ರಾಜ್ಯ ಸರ್ಕಾರ ಶೇಕಡ 40ರಷ್ಟು ಭಾಗಂಶ ನೀಡಲು ಸಾಧ್ಯವಾಗದ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನದಲ್ಲಿ ವಿಬಿ-ಜಿ ರಾಮ್‌ಜಿ ಯೋಜನೆಯನ್ನು ವಿರೋಧಿಸುತ್ತಿದೆ; ಮಾಚಿಮಂಡ ಸುವಿನ್ ಗಣಪತಿ ಆರೋಪ

ರಾಜ್ಯ ಸರ್ಕಾರ ಶೇಕಡ 40ರಷ್ಟು  ಭಾಗಂಶ ನೀಡಲು ಸಾಧ್ಯವಾಗದ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನದಲ್ಲಿ ವಿಬಿ-ಜಿ ರಾಮ್‌ಜಿ ಯೋಜನೆಯನ್ನು ವಿರೋಧಿಸುತ್ತಿದೆ;  ಮಾಚಿಮಂಡ ಸುವಿನ್ ಗಣಪತಿ ಆರೋಪ
ಸುವಿನ್ ಗಣಪತಿ

ಗೋಣಿಕೊಪ್ಪ : ರಾಜ್ಯ ಸರ್ಕಾರ ಶೇಕಡ 40ರಷ್ಟು ಭಾಗಂಶ ನೀಡಲು ಸಾಧ್ಯವಾಗದ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನದಲ್ಲಿ ವಿಬಿ-ಜಿ ರಾಮ್‌ಜಿ ಯೋಜನೆಯನ್ನು ವಿರೋಧಿಸುತ್ತಿದೆ ಎಂದು ವಿರಾಜಪೇಟೆ ಮಂಡಲ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ ಆರೋಪಿಸಿದ್ದಾರೆ.

ಗೋಣಿಕೊಪ್ಪದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಗಾಂಧೀಜಿ ಹೆಸರನ್ನು ತೆಗೆದು ರಾಮನ ಹೆಸರು ನಾಮಕರಣ ಮಾಡಲು ಕೇಂದ್ರ ಸರ್ಕಾರದ ಮುಂದಾಗಿದೆ ಎಂದು ಹೇಳುತ್ತಾ ಸೌಹಾರ್ದತೆಗೆ ಧಕ್ಕೆ ತರುವ ಪ್ರಯತ್ನ ನಡೆಸುತ್ತಿದೆ. ಈ ವಿಚಾರದ ಪರವಾಗಿ ಒಂದು ಸಮುದಾಯದವನ್ನು ಓಲೈಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಮುಂದಾಳತ್ವ ವಹಿಸುತ್ತಿದೆ. ಈ ನಿಟ್ಟಿನಲ್ಲಿ ಯೋಜನೆಯನ್ನು ವಿರೋಧಿಸಿ ಕಾಲ್ನಡಿಗೆ ಜಾತ ನಡೆಸುತ್ತಿರುವುದು ಹಾಸ್ಯಸ್ಪದವಾಗಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ತೆಗೆದುಕೊಂಡಿರುವುದು ವಿರೋಧದ ನಡೆಯಾಗಿದೆ ಎಂಬುವುದು ಪ್ರಜ್ಞಾವಂತ ಜನರಿಗೆ ಪೂರ್ಣ ಅರಿವಿದೆ ಎಂದು ಹೇಳಿದರು.

 ಕೇಂದ್ರ ಸರ್ಕಾರ ವಿಬಿ-ಜಿ ರಾಮ್‌ಜಿ ಹೊಸ ನಾಮಕರಣದೊಂದಿಗೆ ತರುತ್ತಿರುವ ಯೋಜನೆಯು ಗ್ರಾಮೀಣ ಜನರಿಗೆ ಬಹು ಉಪಯೋಗವಾಗಿದೆ. ಸಣ್ಣ ರೈತರು, ಕಾರ್ಮಿಕರು, ಬಿಪಿಎಲ್ ಪಡಿತರ ಫಲಾನುಭವಿಗಳಿಗೆ ಅನುಕೂಲಕರವಾಗಲಿದೆ. ಗ್ರಾಮಗಳು ಅಭಿವೃದ್ಧಿಯಾದರೆ ಮಾತ್ರ ಈ ದೇಶದ ಮುನ್ನಡೆ ಸಾಧ್ಯ ಎಂಬ ಚಿಂತನಾಪರ ಅಧ್ಯಯನ ಶೀಲತೆಗೆ ಈ ಯೋಜನೆ ಪೂರಕವಾಗಿ ಮಾರ್ಪಾಡಾಗಿದೆ ಎಂದು ಮಾಹಿತಿ ಒದಗಿಸಿದರು.

