Kodagu

ಅಖಿಲ ಭಾರತ ನೃತ್ಯ ಸ್ಪರ್ಧೆಯ ಸೀಸನ್ 9ರಲ್ಲಿ ಭರತನಾಟ್ಯ ವಿಭಾಗದಲ್ಲಿ ಗೋಣಿಕೊಪ್ಪದ ಸುರಕ್ಷಾ ಪ್ರಥಮ

admincoorgdaily

ಅಖಿಲ ಭಾರತ ನೃತ್ಯ ಸ್ಪರ್ಧೆಯ ಸೀಸನ್ 9ರಲ್ಲಿ ಭರತನಾಟ್ಯ ವಿಭಾಗದಲ್ಲಿ ಗೋಣಿಕೊಪ್ಪದ  ಸುರಕ್ಷಾ ಪ್ರಥಮ

ಗೋಣಿಕೊಪ್ಪ: ಬೆಂಗಳೂರಿನ ಕಲಾಮಂಟಪ ವತಿಯಿಂದ ಆಯೋಜಿಸಿದ್ದ ಅಖಿಲ ಭಾರತ ನೃತ್ಯ ಸ್ಪರ್ಧೆಯ ಸೀಸನ್ 9ರಲ್ಲಿ ಭರತನಾಟ್ಯ ವಿಭಾಗದಲ್ಲಿ ಗೋಣಿಕೊಪ್ಪದ ಸುರಕ್ಷಾ ಪ್ರಥಮ ಬಹುಮಾನ ಪಡೆದು ಸಾಧನೆ ಮಾಡಿದ್ದಾರೆ. ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಪ್ರತಿಭಾನ್ವಿತ ಸ್ಪರ್ಧಿಗಳ ನಡುವೆ ನಡೆದ ಸ್ಪರ್ಧೆಯಲ್ಲಿ ಸುರಕ್ಷಾ ಅವರ ಮನೋಜ್ಞ ಭರತನಾಟ್ಯ ಪ್ರದರ್ಶನ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿ ಪ್ರಥಮ ಸ್ಥಾನ ಗಳಿಸಿತು.

ಸುರಕ್ಷಾ ಉಮಾ ಮಹೇಶ್ವರಿ ದೇವಸ್ಥಾನದ ಮುಖ್ಯ ಅರ್ಚರ ಶಂಕರ ನಾರಾಯಣ ವೈಲಯ ಹಾಗೂ ಉಷಾ ಶಂಕರ್ ದಂಪತಿ ಗಳ ಪುತ್ರಿ , ಈ ಸಾಧನೆಗೆ ಕುಟುಂಬ ಸದಸ್ಯರು, ಗುರುಗಳು ಹಾಗೂ ಸ್ನೇಹಿತರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲೂ ಇನ್ನಷ್ಟು ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.