ಘೋಷಿಸಲಾಗಿದ್ದು, ಆಗಸ್ಟ್ 12 ರಿಂದ ಸೆಪ್ಟೆಂಬರ್ 12 ರವರೆಗೆ ಹೊಸ ಸಂಪರ್ಕ ಪಡೆಯುವ ಗ್ರಾಹಕರಿಗೆ ಉಚಿತ 4ಜಿ ಸಿಮ್ ನೀಡಲಾಗುವುದು ಎಂದು ಬಿಎಸ್‍ಎನ್‍ಎಲ್ ಕೊಡಗು ಟೆಲಿಕಾಂ ಜಿಲ್ಲಾ ವ್ಯವಸ್ಥಾಪಕ ಡಾ. ಬಿ.ಆರ್. ಉನ್ನಿಕೃಷ್ಣನ್ ತಿಳಿಸಿದ್ದಾರೆ.

ಹೊಸ ಸಂಪರ್ಕಕ್ಕೆ ರೂ.1 ರ ಮೊದಲ ರೀಚಾರ್ಜ್ ಮಾಡಿಸಿದ ಗ್ರಾಹಕರಿಗೆ 28 ದಿನಗಳವರೆಗೆ ಯಾವುದೇ ನೆಟ್‍ವರ್ಕ್‍ಗೆ ಅನಿಯಮಿತ ಕರೆ, ಪ್ರತಿದಿನ 1 ಜಿಬಿ ಹೈಸ್ಪೀಡ್ ಡೇಟಾ ಹಾಗೂ 100 ಎಸ್‍ಎಂಎಸ್ ಉಚಿತವಾಗಿ ದೊರೆಯಲಿದೆ. ಬಿಎಸ್‍ಎನ್‍ಎಲ್ ಗ್ರಾಹಕರು ಬಿಎಸ್‍ಎನ್‍ಎಲ್ ಸೆಲ್ಫ್‍ಕೇರ್ ಆ್ಯಪ್ ಮೂಲಕ ಸಾವಿರಕ್ಕೂ ಅಧಿಕ ಲೈವ್ ಚಾನೆಲ್‍ಗಳು, ಚಲನಚಿತ್ರಗಳು, ವೆಬ್ ಸೀರೀಸ್, ಸಂಗೀತ, ಭಕ್ತಿಗೀತೆ ಸೇರಿದಂತೆ ವಿವಿಧ ಸೇವೆಗಳನ್ನು ಉಚಿತವಾಗಿ ಪಡೆಯಬಹುದಾಗಿದೆ.

ಇತರ ಮೊಬೈಲ್ ನೆಟ್‍ವರ್ಕ್‍ಗಳಿಂದ ಬಿಎಸ್‍ಎನ್‍ಎಲ್‍ಗೆ ಮೊಬೈಲ್ ಸಂಖ್ಯೆಯನ್ನು ಬದಲಾಯಿಸದೆ ಪೋರ್ಟ್ ಮಾಡಿಕೊಳ್ಳುವ ಅವಕಾಶವೂ ಇದೆ. ಇದಕ್ಕಾಗಿ ಸಮೀಪದ ಗ್ರಾಹಕ ಸೇವಾ ಕೇಂದ್ರ ಅಥವಾ ಬಿಎಸ್‍ಎನ್‍ಎಲ್ ರೀಟೇಲರ್‍ರನ್ನು ಸಂಪರ್ಕಿಸಬಹುದು. ಹೊಸ ಸಿಮ್‍ಗಳನ್ನು ಬಿಎಸ್‍ಎನ್‍ಎಲ್ ಸೆಲ್ಫ್‍ಕೇರ್ ಆ್ಯಪ್ ಅಥವಾ 1800 4444 ವಾಟ್ಸ್ ಆ್ಯಪ್ ಸಂಖ್ಯೆಯ ಮೂಲಕವೂ ಕಾಯ್ದಿರಿಸಬಹುದಾಗಿದೆ. 

ವಿಶೇಷ ಕೊಡುಗೆಯಾಗಿ ರೂ.2,399ರ ಬಿಎಸ್‍ಎನ್‍ಎಲ್ ರೀಚಾರ್ಜ್‍ನ ಮಾನ್ಯತೆಯನ್ನು 412 ದಿನಗಳಿಗೆ ವಿಸ್ತರಿಸಲಾಗಿದ್ದು, ಈ ಪ್ಲಾನ್‍ನಲ್ಲಿ ಪ್ರತಿದಿನ 2 ಜಿಬಿ ಡೇಟಾ, ಅನಿಯಮಿತ ಕರೆ ಹಾಗೂ ದಿನಕ್ಕೆ 100 ಎಸ್‍ಎಂಎಸ್ ಸೌಲಭ್ಯ ಲಭ್ಯವಾಗಲಿದೆ.

