ಹಾಸ್ಟೆಲ್ ನಲ್ಲೇ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ!

Jun 13, 2026 - 10:21
 0  3.8k
ಹಾಸ್ಟೆಲ್ ನಲ್ಲೇ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ!

ಉತ್ತರ‌ ಕನ್ನಡ; ಜಿಲ್ಲೆಯ ಶಿರಸಿ ತಾಲ್ಲೂಕಿನ ತಾಲೂಕಿನ ಹಾಸ್ಟೆಲ್‌ವೊಂದರ ಶೌಚಾಲಯದಲ್ಲಿ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಬೆಳಗ್ಗೆ ಶಾಲಾ ಅವಧಿ ಆರಂಭದೊಳಗೆ ವಿದ್ಯಾರ್ಥಿನಿ ಶೌಚಾಲಯದಲ್ಲಿ ಸ್ವಯಂ ಹೆರಿಗೆ ಮಾಡಿಕೊಂಡಿದ್ದು, 2.8 ಕೆ.ಜಿ ತೂಕದ ಹೆಣ್ಣು ಮಗು ಜನಿಸಿದೆ.

ನಂತರ ಮಗುವನ್ನು ಶೌಚಾಲಯದ ಕಿಟಕಿಯಿಂದ ಹೊರಗೆ ಎಸೆದು ಎಂದಿನಂತೆ ಸಮೀಪದ ಶಾಲೆಗೆ ತೆರಳಿದ್ದಾಳೆ. ಈ ಮಧ್ಯೆ ಹಾಸ್ಟೆಲ್‌ನ ಹಿಂಭಾಗ ಸ್ವಚ್ಛತೆಗೆ ತೆರಳಿದ್ದವರಿಗೆ ಮಗು ಬಿದ್ದಿರುವುದು ಕಂಡಿದೆ. ಅಷ್ಟೊತ್ತಿಗಾಗಲೇ ಮಗು ಮೃತಪಟ್ಟಿತ್ತು.

ಬಳಿಕ ಸಂಬಂಧಿ ಸಿದವರು ಪೊಲೀಸ್ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕಂದಾಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ನಂತರ ವಿದ್ಯಾರ್ಥಿನಿ ಮೇಲೆ ಅನುಮಾನಗೊಂಡು ಮಾಹಿತಿ ಕಲೆ ಹಾಕಲಾಯಿತು. ಈಕೆ ಕಳೆದ ನಾಲ್ಕು ದಿನಗಳ ಹಿಂದಷ್ಟೇ ಹಾಸ್ಟೆಲ್‌ಗೆ ಬಂದು ದಾಖಲಾಗಿದ್ದಳು ಎಂದು ಗೊತ್ತಾಗಿದೆ. ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕೈಗೊಂಡಿದ್ದಾರೆ.

What's Your Reaction?

Like Like 2
Dislike Dislike 0
Love Love 1
Funny Funny 0
Angry Angry 5
Sad Sad 8
Wow Wow 0