ಸುಂಟಿಕೊಪ್ಪ: ಅಪಘಾತಕ್ಕೀಡಾದ ಕಾರಿನ ಮೇಲೆ ಬಿದ್ದ ಮರದ ದಿಮ್ಮಿ ಸಾಗಿಸುತ್ತಿದ್ದ ಲಾರಿ!

ಸುಂಟಿಕೊಪ್ಪ: ಅಪಘಾತಕ್ಕೀಡಾದ  ಕಾರಿನ ಮೇಲೆ ಬಿದ್ದ ಮರದ ದಿಮ್ಮಿ ಸಾಗಿಸುತ್ತಿದ್ದ ಲಾರಿ!

ಸುಂಟಿಕೊಪ್ಪ; ಕೊಡಗರಹಳ್ಳಿ ಸಮೀಪದ ಮಾರುತಿ ನಗರದ ಬಳಿ ಗುರುವಾರ ರಾತ್ರಿ ಸಂಭವಿಸಿದ ರಿಡ್ಜ್ ಹಾಗೂ ಬಲೆನೋ ಕಾರುಗಳ ನಡುವೆ ಅಪಘಾತದ ನಂತರ ಅದೇ ಜಾಗದಲ್ಲಿ ಮತ್ತೊಂದು ಅವಘಡ ನಡೆದಿದೆ. ಇಂದು ನಸುಕಿನ ವೇಳೆ 4 ಗಂಟೆಗೆ ಮಡಿಕೇರಿ ಕಡೆಯಿಂದ ಮೈಸೂರಿನತ್ತ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿದ್ದ ಮೂರ್ನಾಡಿನ ಲಾರಿ, ಅಪಘಾತದ ನಂತರ ರಸ್ತೆ ಬದಿ ನಿಂತಿದ್ದ ಬಲೆನೊ ಕಾರಿನ ಮೇಲೆ ಬಿದ್ದಿದೆ. ಇದರಿಂದ ಬೊಲೆನ ಕಾರು ಇನ್ನಷ್ಟು ಹಾನಿಗೊಳಗಾಗಿದೆ.