ಶೃಂಗೇರಿಯ ವ್ಯಕ್ತಿಗೆ 3.27 ಕೋಟಿ ರೂ. ಆನ್‌ಲೈನ್ ಷೇರು ವಂಚನೆ!

Nov 28, 2025 - 22:08
 0  328
ಶೃಂಗೇರಿಯ ವ್ಯಕ್ತಿಗೆ 3.27 ಕೋಟಿ ರೂ. ಆನ್‌ಲೈನ್ ಷೇರು ವಂಚನೆ!

ಚಿಕ್ಕಮಗಳೂರು, ನ. 28: ಷೇರು ಮಾರ್ಕೆಟ್‌ ಎನ್ನುವ ಹೆಸರಿನಲ್ಲಿ ನಡೆಯುತ್ತಿರುವ ಸೈಬರ್ ದಂಧೆಗಳ ಪೈಕಿ ದೊಡ್ಡ ಮೊತ್ತದ ವಂಚನೆ ಪ್ರಕರಣವೊಂದು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ರಿಲಯನ್ಸ್ ಸೆಕ್ಯೂರಿಟೀಸ್ ಹೆಸರಿನಲ್ಲಿ ನಕಲಿ ಖಾತೆ ತೆರೆದು, ಶೃಂಗೇರಿ ಮೂಲದ 72 ವರ್ಷದ ಶಂಕರ್ ನಟರಾಜನ್ ಅವರಿಂದ ಒಟ್ಟಾರೆ 3 ಕೋಟಿ 27 ಲಕ್ಷ ರೂ. ಪಡೆಯಲಾಗಿದೆ. ಈ ಕುರಿತು ಚಿಕ್ಕಮಗಳೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂಡಿಯನ್ ಸ್ಟಾಕ್ ರಿಲಯನ್ಸ್ ಸೆಕ್ಯೂರಿಟೀಸ್ ಎಂಬ ಹೆಸರಿನಲ್ಲಿ ಅಪರಿಚಿತರು ವಾಟ್ಸಾಪ್‌ ಮೂಲಕ ಸಂಪರ್ಕಿಸಿ, ಹೂಡಿಕೆಯ ಮೇಲೆ ಹೆಚ್ಚಿನ ಲಾಭದ ಭರವಸೆ ನೀಡಿದ್ದರು ಎನ್ನಲಾಗಿದೆ. ವಾಟ್ಸಾಪ್‌ನಲ್ಲೇ ಕಂಪನಿಯ ನಕಲಿ ಲೋಗೋ ಬಳಸಿ ‘ನಿಮ್ಮ ಖಾತೆಗೆ 9 ಕೋಟಿ ರೂ ಸೇರ್ಪಡೆಯಾಗಿದೆ, ಅದನ್ನು ತೆಗೆಯಲು 1 ಕೋಟಿ 9 ಲಕ್ಷ ರೂ ಕಮಿಷನ್ ಅಗತ್ಯ’ ಎಂದು ಹೇಳಿ, ಹಂತಹಂತವಾಗಿ ಹಣ ವರ್ಗಾಯಿಸುವಂತೆ ಒತ್ತಾಯಿಸಿದ್ದಾರೆ.

ಈ ಪ್ರಕ್ರಿಯೆಯಲ್ಲಿ ನಟರಾಜನ್ ಒಟ್ಟಾರೆ 3.27 ಕೋಟಿ ರೂ ವಿವಿಧ ವಹಿವಾಟುಗಳ ಮೂಲಕ ಕಳುಹಿಸಿದ್ದರು. ಬಳಿಕ ಮಹಾರಾಷ್ಟ್ರದಲ್ಲಿರುವ ರಿಲಯನ್ಸ್ ಸೆಕ್ಯೂರಿಟೀಸ್ ಕಚೇರಿಗೆ ಭೇಟಿ ನೀಡಿದಾಗ, ತಮ್ಮ ಹೆಸರಿನಲ್ಲಿ ಯಾವುದೇ ಖಾತೆ ಇಲ್ಲವೆಂಬುದು ಗೊತ್ತಾಗಿದೆ. ವಂಚನೆ ಸಂಭವಿಸಿರುವುದು ಬೆಳಕಿಗೆ ಬಂದ ನಂತರ ದೂರು ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0