ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನೀಡುವ ಜಿಲ್ಲಾ ಮಟ್ಟದ ಮಕ್ಕಳ ಅಸಾಧಾರಣ ಪ್ರತಿಭಾ ಪ್ರಶಸ್ತಿಗೆ ವಿದ್ಯಾರ್ಥಿನಿ ಸಿ.ಎಸ್.ಆದ್ವಿ ಆಯ್ಕೆ

May 19, 2026 - 17:02
 0  244
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನೀಡುವ ಜಿಲ್ಲಾ ಮಟ್ಟದ ಮಕ್ಕಳ ಅಸಾಧಾರಣ ಪ್ರತಿಭಾ ಪ್ರಶಸ್ತಿಗೆ ವಿದ್ಯಾರ್ಥಿನಿ ಸಿ.ಎಸ್.ಆದ್ವಿ ಆಯ್ಕೆ

ಸೋಮವಾರಪೇಟೆ:ಜಿಲ್ಲಾ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನೀಡುವ ಜಿಲ್ಲಾ ಮಟ್ಟದ ಮಕ್ಕಳ ಅಸಾಧಾರಣ ಪ್ರತಿಭಾ ಪ್ರಶಸ್ತಿಗೆ ತಾಲ್ಲೂಕಿನ ಬೆಂಕಳ್ಳಿ-ಕೊತ್ನಳ್ಳಿ ಗ್ರಾಮದ ವಿದ್ಯಾರ್ಥಿನಿ ಸಿ.ಎಸ್.ಆದ್ವಿ ಭಾಜನರಾಗಿದ್ದಾರೆ. 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 623 ಅಂಕಗಳನ್ನು ಪಡೆದು ಜಿಲ್ಲೆಯ ಟಾಪರ್ ಅಗಿದ್ದರು.

 ಶೇ. 99.68 ಅಂಕಗಳೊಂದಿಗೆ ರಾಜ್ಯಮಟ್ಟದಲ್ಲಿ 4ನೇ ಸ್ಥಾನ ಗಳಿಸಿದ್ದರು. ಸೋಮವಾರಪೇಟೆ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ವಿದ್ಯಾರ್ಥಿಯಾಗಿದ್ದರು. ಬೆಂಕಳ್ಳಿ ಗ್ರಾಮದ ರೈತರಾದ ಸಿ.ಎಸ್.ಪ್ರಗತಿ, ಸಿ.ಟಿ.ಸತೀಶ್ ಅವರ ಪುತ್ರಿಯಾಗಿರುವ ಆದ್ವಿ, ತಮ್ಮೂರಿಗೆ ಸರ್ಕಾರಿ ಬಸ್ ಸೌಲಭ್ಯವಿಲ್ಲದ ಹಿನ್ನೆಲೆಯಲ್ಲಿ ಸರ್ಕಾರದ ಬಾಲಕಿಯರ ಹಾಸ್ಟೇಲ್‌ನಲ್ಲಿ ವಾಸವಿದ್ದು, ಪರೀಕ್ಷೆಗೆ ತಯಾರಿ ನಡೆಸಿ ಯಶ ಕಂಡಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0