ಪಿಜಿಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ: ‘ಅಪ್ಪ, ನಿಮ್ಮ ಪ್ರೀತಿಗೆ ಅರ್ಹಳಲ್ಲ, ಪ್ರೀತಿಸಿದ ಹುಡುಗನಿಗೂ ಮೋಸ ಮಾಡಲು ಮನಸ್ಸಿಲ್ಲ’ ಎಂಬ ಡೆತ್ ನೋಟು!

Nov 29, 2025 - 22:52
 0  3.3k
ಪಿಜಿಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ: ‘ಅಪ್ಪ, ನಿಮ್ಮ ಪ್ರೀತಿಗೆ ಅರ್ಹಳಲ್ಲ, ಪ್ರೀತಿಸಿದ ಹುಡುಗನಿಗೂ ಮೋಸ ಮಾಡಲು ಮನಸ್ಸಿಲ್ಲ’ ಎಂಬ ಡೆತ್ ನೋಟು!
Photo credit:Public tv

ಬೆಂಗಳೂರು: ನಗರದ ಹೆಸರುಘಟ್ಟ ರಸ್ತೆ ಸಮೀಪದ ಸೋಲದೇವನಹಳ್ಳಿ ಪ್ರದೇಶದಲ್ಲಿ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಪಿಜಿ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಹಾಸನ ಮೂಲದ 19 ವರ್ಷದ ವತ್ಸಲಾ ಮೃತ ಯುವತಿ ಎಂದು ಗುರುತಿಸಲಾಗಿದೆ. ಬಿ.ಫಾರ್ಮ್ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದ ಈಕೆ, ಪಿಜಿಯಲ್ಲೇ ವಾಸಿಸುತ್ತಾ ವ್ಯಾಸಂಗ ಮಾಡುತ್ತಿದ್ದರು. ಮಂಗಳವಾರ ಬೆಳಗ್ಗೆ ತನ್ನ ಕೊಠಡಿಯಲ್ಲಿ ಎಂಟು ಪುಟಗಳ ಡೆತ್ ನೋಟ್ ಬರೆದ ಬಳಿಕ, ಮಧ್ಯಾಹ್ನ ಸುಮಾರು 2.30ರ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಡೆತ್ ನೋಟ್‌ನಲ್ಲಿ, “ಅಪ್ಪ, ನಿಮ್ಮ ಪ್ರೀತಿಗೆ ನಾನು ಅರ್ಹಳಲ್ಲ. ನೀವು ಕೊಟ್ಟಿರುವ ಪ್ರೀತಿ ಯಾರಿಂದಲೂ ಸಿಗಲಾರದು. ನಿಮ್ಮ ಮಾನಕ್ಕೆ ಧಕ್ಕೆ ತರುವ ಕೆಲಸ ನಾನು ಮಾಡಿಲ್ಲ. ನಿಮ್ಮ ಪ್ರೀತಿಯನ್ನು ಉಳಿಸಿಕೊಳ್ಳುವ ಭಾಗ್ಯ ನನಗಿಲ್ಲ. ನಾನು ಪ್ರೀತಿಸಿದ ಹುಡುಗನಿಗೂ ಮೋಸ ಮಾಡಲು ಮನಸ್ಸಿಲ್ಲ. ಹೀಗಾಗಿ ಸಾವೇ ನನ್ನ ಆಯ್ಕೆ,” ಎಂದು ವತ್ಸಲಾ ಬರೆದಿರುವುದು ಪತ್ತೆಯಾಗಿದೆ.

ಉನ್ನತ ವ್ಯಾಸಂಗದ ಕನಸುಗಳೊಂದಿಗೆ ಹಾಸನದಿಂದ ಬೆಂಗಳೂರಿಗೆ ಬಂದಿದ್ದ ಯುವತಿಯ ಆತ್ಮಹತ್ಯೆಯಿಂದ ಕುಟುಂಬಸ್ಥರು, ಸ್ನೇಹಿತರು ಮರುಗಿದ್ದಾರೆ.

ಘಟನೆಯ ಕುರಿತು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಿಸಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ.

What's Your Reaction?

Like Like 2
Dislike Dislike 1
Love Love 2
Funny Funny 0
Angry Angry 2
Sad Sad 13
Wow Wow 1