ಮಾಲ್ದಾರೆ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ದಿಢೀರ್ ಅನಧಿಕೃತ ಸಮಾಧಿ ನಿರ್ಮಾಣ
admincoorgdaily

ಸಿದ್ದಾಪುರ; ಕೊಡಗು ಜಿಲ್ಲೆ ವೀರಾಜಪೇಟೆ ತಾಲ್ಲೂಕಿನ ಮಾಲ್ದಾರೆ ಸಮೀಪದ ಮತ್ತೂರು ಬಳಿಯ ಇತಿಹಾಸ ಪ್ರಸಿದ್ಧ ಶ್ರೀ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಕೆಲವು ದುಷ್ಕರ್ಮಿಗಳು ಅನಧಿಕೃತ ಸಮಾಧಿ (ಗೋರಿ) ನಿರ್ಮಾಣ ಮಾಡಿ ಶಾಂತಿಭಂಗ ಆಗುವ ಘಟನೆ ನಡೆದಿದೆ. ಸಿದ್ದಾಪುರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.