State News

ರಾಜ್ಯಮಟ್ಟದ ಯೋಗ ದಸರಾ: ಸುಮೇಶ್ ಕೆ.ಪಿ ಪ್ರಥಮ

admincoorgdaily

ಮಡಿಕೇರಿ: ಮೈಸೂರು ದಸರಾ ಮಹೋತ್ಸವ -2025 ರ ಅಂಗವಾಗಿ ಪಿ. ಕಾಳಿಂಗರಾವ್ ಸಭಾಂಗಣ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ನಡೆದ ಮೈಸೂರು ರಾಜ್ಯಮಟ್ಟದ ದಸರಾ ಯೋಗಾಸನ ಸ್ಪರ್ಧೆಯಲ್ಲಿ ಪಾಲಿ ಬೆಟ್ಟದ ಚೆಶೈರ್ ಹೋಮ್ ವಿಶೇಷ ಶಾಲೆಯ ಮುಖ್ಯ ಶಿಕ್ಷಕರು, ವಿಶೇಷ ಶಿಕ್ಷಕರು ಹಾಗೂ ಯೋಗ ಶಿಕ್ಷಕರಾಗಿರುವ ಶಿವರಾಜ್ ಎಸ್.ಸಿ ಯವರ ತರಬೇತಿಯಲ್ಲಿ ಚೆಶೈರ್ ಹೋಮ್ ನ ವಿದ್ಯಾರ್ಥಿ ಸುಮೇಶ್ ಕೆ.ಪಿ ಭಾಗವಹಿಸಿ ವಿಶೇಷ ಚೇತನರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದು, ಚಿನ್ನದ ಪದಕ, ನಗದು ಬಹುಮಾನ ಮತ್ತು ಪ್ರಮಾಣ ಪತ್ರವನ್ನು ಸ್ವೀಕರಿಸಿದ್ದಾರೆ. ಇವರು ಸಿದ್ದಾಪುರ ಗುಯ್ಯ ಗ್ರಾಮದ ನಿವಾಸಿ ಪ್ರೇಮಾ ನಂದ ಕೆ.ಸಿ ಮತ್ತು ಮೀನಾಕ್ಷಿಯವರ ಪುತ್ರನಾಗಿದ್ದಾನೆ.