ಮೆಡಿಕಲ್ ಶಾಪ್ ಬಂದ್ ಗೆ ಶನಿವಾರಸಂತೆಯಲ್ಲಿ ಬೆಂಬಲ:ಹತ್ತಕ್ಕೂ ಹೆಚ್ಚು ಮೆಡಿಕಲ್ ಶಾಪ್ ಗಳು ಬಂದ್

May 20, 2026 - 13:12
 0  330
ಮೆಡಿಕಲ್ ಶಾಪ್ ಬಂದ್ ಗೆ ಶನಿವಾರಸಂತೆಯಲ್ಲಿ ಬೆಂಬಲ:ಹತ್ತಕ್ಕೂ ಹೆಚ್ಚು ಮೆಡಿಕಲ್ ಶಾಪ್ ಗಳು ಬಂದ್

ಶನಿವಾರಸಂತೆ::-ಆನ್‌ಲೈನ್ ಮೂಲಕ ಔಷಧಿ ಮಾರಾಟ ಮಾಡುತ್ತಿರುವ ದಂಧೆಯಿಂದ ಔಷಧಿ ಮಾರಾಟ ಅಂಗಡಿಗಳಿಗೆ ಹಲವಾರು ಸಮಸ್ಯೆಯಾಗುತ್ತಿರುವುದನ್ನು ವಿರೋಧಿಸಿ ಮತ್ತು ಸರಕಾರ ಆನ್‌ಲೈನ್‌ನಲ್ಲಿ ಔಷಧಿ ಮಾರಾಟವನ್ನು ನಿಶೇಧಿಸುವಂತೆ ಎ.ಐ.ಒ.ಸಿ.ಡಿ ಮತ್ತು ಔಷಧಿ ಅಂಗಡಿಗಳ ಮಾಲೀಕರು ರಾಜ್ಯ ವ್ಯಾಪ್ತಿಯಲ್ಲಿ ಔಷಧಿ ಅಂಗಡಿಗಳನ್ನು ಬುಧವಾರ ಮತ್ತು ಗುರುವಾರ ಬಂದ್ ಗೊಳಿಸಿ ಪ್ರತಿಭಟನೆಗೆ ಸಹಕಾರ ನೀಡುವಂತೆ ನೀಡಿದ ಕರೆಗೆ ಶನಿವಾರಸಂತೆ ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ ದೊರಕಿದೆ.

ಶನಿವಾರಸಂತೆ ಪಟ್ಟಣದಲ್ಲಿ 10 ಕಿಂತ ಹೆಚ್ಚು ಔಷಧಿ ಅಂಗಡಿಗಳಿವೆ.ಬುಧವಾರ ಪಟ್ಟಣದಲ್ಲಿರುವ ಎಲ್ಲಾ ಔಷಧಿ ಮಾರಾಟ ಅಂಗಡಿ ಮಾಲೀಕರು ಅಂಗಡಿಗಳನ್ನು ಬಂದ್ ಗೊಳಿಸಿ ಪ್ರತಿಭಟನೆಗೆ ಸಹಕಾರ ನೀಡಿದ್ದಾರೆ. ಔಷಧಿ ಅಂಗಡಿಗಳು ಬಂದ್‌ಗೊಳಿಸಿರುವ ಹಿನ್ನಲೆಯಲ್ಲಿ ಖಾಸಗಿ ಕ್ಲಿನಿಕ್‌ಗೆ ಚಿಕಿತ್ಸೆಗೆ ಹೋಗಿದ್ದ ರೋಗಿಗಳಿಗೆ ವೈದ್ಯರು ಬರೆದುಕೊಟ್ಟ ಔಷಧಿ, ಮಾತ್ರೆಗಳನ್ನು ಕೊಳ್ಳಲು ಹೋದ ಗ್ರಾಹಕರು ಔಷಧಿ ಅಂಗಡಿಗಳನ್ನು ಬಂಧ್‌ಗೊಳಿಸಿರುವುದನ್ನು ಗಮನಿಸಿ ಪರದಾಡುತ್ತಿರುವುದು ಕಂಡು ಬಂದಿತು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0