ಭಾರತೀಯ ಕ್ರೀಡಾ ಪ್ರಾಧಿಕಾರದ, ನೇತಾಜಿ ಸುಭಾಷ್ ದಕ್ಷಿಣ ಕೇಂದ್ರಕ್ಕೆ ಶಾಸಕ ಎಎಸ್ ಪೊನ್ನಣ್ಣ ಭೇಟಿ

Jan 13, 2026 - 11:28
 0  260
ಭಾರತೀಯ ಕ್ರೀಡಾ ಪ್ರಾಧಿಕಾರದ, ನೇತಾಜಿ ಸುಭಾಷ್ ದಕ್ಷಿಣ ಕೇಂದ್ರಕ್ಕೆ ಶಾಸಕ ಎಎಸ್  ಪೊನ್ನಣ್ಣ ಭೇಟಿ

ಬೆಂಗಳೂರು; ಭಾರತೀಯ ಕ್ರೀಡಾ ಪ್ರಾಧಿಕಾರದ, ನೇತಾಜಿ ಸುಭಾಷ್ ದಕ್ಷಿಣ ಕೇಂದ್ರಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಶಾಸಕರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ರವರು ಭೇಟಿ ನೀಡಿದರು.

ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕ್ರೀಡಾಪಟುಗಳ ಸಾಧನೆ, ಕ್ರೀಡಾ ಕೊಠಡಿ, ಕ್ರೀಡೆಗೆ ಸಂಬಂಧಿತ ಉಪಕರಣಗಳು, ಸುಸಜ್ಜಿತ ಕ್ರೀಡಾಂಗಣಾದ ಒಳ ಹಾಗೂ ಹೊರ ನೋಟವನ್ನು ವೀಕ್ಷಿಸಿದರು. ಕ್ರೀಡಾಪಟುಗಳನ್ನು ಭೇಟಿ ಮಾಡಿ ಭವಿಷ್ಯದಲ್ಲಿ ಉನ್ನತ ಸಾಧನೆ ಮಾಡುವಂತೆ ಎಂದು ಪ್ರೋತ್ಸಾಹಿಸಿದರು.

 ಇದೇ ಸಂದರ್ಭದಲ್ಲಿ ಕ್ರೀಡಾ ಪ್ರಾಧಿಕಾರದ ನಿರ್ದೇಶಕರಾದ ವಿಷ್ಣು ಸುಧಾಕರನ್, ನಿಕಟ ಪೂರ್ವ ನಿರ್ದೇಶಕರಾದ ಎಂ.ಕೆ ಗಣೇಶನ್ ಹಾಗೂ ಹಿರಿಯ ಕ್ರೀಡಾಪಟುಗಳು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0