ಬಿಡಾಡಿ ಜಾನುವಾರು; ಫೆ.06 ರವರೆಗೆ ಗಡುವು

Jan 28, 2026 - 17:06
 0  406
ಬಿಡಾಡಿ ಜಾನುವಾರು; ಫೆ.06 ರವರೆಗೆ ಗಡುವು
ಸಾಂದರ್ಭಿಕ ಚಿತ್ರ

ಮಡಿಕೇರಿ ಜ.27:-ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿನ ಪ್ರಮುಖ ರಸ್ತೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬೀಡಾಡಿ ದನಗಳು ನಿರ್ಬಂಧವಿಲ್ಲದೆ ಓಡಾಡುತ್ತಿದ್ದು, ಇದರಿಂದ ವಾಹನ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ.

ಇದರಿಂದ ರಸ್ತೆ ಅಪಘಾತಗಳು, ಜೀವಹಾನಿ ಹಾಗೂ ಆಸ್ತಿನಷ್ಟ ಸಂಭವಿಸುವ ಸಾಧ್ಯತೆ ಇದ್ದು, ಬೀಡಾಡಿ ದನಗಳಿಗೆ ಸಂಬಂಧಿಸಿದ ವಾರಸುದಾರರು ದನ/ಹಸುಗಳನ್ನು ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಿಡುವುದನ್ನು ತಕ್ಷಣವೆ ನಿಲ್ಲಿಸುವಂತೆ ಸೂಚಿಸಲಾಗಿದೆ. ಈ ಸಂಬಂಧ ದನ/ಹಸುಗಳ ಮಾಲೀಕರು ತಮ್ಮ ದನ/ಹಸುಗಳನ್ನು ಸ್ವಯಂ ನಿಯಂತ್ರಣಕ್ಕೆ ಇಟ್ಟುಕೊಳ್ಳಲು ಫೆಬ್ರವರಿ, 06 ರವರೆಗೆ ಗಡುವು ನೀಡಲಾಗಿದೆ.

 ನಂತರ ಯಾವುದೇ ಬೀಡಾಡಿ ದನಗಳು ರಸ್ತೆಯಲ್ಲಿ ನಿರ್ಬಂಧವಿಲ್ಲದೇ ಓಡಾಡುವುದು ಕಂಡುಬಂದಲ್ಲಿ ಮುನ್ಸೂಚನೆ ನೀಡದೇ ಗೋ ಶಾಲೆಗೆ ಸ್ಥಳಾಂತರಿಸಲು ನಗರಸಭೆ ವತಿಯಿಂದ ಕ್ರಮಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತರಾದ ಎಚ್.ಆರ್.ರಮೇಶ್ ಅವರು ತಿಳಿಸಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0