ಡಿಸ್ಕಸ್ ಥ್ರೋ ತಲೆಗೆ ಬಡಿದು ಗಾಯಗೊಂಡ ವಿದ್ಯಾರ್ಥಿ: ಕೊಡಗು ಜಿಲ್ಲೆಯ ನಂಜರಾಯಪಟ್ಟಣ ಸರ್ಕಾರಿ ಪ್ರೌಢ ಶಾಲೆಯಲ್ಲಿ ಘಟನೆ
ಕುಶಾಲನಗರ: ಶಾಲೆಯಲ್ಲಿ ವಿದ್ಯಾರ್ಥಿಗಳು ಡಿಸ್ಕಸ್ ಥ್ರೋ ಅಭ್ಯಾಸ ನಡೆಸುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ವಿದ್ಯಾರ್ಥಿಯೊಬ್ಬರ ತಲೆಗೆ ಬಡಿದು ಗಂಭೀರವಾಗಿ ಘಾಸಿಗೊಂಡ ಘಟನೆ ನಂಜರಾಯಪಟ್ಟಣ ಸರಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ. ವಿರುಪಾಕ್ಷಪುರ ಗ್ರಾಮದ ಶೇಖರ್ ಆಶಾ ದಂಪತಿಗಳ ಪುತ್ರ 8ನೇ ತರಗತಿ ವಿದ್ಯಾರ್ಥಿ ಪ್ರಜ್ವಲ್ ಗಾಯಗೊಂಡ ವಿದ್ಯಾರ್ಥಿ. ತಲೆಗೆ ಘಾಸಿಗೊಂಡ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾನಿಸಲಾಗಿದೆ.