National News

ರಾಷ್ಟ್ರೀಯ ಮಾನವ ಶ್ರೇಷ್ಠತಾ ಪ್ರಶಸ್ತಿಯನ್ನು ನವದೆಹಲಿಯಲ್ಲಿ ಸ್ವೀಕರಿಸಿದ ಸ್ವೀಕರಿಸಿದ ಸೂಫಿ ಹಾಜಿ

admincoorgdaily

ರಾಷ್ಟ್ರೀಯ ಮಾನವ ಶ್ರೇಷ್ಠತಾ ಪ್ರಶಸ್ತಿಯನ್ನು ನವದೆಹಲಿಯಲ್ಲಿ ಸ್ವೀಕರಿಸಿದ  ಸ್ವೀಕರಿಸಿದ ಸೂಫಿ ಹಾಜಿ

ದೆಹಲಿ:'ಐ ಕ್ಯಾನ್ ಫೌಂಡೇಶನ್ ಇಂಡಿಯಾ' ವತಿಯಿಂದ 'ವಿಶ್ವ ಮಾನವೀಯತೆ ದಿನಾಚರಣೆ' ಅಂಗವಾಗಿ ನೀಡಲಾಗುವ 'ರಾಷ್ಟ್ರೀಯ ಮಾನವ ಶ್ರೇಷ್ಠತಾ ಪ್ರಶಸ್ತಿ-2026' ಅನ್ನು ಕೊಡವ ಮುಸ್ಲಿಂ ಅಸೋಸಿಯೇಷನ್ ಹಾಗೂ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ ಅಧ್ಯಕ್ಷರಾಗಿರುವ ದುದ್ದಿಯಂಡ ಸೂಫಿ ಹಾಜಿ ಇಂದು ಸ್ವೀಕರಿಸಿದರು.

'ಭಾರತದ ಅತ್ಯಂತ ಸ್ಫೂರ್ತಿದಾಯಕ ಬದಲಾವಣೆಯ ಹರಿಕಾರ'ರ ವಿಭಾಗದಿಂದ ಆಯ್ಕೆಗೊಂಡಿದ್ದ ಸೂಫಿ ಹಾಜಿಯವರಿಗೆ ನವ ದೆಹಲಿಯ 'ರೇಡಿಶನ್ ಬ್ಲೂ' ಹೋಟೆಲ್ ಸಭಾಂಗಣದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಪಾಲ್ಗೊಂಡಿದ್ದ ಸಾಧಕರ ಸಮ್ಮುಖದಲ್ಲಿ ಗಣ್ಯರುಈ ಪ್ರಶಸ್ತಿಯನ್ನು ಪ್ರಧಾನ ಮಾಡಿದರು.