ಸ್ಟೇಟ್ ಸಬ್ ಜೂನಿಯರ್ ಹಾಕಿ: ಕೊಡಗಿನ ಆಟಗಾರರಿದ್ದ ಹಾವೇರಿ ತಂಡ ರನ್ನರ್ ಅಪ್
admincoorgdaily

ಮಡಿಕೇರಿ: ಇತ್ತೀಚೆಗೆ ಬಳ್ಳಾರಿಯಲ್ಲಿ ನಡೆದ ರಾಜ್ಯ ಸಬ್ ಜೂನಿಯರ್ ಅಂಡರ್ 16 ವಿಭಾಗದ ಬಾಲಕರ ಹಾಕಿ ಪಂದ್ಯಾವಳಿಯಲ್ಲಿ ಧಾರವಾಡ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಧಾರವಾಡ ತಂಡ ಹಾವೇರಿ ತಂಡದ ವಿರುದ್ಧ 4-2 ಗೊಲುಗಳಿಂದ ಜಯಗಳಿಸಿದೆ.
ವಿಶೇಷ ಅಂದರೆ ಕೂಡಿಗೆಯ ಡಿವೈಇಎಸ್ ಕ್ರೀಡಾ ಶಾಲೆಯ ಆರು ಮಂದಿ ಆಟಗಾರರು ಹಾವೇರಿ ತಂಡವನ್ನು ಪ್ರತಿನಿಧಿಸಿದ್ದರು.ಧಾರವಾಡ ತಂಡದಲ್ಲೂ ಮೂವರು ಕೊಡಗು ಮೂಲದ ಆಟಗಾರರಿದ್ದರು. ಇದಕ್ಕೂ ಮೊದಲು ನಡೆದ ಸೆಮಿಫೈನಲ್ ನಲ್ಲಿ ಹಾವೇರಿ ತಂಡ ಬಳ್ಳಾರಿ ತಂಡದ ಮೇಲೆ 2-1 ಗೋಲುಗಳಿಂದ ಜಯಗಳಿಸಿತು.

ಮತ್ತೊಂದು ಸೆಮಿಫೈನಲ್ ನಲ್ಲಿ ಧಾರವಾಡ ತಂಡ ಕೊಡಗು ತಂಡವನ್ನು 2-1 ಗೋಲುಗಳಿಂದ ಮಣಿಸಿ ಫೈನಲ್ ಪ್ರವೇಸಿಸಿತು. ಹಾವೇರಿ ತಂಡವನ್ನು ಕೂಡಿಗೆ ಡಿವೈಇಎಸ್ ಶಾಲೆಯ ಕುಟೈರಿರ ಪ್ರೀತಂ ದೇವಯ್ಯ, ಚೆಟ್ಟಿಮಾಡ ಪೂಜನ್, ಬಾಳೆಯಡ ತಿಮ್ಮಯ್ಯ, ಹರ್ಷ ಗೌಡ, ರಚಿತ್ ಗೌಡ ಡಿ.ಆರ್ ಹಾಗೂ ಅಮಿತ್ ಪ್ರತಿನಿಧಿಸಿದ್ದರು.