ಸುಂಟಿಕೊಪ್ಪ:ಪ್ರಕರಣ ದಾಖಲಾಗಿ 4 ವರ್ಷ ಕಳೆದರೂ ಪತ್ತೆಯಾಗದ ಆರೋಪಿಗಳು
admincoorgdaily

ಮಡಿಕೇರಿ: ಮನೆಯಲ್ಲಿ ಇದ್ದಿದ್ದೆಲ್ಲ ಕಳೆದುಕೊಂಡು ಇಂದಿಗೂ ನ್ಯಾಯಕ್ಕಾಗಿ ಪರದಾಡುತ್ತಿದ್ದೇನೆ ಎಂದು ಡರೋಡೆಗೊಳಗಾದ ಮಹಿಳೆ ಸರೋಜಿನಿ ತಮ್ಮ ಅಳಲನ್ನು ತೋಡಿಕೊಂಡರು. ಸುಂಟಿಕೊಪ್ಪ ಸಮೀಪದ ಹರದೂರು ಗ್ರಾಮದ ಹಾಲ್‌ಬೈಲಿನಲ್ಲಿ ಒಂಟಿಮನೆಯಲ್ಲಿ ವಾಸಿಸುತ್ತಿದ್ದ ತನ್ನ ಮನಗೆ 2021 ಏ.27ರ ಸಂಜೆ 7:30ರ ವೇಳೆ ಕಳ್ಳರು ನುಗ್ಗಿದ್ದರು.
ಮನೆಯಲ್ಲಿದ್ದ ರೂ.35,000 ನಗದು ಹಾಗೂ ಲಾಕರ್‌ನಲ್ಲಿಟ್ಟಿದ್ದ 32 ಗ್ರಾಂ ಚಿನ್ನದ ಕರಿಮಣಿ ಸರ, 2 ಗ್ರಾಂ ಉಂಗುರ, 12 ಗ್ರಾಂ ಬಳೆಗಳನ್ನು ದೋಚಿ ಪರಾರಿಯಾಗಿದ್ದರು. ಮರುದಿನ ಸುಂಟಿಕೊಪ್ಪ ಠಾಣೆಗೆ ದೂರು ನೀಡಲಾಗಿತ್ತು. ಪ್ರಕರಣ ದಾಖಲಾಗಿ 4 ವರ್ಷ ಕಳೆದರೂ ಆರೋಪಿಗಳ ಪತ್ತೆಯಾಗಿಲ್ಲ ಎಂದು ಸರೋಜಿನಿ ಆರೋಪಿಸಿದರು.
ಒಂಟಿ ಮಹಿಳೆ ಎಂಬ ಕಾರಣಕ್ಕೆ ನನ್ನ ಪ್ರಕರಣವನ್ನು ನಿರ್ಲಕ್ಷಿಸಲಾಗುತ್ತಿದೆ. ತನಿಖೆ ಚುರುಕುಗೊಳಿಸಿ ದರೋಡೆಕೋರರನ್ನು ಶೀಘ್ರ ಪತ್ತೆ ಹಚ್ಚಿ ನನ್ನ ವಸ್ತುಗಳನ್ನು ವಾಪಸ್ ಕೊಡಿಸಬೇಕು ಎಂದು ಪೊಲೀಸ್ ಇಲಾಖೆಗೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಸಂಬಂಧಿ ದಿನೇಶ್ ಉಪಸ್ಥಿತರಿದ್ದರು.