Kodagu

ಅಯ್ಯಂಗೇರಿ ಗೌಡ ಯುವ ವೇದಿಕೆಯಿಂದ ಆಗಸ್ಟ್ 29 ಮತ್ತು 30 ರಂದು ರಾಜ್ಯ ಮಟ್ಟದ ಕೆಸರು ಗದ್ದೆ ಕ್ರೀಡಾಕೂಟ

admincoorgdaily

ಅಯ್ಯಂಗೇರಿ ಗೌಡ ಯುವ ವೇದಿಕೆಯಿಂದ ಆಗಸ್ಟ್ 29 ಮತ್ತು 30 ರಂದು ರಾಜ್ಯ ಮಟ್ಟದ ಕೆಸರು ಗದ್ದೆ ಕ್ರೀಡಾಕೂಟ

ಮಡಿಕೇರಿ: ಸಾಂಪ್ರದಾಯಿಕ ಕೃಷಿ ಕ್ರೀಡೆಗಳಿಗೆ ಹೊಸ ರೂಪ ನೀಡಲು ಅಯ್ಯಂಗೇರಿ ಗೌಡ ಯುವ ಒಕ್ಕೂಟ ಮುಂದಾಗಿದ್ದು, ಭಾಗಮಂಡಲದ ಕುದುಕುಳಿ ಕುಶಾಲಪ್ಪ ಅವರ ಗದ್ದೆಯಲ್ಲಿ ಆ.೨೯ ಮತ್ತು ೩೦ರಂದು ಪ್ರಥಮ ವರ್ಷದ ರಾಜ್ಯಮಟ್ಟದ ಮುಕ್ತ ಕೆಸರು ಗದ್ದೆ ಕ್ರೀಡಾಕೂಟ ನಡೆಯಲಿದೆ ಎಂದು ಒಕ್ಕೂಟದ ಅಧ್ಯಕ್ಷ ಭರತ್ ಕಾವೇರಿಮನೆ ತಿಳಿಸಿದ್ದಾರೆ.

 ಆ.೨೯ರಂದು ೩ ಓವರ್‌ಗಳ ೮ ಜನರ ಕ್ರಿಕೆಟ್ ನಡೆಯಲಿದ್ದು ೨೪ ತಂಡಗಳು ಭಾಗವಹಿಸಲಿವೆ. ವಿಜೇತರಿಗೆ ೧೦,೦೦೦ ರೂ. ದ್ವಿತೀಯರಿಗೆ ೮,೦೦೦ ರೂ. ನಗದು ಹಾಗೂ ಬೆಸ್ಟ್ ಬೌಲರ್, ಬೆಸ್ಟ್ ಬ್ಯಾಟ್ಸ್‌ಮನ್ ಸೇರಿದಂತೆ ವಿವಿಧ ಪ್ರಶಸ್ತಿ ನೀಡಿ ಗೌರವಿಸಲಾಗುವುದು, ಹೆಚ್ಚಿನ ಮಾಹಿತಿಗೆ ೮೪೩೧೫೧೫೪೦೪ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ. ಆ.೩೦ರಂದು ಓಟ, ವಾಲಿಬಾಲ್, ಥ್ರೋಬಾಲ್ ಮತ್ತು ಪುರುಷ-ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆಗಳಿವೆ. ಹಗ್ಗಜಗ್ಗಾಟದಲ್ಲಿ ಪ್ರಥಮರಿಗೆ ೧೫,೦೦೦ ರೂ. ದ್ವಿತೀಯರಿಗೆ ೧೦,೦೦೦ ರೂ. ನಗದು ನೀಡಲಾಗುವುದು.

ಸಮಾರೋಪಕ್ಕೆ ಸಿಎಂ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಅಧ್ಯಕ್ಷತೆ ವಹಿಸಲಿದ್ದು, ಸಂಸದ ಯದುವೀರ್, ಶಾಸಕ ಮಂತರ್‌ಗೌಡ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕ್ರೀಡಾಧ್ಯಕ್ಷ ಬಿ.ಅರುಣ್ ಮಂದಣ್ಣ, ಪ್ರಮುಖರಾದ ಬಿ.ಲೋಕೇಶ್, ಬಿ.ರತನ್, ಕೆ.ಸುಗು, ಬಿ.ದೀಪಕ್ ಇದ್ದರು.