Kodagu

ಸುತ್ತೂರು ಶ್ರೀ ಮಡಿಕೇರಿ ಭೇಟಿ ಹಿನ್ನೆಲೆ ಪೂರ್ವಸಿದ್ಧತಾ ಸಭೆ

admincoorgdaily

ಸುತ್ತೂರು ಶ್ರೀ ಮಡಿಕೇರಿ ಭೇಟಿ ಹಿನ್ನೆಲೆ ಪೂರ್ವಸಿದ್ಧತಾ ಸಭೆ

ಮಡಿಕೇರಿ : ಆಗಸ್ಟ್ 8 ರಂದು ಸುತ್ತೂರು ಜಗದ್ಗುರುಗಳು ಮಡಿಕೇರಿ ರಾಜರ ಗದ್ದುಗೆ ಹಾಗೂ ಅರಮನೆಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಶ್ರೀಗಳನ್ನು ಭಕ್ತಿಪೂರ್ವಕವಾಗಿ ಸ್ವಾಗತಿಸುವ ಕುರಿತು ಅಗತ್ಯ ಸಿದ್ದತೆಗಳ ಕುರಿತು ಪರಿಶೀಲನೆ ನಡೆಸಲಾಯಿತು. ಕೊಡಗು ವೀರಶೈವ ಮಹಾಸಭಾದ ಅಧ್ಯಕ್ಷ ರಾದ ಶ್ರೀ ಹೆಚ್.ವಿ.ಶಿವಪ್ಪ, ಪ್ರಧಾನ ಕಾರ್ಯದರ್ಶಿ ಶ್ರೀ ಶಾಂಬಶಿವಯ್ಯ, ಉಪಾಧ್ಯಕ್ಷ ಹೆಚ್.ಪಿ. ಉದಯಕುಮಾರ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಮಡಿಕೇರಿ ವೀರಶೈವ ಸಮಾಜದ ಯುವ ಘಟಕದ ಅಧ್ಯಕ್ಷರಾದ ಎಂ.ಕುಮಾರ್ ಇದ್ದರು.