ಮಡಿಕೇರಿಯಲ್ಲಿ ಮಾಚ್೯ 28 ರಂದು ಶ್ರೀ ರಾಮೋತ್ಸವ; ಸಾಂಸ್ಕೖತಿಕ ಕಾಯ೯ಕ್ರಮಗಳಿಗೆ ಆಹ್ವಾನ

ಮಡಿಕೇರಿಯಲ್ಲಿ ಮಾಚ್೯ 28 ರಂದು ಶ್ರೀ ರಾಮೋತ್ಸವ; ಸಾಂಸ್ಕೖತಿಕ ಕಾಯ೯ಕ್ರಮಗಳಿಗೆ ಆಹ್ವಾನ

ಮಡಿಕೇರಿ ಮಾಚ್೯ 05 - ನಗರದ ಶ್ರೀ ಕೋದಂಡ ರಾಮದೇವಾಲಯ ಸಮಿತಿ ವತಿಯಿಂದ ಮಾಚ್೯ 28 ರಂದು ಶನಿವಾರ ಆಯೋಜಿತ ಶ್ರೀ ರಾಮನವಮಿ ಮಹೋತ್ಸವದ ಅಂಗವಾಗಿನ ಸಾಂಸ್ಕೖತಿಕ ಕಾಯ೯ಕ್ರಮಗಳಿಗೆ ಆಸಕ್ತ ಕಲಾತಂಡಗಳಿಂದ ಅಜಿ೯ ಆಹ್ವಾನಿಸಲಾಗಿದೆ.

 ನಗರದ ಗಾಂಧಿ ಮೈದಾನದಲ್ಲಿ ಮಾಚ್೯ 28 ರಂದು ಶನಿವಾರ ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಆಯೋಜಿತ ಸಾಂಸ್ಕೖತಿಕ ಕಾಯ೯ಕ್ರಮಗಳಿಗೆ ಜಿಲ್ಲೆಯ ಕಲಾವಿದರು, ಕಲಾತಂಡಗಳು ಪ್ರದಶ೯ನಕ್ಕೆ ಅಜಿ೯ ಸಲ್ಲಿಸಬಹುದು. ಭಕ್ತಿ ಮತ್ತು ದೇಶ ಪ್ರೇಮ ಸಂಬಂಧಿತ ಸಾಂಸ್ಕೖತಿಕ ಕಾಯ೯ಕ್ರಮಗಳಿಗೆ ಆದ್ಯತೆ. 1 ತಂಡಕ್ಕೆ ಕನಿಷ್ಟ 10 ನಿಮಿಷಗಳು ಮಾತ್ರ ಪ್ರದಶ೯ನಕ್ಕ ಅವಕಾಶ ಇರುತ್ತದೆ.

 ಸಾಂಸ್ಕೖತಿಕ ಸಮಿತಿಯ ಆಯ್ಕೆಯೇ ಅಂತಿಮವಾಗಿದ್ದು, ಅಜಿ೯ ಸಲ್ಲಿಸಲು ಮಾಚ್೯ 12 ಕೊನೇ ದಿನವಾಗಿದೆ. ಅಜಿ೯ಗಳನ್ನು ಶ್ರೀ ರಾಮೋತ್ಸವ ಸಾಂಸ್ಕೖತಿಕ ಕಾಯ೯ಕ್ರಮ ಸಮಿತಿ , ಕೇರಾಫ್ ಅಮೂಲ್ಯ ಎಂಟರ್ ಪ್ರೈಸರ್, ಶ್ರೀ ಓಂಕಾರೇಶ್ವರ ದೇವಾಲಯ ರಸ್ತೆ ಮಡಿಕೇರಿ - 571201 ಈ ವಿಳಾಸಕ್ಕೆ ಕಳುಹಿಸಬೇಕು ಎಂದು ಸಾಂಸ್ಕೖತಿಕ ಸಮಿತಿ ಅಧ್ಯಕ್ಷ ಅನಿಲ್ ಹೆಚ್.ಟಿ. ತಿಳಿಸಿದ್ದಾರೆ. . . ಹೆಚ್ಚಿನ ಮಾಹಿತಿಗೆ ಸಂಪಕ೯ ಹರಿಣಿ ವಿಜಯ್, ಸಂಚಾಲಕಿ,ಶ್ರೀ ರಾಮೋತ್ಸವ ಸಾಂಸ್ಕೖತಿಕ ಸಮಿತಿ. ಮಡಿಕೇರಿ. - 9740970840