ಕೊಡಗು ಜಿಲ್ಲೆಯಲ್ಲಿ ಬಿಎಸ್‍ಎನ್‍ಎಲ್‍ನ ಸ್ವದೇಶಿ 4ಜಿ ನೆಟ್‍ವರ್ಕ್ ಮೂಲಕ ವೇಗದ ಡೇಟಾ ಹಾಗೂ ಉತ್ತಮ ಧ್ವನಿ ಸಂಪರ್ಕ ಕಲ್ಪಿಸಲಾಗುತ್ತಿದೆ. ಡಿಜಿಟಲ್ ಭಾರತ ನಿಧಿಯಡಿ 47 ಹೊಸ 4ಜಿ ಟವರ್‍ಗಳನ್ನು ಸ್ಥಾಪಿಸಲಾಗಿದ್ದು, ಮೊಬೈಲ್ ಸೇವೆ ಲಭ್ಯವಿಲ್ಲದ ಗ್ರಾಮಗಳಿಗೂ 4ಜಿ ಸಂಪರ್ಕ ವಿಸ್ತರಿಸಲಾಗಿದೆ. ಜಿಲ್ಲೆಯಲ್ಲಿ 196ಕ್ಕೂ ಅಧಿಕ ಮೊಬೈಲ್ ಟವರ್‍ಗಳಿದ್ದು, ವಾಸಯೋಗ್ಯ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. 

ಇದೇ ವೇಳೆ ಕೊಡಗು ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಹೈಸ್ಪೀಡ್ ಫೈಬರ್ ಟು ದಿ ಹೋಮ್ ಸೇವೆ ವಿಸ್ತರಿಸಲಾಗಿದ್ದು, ಕೈಗೆಟುಕುವ ದರದಲ್ಲಿ ಅನಿಯಮಿತ ಧ್ವನಿ ಕರೆ, ಹೈಸ್ಪೀಡ್ ಅನಿಯಮಿತ ಡೇಟಾ ಹಾಗೂ ವೈ-ಫೈ ಸೌಲಭ್ಯ ಒದಗಿಸಲಾಗುತ್ತಿದೆ. ಎಫ್‍ಟಿಟಿಹೆಚ್ ಸಂಪರ್ಕಕ್ಕಾಗಿ 1800 4444 ವಾಟ್ಸ್ ಆ್ಯಪ್ ಸಂಖ್ಯೆ ಅಥವಾ 08272-223800ಗೆ ಕರೆ ಮಾಡಬಹುದಾಗಿದೆ.

ಸ್ವಾತಂತ್ರ್ಯೋತ್ಸವ ವಿಶೇಷ ಕೊಡುಗೆಯಡಿ ರೂ.399ರ ಎಫ್‍ಟಿಟಿಹೆಚ್ ಯೋಜನೆ ಆಯ್ಕೆ ಮಾಡಿಕೊಳ್ಳುವ ಹೊಸ ಗ್ರಾಹಕರಿಗೆ ಒಂದು ತಿಂಗಳ ಸೇವೆ ಉಚಿತವಾಗಿದ್ದು, ನಂತರದ ಮೂರು ತಿಂಗಳ ಬಿಲ್‍ನಲ್ಲಿ ತಲಾ ರೂ.100 ರಿಯಾಯಿತಿ ದೊರೆಯಲಿದೆ. ರೂ.499ರ ಯೋಜನೆಯಲ್ಲಿ 60 ಎಂಬಿಪಿಎಸ್ ವೇಗದ ಅನಿಯಮಿತ ಡೇಟಾ ಹಾಗೂ ಯಾವುದೇ ನೆಟ್‍ವರ್ಕ್‍ಗೆ ಅನಿಯಮಿತ ಕರೆ ಸೌಲಭ್ಯವಿದೆ.

ಇದಲ್ಲದೆ ಪ್ರಮುಖ ರೈಲು ನಿಲ್ದಾಣಗಳು, ತಾಲ್ಲೂಕು ಕೇಂದ್ರಗಳು, ಬಸ್ ನಿಲ್ದಾಣಗಳು, ಆಸ್ಪತ್ರೆಗಳು ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಉಚಿತ ವೈ-ಫೈ ರೋಮಿಂಗ್ ಸೌಲಭ್ಯ ಕಲ್ಪಿಸುವ ಯೋಜನೆಯನ್ನೂ ಬಿಎಸ್‍ಎನ್‍ಎಲ್ ಹೊಂದಿದೆ ಎಂದು ಡಾ. ಬಿ.ಆರ್.ಉನ್ನಿಕೃಷ್ಣನ್ ತಿಳಿಸಿದ್ದಾರೆ. 

ಹೆಚ್ಚಿನ ಮಾಹಿತಿಗಾಗಿ ಬಿಎಸ್‍ಎನ್‍ಎಲ್ ಕೊಡಗು ಟೆಲಿಕಾಂ ಜಿಲ್ಲಾ ಕಚೇರಿಯನ್ನು 08272-223800 ಸಂಖ್ಯೆಯಲ್ಲಿ ಸಂಪರ್ಕಿಸಬಹುದು.