ಗುಡಿಸಲಲ್ಲಿ ಧರಣಿ ನಡೆಸುತ್ತಿರುವ ಎಸ್ಸಿ-ಎಸ್ಟಿ ನಿವೇಶನ ರಹಿತರನ್ನು ವಿಚಾರಿಸದ ಅಧಿಕಾರಿಗಳ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿ
admincoorgdaily

ಮಡಿಕೇರಿ: ಪೊನ್ನಂಪೇಟೆಯ ಕೋತ್ರಿಕಾಡು ಸರ್ವೇ ನಂ.೩೭/೨೬ರಲ್ಲಿ ೬ ತಿಂಗಳಿಂದ ಗುಡಿಸಲಲ್ಲಿ ಧರಣಿ ನಡೆಸುತ್ತಿರುವ ಎಸ್ಸಿ-ಎಸ್ಟಿ ನಿವೇಶನ ರಹಿತರನ್ನು ವಿಚಾರಿಸದ ಅಧಿಕಾರಿಗಳ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಬೇಕು ಎಂದು ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಹೆಚ್.ಆರ್.ಪರಶುರಾಮ್ ಆಗ್ರಹಿಸಿದರು.
ಜೇನುಕುರುಬ, ಬೆಟ್ಟಕುರುಬ ಸಮುದಾಯದ ನೂರಾರು ಕುಟುಂಬಗಳು ಶಾಶ್ವತ ಸೂರುಗಾಗಿ ಅಹೋರಾತ್ರಿ ಧರಣಿಯಲ್ಲಿವೆ. ಅಧಿಕಾರಿಗಳು ಸ್ಥಳಕ್ಕೆ ಬಾರದಿರುವುದು ಸಂವಿಧಾನಕ್ಕೆ ಅಗೌರವ ಎಂದರು.
೩೫ ಸಾವಿರ ಕೂಲಿ ಕಾರ್ಮಿಕರು ಲೈನ್ ಮನೆಯಲ್ಲಿದ್ದಾರೆ. ೫೦ ಸಾವಿರ ನಿವೇಶನ ಆದೇಶ ಕಾಗದದಲ್ಲಿ ಉಳಿಯಬಾರದು. ಕೋತ್ರಿಕಾಡು ನಿವಾಸಿಗಳಿಗೆ ಮೊದಲು ಹಕ್ಕುಪತ್ರ ನೀಡದಿದ್ದರೆ ಮತದಾನ ಬಹಿಷ್ಕಾರ ಮತ್ತು ಜಿಲ್ಲಾಧಿಕಾರಿ ಕಚೇರಿ ಮುಂದೆ ಅಮರಣಾಂತ ಉಪವಾಸ ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿ ಪ್ರಮುಖರಾದ ಹರೀಶ್, ಕುಳಿಯ, ಲಕ್ಷ್ಮಿ, ಸಿಂಗ, ಗೀತಾ ಇದ್ದರು.