ಕೂಡಿಗೆ ಗ್ರಾಪಂ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ: ಕೂಡಿಗೆ ಗ್ರಾಪಂ ಮುಂಭಾಗ ಪ್ರತಿಭಟನೆ
ಕೂಡಿಗೆ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಿತಿಮೀರಿದ ಭೀತಿ ನಾಯಿಗಳ ಹಾವಳಿಯಿಂದಾಗಿ ಜನಸಾಮಾನ್ಯರು ತಿರುಗಾಡಲು ತುಂಬಾ ತೊಂದರೆ ಆಗುತ್ತಿದೆ ಎಂದು ಸೋಮವಾರ ಕೂಟ್ಗೆ ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಗ್ರಾಮದ ಸಾರ್ವಜನಿಕರು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಗ್ರಾಪಂ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಬೀದಿ ನಾಯಿಗಳು ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ. ಬೀದಿ ನಾಯಿಗಳಿಂದ ಸಾರ್ವಜನಿಕರನ್ನು ರಕ್ಷಿಸಬೇಕಿದೆ, ನಾಯಿಗಳ ಹಾವಳಿ ನಿಯಂತ್ರಸಬೇಕಿದೆ ಎಂದು ಆಗ್ರಹಿಸಿ ಘೋಷಣೆ ಕೂಗಲಾಯಿತು.
ಕೂಡಿಗೆ ಕೊಪ್ಪಲು ಗ್ರಾಮದ ರಂಗಣ್ಣ ಅವರ ಮೇಲೆ ಬೀದಿನಾಯಿಗಳು ದಾಳಿ ನಡೆಸಿ ಮಾರಣಾಂತಿಕವಾಗಿ ಘಾಸಿಗೊಳಿಸಿದೆ. ಜಾನುವಾರುಗಳ ಮೇಲೂ ಬೀದಿ ನಾಯಿಗಳ ದಾಳಿ ನಡೆಸುತ್ತಿವೆ. ಪ್ರತಿಭಟನೆ ಬಗ್ಗೆ ಸೂಚನೆಯಿದ್ದರೂ ಕೂಡ ನಮ್ಮ ಸಮಸ್ಯೆ ಕೇಳುವ ಬದಲು ಪಿಡಿಒ ರಜೆ ಪಡೆದಿರುವುದು ಸಮಂಸವಲ್ಲ ಎಂದ ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು. ಮನವಿ ಸ್ವೀಕರಿಸಿಲು ಮುಂದಾಗದಿರುವ ಅಧಿಕಾರಿ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಆಗಮಿಸಿದ ಗ್ರಾಪಂ ಆಡಳಿತ ಅಧಿಕಾರಿ ಶ್ರೀನಿವಾಸ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಹಿಂದೆ ಹಲವು ಬಾರಿ ನಾಯಿಗಳ ಹಾವಳಿ ಬಗ್ಗೆ ಎಚ್ಚರಿಸಿದ್ದರೂ ಕೂಡ ಸೂಕ್ತ ಕ್ರಮಕೈಗೊಂಡಿಲ್ಲ. ನಾಯಿ ದಾಳಿ ಹಿನ್ನೆಲೆಯಲ್ಲಿ ಅಧಿಕಾರಿಗಳ ಮೇಲೆ ದೂರು ನೀಡಬೇಕಾಗುತ್ತದೆ. ಗಾಯಾಳು ಚಿಕಿತ್ಸೆಗೆ ಪಂಚಾಯ್ತಿಯಿಂದ ಕ್ರಮವಹಿಸಬೇಕಿದೆ, ಸಂತಾನ ಹರಣ ವ್ಯವಸ್ಥೆಗೆ ಮುಂದಾಗಬೇಕಿದೆ ಎಂದು ಟಿ.ಎ.ನಾರಾಯಣ ಗೌಡರ ಕರವೇ ಜಿಲ್ಲಾ ಸಂಚಾಲಕ ಗೋವಿಂದ ರಾಜ್ ದಾಸ್, ತಾಲೂಕು ಅಧ್ಯಕ್ಷ ಬಿ.ಜೆ.ಅಣ್ಣಯ್ಯ, ಸಾಮಾಜಿಕ ಕಾರ್ಯಕರ್ತ ಹಕ್ಕೆಮೋಹನ್ ಆಗ್ರಹಿಸಿದರು.
