ರೋಟರ್ಯಾಕ್ಟ್ ಜಿಲ್ಲಾ ಪ್ರತಿನಿಧಿಯಾಗಿ ಕೊಡಗಿನ ಶ್ರೀರಕ್ಷಾ ಅಧಿಕಾರ ಸ್ವೀಕಾರ
ಮಡಿಕೇರಿ ಆ. 4 - ರೋಟರ್ಯಾಕ್ಟ್ ಜಿಲ್ಲೆ 3181 ನ ಜಿಲ್ಲಾ ಪ್ರತಿನಿಧಿಯಾಗಿ ಕೊಡಗು ಮೂಲದ ಶ್ರೀರಕ್ಷಾ ಮೈಸೂರಿನಲ್ಲಿ ಆಯೋಜಿತ ಸಮಾರಂಭದಲ್ಲಿ ತನ್ನ ತಂಡದೊಂದಿಗೆ ಪದಗ್ರಹಣ ಸ್ವೀಕರಿಸಿದರು.
ಮೈಸೂರಿನ ಶ್ರೀ ಕಂಠೀರವ ನರಸಿಂಹರಾಜ ಸ್ಪೋಟ್ಸ್೯ ಕ್ಲಬ್ ನಲ್ಲಿ ಆಯೋಜಿತ ಸಮಾರಂಭದಲ್ಲಿ ರೋಟರ್ಯಾಕ್ಟ್ ಗೆ ಸೇರಿದ 56 ಸಂಸ್ಥೆಗಳಿಗೆ ಜಿಲ್ಲಾ ಪ್ರತಿನಿಧಿಯಾಗಿ ನೇಮಕಗೊಂಡ ಶ್ರೀರಕ್ಷಾ ಮತ್ತು ಕಾಯ೯ದಶಿ೯ಯಾಗಿ ನೇಮಕಗೊಂಡ ಮೂಕಳೇರ ತುಳಸಿ ತಂಗಮ್ಮ ಅವರಿಗೆ ರೋಟರಿ ಗವನ೯ರ್ ಸತೀಶ್ ಬೋಳಾರ್ ಪದಗ್ರಹಣ ನೀಡಿದರು.
ನಾಪೋಕ್ಲುವಿನ ಹಿರಿಯ ಪತ್ರಕತ೯ ಪ್ರಭಾಕರ್ ಮತ್ತು ಅಶ್ವಿನಿ ದಂಪತಿ ಪುತ್ರಿಯಾದ ಶ್ರೀರಕ್ಷಾ ಅಧಿಕಾರ ಸ್ವೀಕರಿಸಿ ಮಾತನಾಡಿ, , ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಯಿಂದ ರೋಟರ್ಯಾಕ್ಟ್ ನ ಈ ಪ್ರಮುಖ ಹುದ್ದೆಗೆ ನೇಮಕಗೊಂಡ ಸಂತೋಷ ತನ್ನದಾಗಿದ್ದು, ಸಾಕಷ್ಟು ಯೋಜನೆಗಳೊಂದಿಗೆ ಯುವತಂಡದ ನೆರವಿನೊಂದಿಗೆ ಜನಸೇವೆಗೆ ಮುಂದಾಗುವುದಾಗಿ ಭರವಸೆ ನೀಡಿದರು.
ಮಾಜಿ ಸೈನಿಕರಿಗೆ ನೆರವು, ಪರಿಸರ ಸಂರಕ್ಷಣೆಗಾಗಿ ಮ್ಯಾರಾಥಾನ್, ಆಥಿ೯ಕ ನಿಧಿ ಸಂಗ್ರಹ, ಕನ್ನಡ ನಾಡು ನುಡಿಗಗಿ ಕಾಯ೯ಕ್ರಮಗಳೂ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೊಳಿಸುವುದಾಗಿಯೂ ಶ್ರೀರಕ್ಷಾ ನುಡಿದರು. ಮೂನಾ೯ಡು ವಿದ್ಯಾಸಂಸ್ಥೆಯಲ್ಲಿ ರೋಟರ್ಯಾಕ್ಟ್ ಅಧ್ಯಕ್ಷೆಯಾಗಿ 4 ವಷ೯ಗಳ ಹಿಂದೆ ಪ್ರಾರಂಭವಾದ ರೋಟರ್ಯಾಕ್ಟ್ ಪಯಣದಲ್ಲಿ ಈಗ ಮುಖ್ಯ ಹುದ್ದೆ ದೊರಕುವಲ್ಲಿ ಕಾರಣವಾಗಿದೆ. ಸೇವಾ ಕಾಯ೯ಯೋಜನೆಗಳಲ್ಲಿ ಆಗ ಸಸಿಯಾಗಿದ್ದವಳು, ಈಗ ಗಿಡವಾಗಿ ಬೆಳೆಯುತ್ತಿದ್ದೇನೆ ಎಂದರು.
