Kodagu

ಸ್ಥಗಿತಗೊಂಡಿರುವ ಪಿಂಚಣಿ ಪುನರ್ ಪ್ರಾರಂಭಕ್ಕೆ ದಾಖಲೆ ಸಲ್ಲಿಸಿ

admincoorgdaily

ಸ್ಥಗಿತಗೊಂಡಿರುವ ಪಿಂಚಣಿ ಪುನರ್ ಪ್ರಾರಂಭಕ್ಕೆ ದಾಖಲೆ ಸಲ್ಲಿಸಿ

ಮಡಿಕೇರಿ ಆ.12:-ಸಾಮಾಜಿಕ ಭದ್ರತಾ ಯೋಜನೆಯಡಿ ವಿವಿಧ ಮಾಸಿಕ ಪಿಂಚಣಿ ಪಡೆಯುತ್ತಿರುವ ಮಡಿಕೇರಿ ತಾಲ್ಲೂಕಿನ ಫಲಾನುಭವಿಗಳ ಪೈಕಿ 2,778 ಪ್ರಕರಣಗಳಲ್ಲಿ ಸಂಶಯಾಸ್ಪದ ಪ್ರಕರಣಗಳು ಎಂದು ತಾಂತ್ರಂಶದ ಮುಖೇನ ಗುರುತಿಸಿ ಪಿಂಚಣಿ ಸ್ಥಗಿತಗೊಳಿಸಲಾಗಿದೆ.

 ಸ್ಥಗಿತಗೊಂಡಿರುವ ಪಿಂಚಣಿಗಳ ಫಲಾನುಭವಿಗಳ ದಾಖಲೆಗಳನ್ನು ಪರಿಶೀಲಿಸಿ, ನಿಯಮಾನುಸಾರ ಕ್ರಮ ಕೈಗೊಂಡು ಅರ್ಹ ಫಲಾನುಭವಿಗಳಿಗೆ ಪಿಂಚಣಿಯನ್ನು ಪುನರ್‍ಪ್ರಾರಂಭಿಸಲು ಕ್ರಮವಹಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಪಿಂಚಣಿ ಪುನರ್‍ಪ್ರಾರಂಭಕ್ಕೆ ಅರ್ಹರಾಗಿರುವ ಫಲಾನುಭವಿಗಳು ಆದಾಯ ದೃಢೀಕರಣ ಪತ್ರ, ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ, ಪಡಿತರ ಚೀಟಿ ಜೆರಾಕ್ಸ್ ಪ್ರತಿ, ವಯಸ್ಸಿನ ದೃಢೀಕರಣಕ್ಕಾಗಿ ಶಾಲಾ ದಾಖಲೆ ಜೆರಾಕ್ಸ್ ಪ್ರತಿ ಅಥವಾ ಅವರ ಮಕ್ಕಳ ಶಾಲಾ ದಾಖಲೆ ಜೆರಾಕ್ಸ್ ಪ್ರತಿ, ವಯಸ್ಸಿನ ಕುರಿತು ವೈದ್ಯರ ದೃಢೀಕರಣ ಪತ್ರ. ಅಗತ್ಯ ದಾಖಲೆಗಳನ್ನು ಇದೇ ಆಗಸ್ಟ್ 31 ರೊಳಗೆ, ಕಚೇರಿ ಅವಧಿಯಲ್ಲಿ ಮಡಿಕೇರಿ ತಾಲ್ಲೂಕು ಕಚೇರಿಯ ಅಟಲ್ ಜೀ ಜನಸ್ನೇಹಿ ಕೇಂದ್ರಕ್ಕೆ ಸಲ್ಲಿಸುವಂತೆ ಮಡಿಕೇರಿ ತಾಲ್ಲೂಕು ತಹಶೀಲ್ದಾರರಾದ ಶ್ರೀಧರ ಅವರು ಕೊರಿದ್ದಾರೆ.