೨೦೪೭ಕ್ಕೆ ಭಾರತ ವಿಶ್ವದಲ್ಲಿಯೇ ಮೊದಲ ಸ್ಥಾನದಲ್ಲಿ ನಿಲ್ಲಬೇಕೆಂಬ ಗಮನಾರ್ಹ ವಿಚಾರವನ್ನು ಮುಂದಿಟ್ಟು ವಿಕಸಿತ ಭಾರತಕ್ಕೆ ಮುನ್ನುಡಿಯನ್ನು ಯೋಜನೆಯ ಮೂಲಕ ತರುವ ಉದ್ದೇಶವನ್ನು ಹೊಂದಲಾಗಿದೆ. ಈ ಪರಿಸ್ಕೃತ ಯೋಜನೆಯಿಂದ ನೂರು ದಿನಗಳ ಬದಲಿಗೆ ೧೨೫ ದಿನಗಳ ಉದ್ಯೋಗ ಸೃಷ್ಟಿಯಾಗಲಿದೆ. ಸಣ್ಣ ಮತ್ತು ಮಧ್ಯಮ ರೈತರಿಗೆ ಕೃಷಿ ಚಟುವಟಿಕೆಗಳಲ್ಲಿ ೬೦ ದಿನದ ಬಿಡುವು ತೆಗೆದುಕೊಳ್ಳಲು ಸಾಧ್ಯವಿದೆ. ಹಿಂದಿನ ವೇತನಕ್ಕಿಂತ ಶೇಕಡವಾರು ವೇತನ ಏರಿಸಲಾಗಿದೆ. ಗ್ರಾಮಗಳು ಮಾಡಬೇಕಾದ ಕಾಮಗಾರಿಗಳ ಪಟ್ಟಿ, ಫಲಾನುಭವಿಗಳ ಪಟ್ಟಿ, ಸ್ಥಳೀಯ ವಾರ್ಡ್ ಸಭೆ ಮತ್ತು ಗ್ರಾಮ ಸಭೆಗಳಲ್ಲಿ ಆಯ್ಕೆ ಮಾಡುವ ಮೂಲಕ ಅಂತಿಮ ನಿರ್ಣಯ ತೆಗೆದುಕೊಳ್ಳಲು ಇದರಿಂದ ಸಾಧ್ಯವಿದೆ.

ಜಿಪಿಎಸ್ ತಂತ್ರಜ್ಞಾನದಿಂದ ಕಾಮಗಾರಿ ಲೋಪದೋಷ ಆಗದಂತೆ ತಡೆಹಿಡಿಯಲು ಸಾಧ್ಯವಿದೆ. ಜೊತೆಗೆ ಸಾಮಾಜಿಕ ಲೆಕ್ಕ ಪರಿಶೋಧನೆ ಮಾಡುವುದರಿಂದ ಭ್ರಷ್ಟಾಚಾರಕ್ಕೆ ಇಲ್ಲಿ ಅವಕಾಶವಿರುವುದಿಲ್ಲ. ಈ ಎಲ್ಲಾ ನಿರ್ಣಯಗಳನ್ನು ಮತ್ತು ಯೋಜನೆಯ ಫಲಾನುಫಲತೆಗಳನ್ನು ಗ್ರಾಮೀಣ ಭಾಗದ ಜನರಿಗೆ ಒದಗಿಸಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕಾರ್ಯ ಪ್ರವೃತ್ತವಾಗಿದೆ.

ಆದರೆ, ಕಾಂಗ್ರೆಸ್ ಪಕ್ಷ ಇದನ್ನು ತೀವ್ರವಾಗಿ ವಿರೋಧಿಸುವ ಮೂಲಕ ಜನರ ಮನದಲ್ಲಿ ಸಂಶಯ ಮತ್ತು ಗೊಂದಲದ ವಿಚಾರಗಳಿಗೆ ಸಂಬಂಧಿಸಿದಂತೆ ವರ್ತಿಸುತ್ತಿರುವುದರಲ್ಲಿ ಭ್ರಷ್ಟಚಾರಕ್ಕೆ ಪ್ರೇರಣೆ ಮತ್ತು ಲೇಪನವೇ ಕಾರಣವಾಗುತ್ತಿದೆ ಎಂದು ಆರೋಪಿಸಿದರು.