ರೋಟರಿ ಜಿಲ್ಲಾ ಗವನ೯ರ್ ಸತೀಶ್ ಬೋಳಾರ್ ಮಾತನಾಡಿ,ಯುವಪೀಳಿಗೆಯವರು ಸಾಮಾಜಿಕ ಕಳಕಳಿಯೊಂದಿಗೆ ಸೇವಾ ಗುಣ ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು. ನಿಯೋಜಿತ ರೋಟರಿ ಜಿಲ್ಲಾ ಗವನ೯ರ್ ಯಶಸ್ವಿ ಸೋಮಶೇಖರ್ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಪಾಠವನ್ನು ಕಲಿಸಿದರೆ ರೋಟರಿಯಂಥ ಸೇವಾ ಸಂಸ್ಥೆಗಳು ಜೀವನ ಮೌಲ್ಯವನ್ನು ಕಲಿಸುತ್ತವೆ ಎಂದರು.
ಮಾಜಿ ಗವನ೯ರ್ ಹೆಚ್.ಆರ್.ಕೇಶವ್ ಮಾತನಾಡಿ, ತಲಕಾವೇರಿಯಲ್ಲಿ ಉಗಮಿಸುವ ಕಾವೇರಿ ನದಿಯು ತನ್ನ ದಿಕ್ಕನ್ನು ಬದಿಲಿಸಿದ್ದರೆ ಬಹಳ ಹತ್ತಿರದಲ್ಲಿಯೇ ಕೇರಳದ ಸಮುದ್ರ ಸೇರಲು ಸಾಧ್ಯವಿತ್ತು, ಆದರೆ ಕಾವೇರಿ ನದಿಯು, ಜನರಿಗೆ ಪ್ರಯೋಜನಕಾರಿಯಾಗಬೇಕೆಂದೇ 720 ಕಿ.ಮೀ. ಕ್ರಮಿಸಿ ಎಲ್ಲರಿಗೂ ನೀರು ನೀಡಿ ತನ್ನ ಜೀವನ ಸಾಥ೯ಕಗೊಳಿಸಿದ್ದಾಳೆ. ಕಾವೇರಿಯ ಈ ನಡೆ ಎಲ್ಲರಿಗೂ ಸೇವಾ ಕಾಯ೯ಕ್ಕೆ ಮಾದರಿಯಾಗಬೇಕೆಂದರು.
ಚುನಾಯಿತ ರೋಟರಿ ಗವನ೯ರ್ ಡಾ.ಸೂಯ೯ನಾರಾಯಣ ಕೊಕ್ಕಾಡಿ, ರೋಟರಿ ಜಿಲ್ಲಾ ಕಾಯದಶಿ೯ ಗೋಪಾಲಕೖಷ್ಮ ಶೆಟ್ಟಿ, ರೋಟರಿ ಸಂಸ್ಥೆಗಳ ವಿಸ್ತರಣಾ ಸಮಿತಿ ಜಿಲ್ಲಾ ಅಧ್ಯಕ್ಷ ಅನಿಲ್ ಹೆಚ್.ಟಿ., ರೋಟರಿ ತರಬೇತುದಾರ ಡಾ.ಸಿ. ಆರ್.ಪ್ರಶಾಂತ್, ರೋಟರಿ ಮಡಿಕೇರಿ ವುಡ್ಸ್ ಸ್ಥಾಪಕಾಧ್ಯಕ್ಷ ಎಸ್.ಎಸ್. ಸಂಪತ್ ಕುಮಾರ್ ಹಾಜರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