ಲ್ಯಾಂಪ್ಸ್ ಮಹಾಮಂಡಳ ಅಧ್ಯಕ್ಷ ಎಸ್.ಆರ್.ಅರುಣ್ ರಾವ್ ಮಾತನಾಡಿ, ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಕ್ರಮವಹಿಸಬೇಕಿದೆ. ಒಂದು ವಾರಗಳ ಒಳಗಾಗಿ ಸೂಕ್ತ ಕ್ರಮವಹಿಸದೇ ಇದ್ದಲ್ಲಿ ತಾಪಂ ಅಥವಾ ಗ್ರಾಪಂ ಕಛೇರಿಗೆ ಬೀಗ ಜಡಿದು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕರವೇ ತಾಲೂಕು ಅಧ್ಯಕ್ಷ ಬಿ.ಜೆ.ಅಣ್ಣಯ್ಯ ಮಾತನಾಡಿ, ಸಂಘಟನೆ ಮೂಲಕ ಈ ಹಿಂದೆ ಹಲವು ಬಾರಿ ಬೀದಿನಾಯಿಗಳ ಬಗ್ಗೆ ಕ್ರಮವಹಿಸಲು ಆಗ್ರಹಿಸಿದ್ದರೂ ಕೂಡ ಪಂಚಾಯಿತಿಯಿಂದ ಸೂಕ್ತ ಸ್ಪಂದನೆ ದೊರಕಿಲ್ಲ. ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆ ನಿವಾರಣೆಗೆ ಅಧಿಕಾರಿಗಳು ಕೂಡಲೆ ಕ್ರಮವಹಿಸಬೇಕಿದೆ ಎಂದು ಒತ್ತಾಯಿಸಿದರು.
ಈ ಸಂದರ್ಭ ಟಿ.ಎ.ನಾರಾಯಣಗೌಡರ ಕರವೇ ತಾಲೂಕು ಉಪಾಧ್ಯಕ್ಷ ಫಯಾಜುದ್ದಿನ್, ಪ್ರಧಾನ ಕಾರ್ಯದರ್ಶಿ ಕುಮಾರ್ ಆರ್.ದೇವಾಂಗ, ಗೀತಾ ರಾಜೇಶ್ ಕಲ್ಪನಾ ದಿನೇಶ್ ಖಜಾಂಚಿ ರೊನಾಲ್ಡ್, ಹೆಚ್.ಶಿವರಾಮೇಗೌಡರ ಕರವೇ ತಾಲೂಕು ಅಧ್ಯಕ್ಷ ನಾಗರಾಜು, ಗೌರವಾಧ್ಯಕ್ಷೆ ಪುಟ್ಟಮ್ಮ, ಕಮಾಲುದ್ದಿನ್, ಗ್ರಾಮಸ್ಥರಾದ ಕೂಡಿಗೆಯ ಕೆ.ಆರ್.ಗಣೇಶ್, ದಂಡಿನಮ್ಮ ಹಾಗೂ ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಚಂದ್ರು. ಉಪಾಧ್ಯಕ್ಷರಾದ ಪ್ರಕಾಶ್ .ಮೋಹನ್ ಹಕ್ಕೆ, ಕೂಡಿಗೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಅರುಣ್ ರಾವ್, , ಅನಂತ್, ಕೆಎಸ್ ಕಾಂತರಾಜ್. ಶಿವಕುಮಾರ್, ಬಿ ಡಿ ಅಣ್ಣಯ್ಯ. ನಾಗರಾಜ್. ಅನಿತಾ.ಸೋಮಣ್ಣ, ಚಂದ್ರು, ಭಕ್ತರಾಜ್. ಸುಬ್ಬಯ್ಯ, ನಾಗರಾಜು, ರಜಾಕ್, ಇಸ್ಮಾಯಿಲ್, ಮಹಮ್ಮದ್. ರಂಗ, ರವೀಂದ್ರ.ಧರ್ಮ ಚಂದ್ರಪ್ಪ. ಸಂತೋಷ್ . ಕೆ ಪಿ ಸೋಮಣ್ಣ ರಾಮಣ್ಣ ಡಿಡಳ್ಳಿ ಪುನರ್ವಸತಿ ಕೇಂದ್ರದ ಮುಖಂಡ ಮುತ್ತ .ಮತ್ತಿತರರು ಇದ್ದರು.
ಹಾಗೂ ಯಾವುದೇ ಅಹಿತಕರ ಘಟನೆ ನಡೆದಂತೆ ಪೊಲೀಸ್ ಬಂದೋಬಸ್ ಏರ್ಪಡಿಸಲಾಗಿತ್ತು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0
