ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ನೂತನ ಅಧ್ಯಕ್ಷರಾಗಿ ಟಿ.ಜಿ.ಪ್ರೇಮಕುಮಾರ್, ಕಾರ್ಯದರ್ಶಿಯಾಗಿ ಭಾರತಿ ರಮೇಶ್ ಆಯ್ಕೆ

Jul 8, 2026 - 10:44
 0  100
ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ನೂತನ ಅಧ್ಯಕ್ಷರಾಗಿ ಟಿ.ಜಿ.ಪ್ರೇಮಕುಮಾರ್, ಕಾರ್ಯದರ್ಶಿಯಾಗಿ ಭಾರತಿ ರಮೇಶ್ ಆಯ್ಕೆ

ಮಡಿಕೇರಿ:ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ನೂತನ ಅಧ್ಯಕ್ಷರಾಗಿ ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯರೂ ಆದ ಸೋಮವಾರಪೇಟೆ ತಾಲ್ಲೂಕು‌ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ, ಮೂಲತಃ ಕುಶಾಲನಗರ ತಾಲ್ಲೂಕಿನ ತೊರೆನೂರು ಗ್ರಾಮದ ಟಿ.ಜಿ. ಪ್ರೇಮಕುಮಾರ್ ಆಯ್ಕೆಯಾಗಿರುತ್ತಾರೆ.

ಮಡಿಕೇರಿಯ ಕೊಡಗು ಪತ್ರಿಕಾ ಭವನದ ಸಭಾಂಗಣದಲ್ಲಿ ಇತ್ತೀಚೆಗೆ ಬಳಗದ ಹಿಂದಿನ ಆಡಳಿತ‌ ಮಂಡಳಿಯ ಅಧ್ಯಕ್ಷ ಲೋಕನಾಥ ಅಮೆಚೂರ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಬಳಗದ ನೂತನ ಆಡಳಿತ ಮಂಡಳಿಯಲ್ಲಿ ಸರ್ವಾನುಮತದಿಂದ ಈ ಆಯ್ಕೆ ನಡೆಸಲಾಯಿತು. ಬಳಗದ ಉಪಾಧ್ಯಕ್ಷರಾಗಿ ಕುಶಾಲನಗರದ ಎಂ.ಇ. ಮೊಹಿದ್ದೀನ್ , ಮಡಿಕೇರಿಯ ರೇವತಿ ರಮೇಶ್, ಗೌರವ ಕಾರ್ಯದರ್ಶಿಯಾಗಿ ಮಡಿಕೇರಿಯ ಭಾರತಿ ರಮೇಶ್, ಕೋಶಾಧಿಕಾರಿಯಾಗಿ ಬೆಟ್ಟಗೇರಿಯ ಕಡ್ಲೇರ ತುಳಸಿ ಮೋಹನ್, ಸಹ ಕಾರ್ಯದರ್ಶಿಯಾಗಿ ಹೆಬ್ಬಾಲೆಯ ಕೆ.ವಿ ಉಮೇಶ್ ಅವರನ್ನು ಆರಿಸಲಾಯಿತು.

ನಿರ್ದೇಶಕರುಗಳಾಗಿ ಎಂ.ಪಿ ಕೇಶವ ಕಾಮತ್, ಟಿ.ಪಿ ರಮೇಶ್, ಅಂಬೇಕಲ್ ನವೀನ್, ಕೆ. ಟಿ. ಬೇಬಿ ಮ್ಯಾಥ್ಯು, ನೆರವಂಡ ಉಮೇಶ್, ಲೋಕನಾಥ್ ಅಮೆಚೂರ್, ಶ್ವೇತಾ ರವೀಂದ್ರ, ಬಿ. ಆರ್. ಜೋಯಪ್ಪ, ಪಿ.ಪಿ ಸುನಿತಾ ಅವರನ್ನು ಆಯ್ಕೆ ಮಾಡಲಾಯಿತು. ಗೌರವ ಸಲಹೆಗಾರರಾಗಿ ಬಿ.ಎ ಷಂಶುದ್ದೀನ್, ಎಸ್.ಐ. ಮುನೀರ್ ಅಹ್ಮದ್, ಜಯಪ್ಪ ಹಾನಗಲ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಮಹಾಸಭೆಯಲ್ಲಿ ಕಳೆದ ಗೌರವ ಕಾರ್ಯದರ್ಶಿ ಭಾರತಿ ರಮೇಶ್ ವಾರ್ಷಿಕ ವರದಿಯನ್ನು ಮಂಡಿಸಿದರು.

ಕೋಶಾಧಿಕಾರಿ ಕಡ್ಲೇರ ತುಳಸಿ ಮೋಹನ್ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿ ಸಭೆಯ ಒಪ್ಪಿಗೆ ಪಡೆದರು. ಮಹಾಸಭೆಯ ಪ್ರಾರಂಭದಲ್ಲಿ ನಿಧನ ಹೊಂದಿದ ಸಂಘದ ಸದಸ್ಯರುಗಳಾದ ಲಿಖಾಯತ್ ಆಲಿ, ಬಿ.ಎನ್. ಮನು ಶೆಣೈ, ಟಿ.ಸಿ ತಮ್ಮಯ್ಯ, ಕೇಶವ ಪೆರಾಜೆ ಅವರ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ಸೂಚಿಸಲಾಯಿತು ಮಹಾಸಭೆಯಲ್ಲಿ ಬಳಗದ ಸದಸ್ಯರುಗಳಾದ ಚಂದನ್ ಕಾಮತ್, ಪ್ರೇಮ ರಾಘವಯ್ಯ ಮತ್ತಿತರರು ಉಪಸ್ಥಿತರಿದ್ದರು. ಬಳಗದ ಉಪಾಧ್ಯಕ್ಷೆ ರೇವತಿ ರಮೇಶ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಭಾರತಿ ರಮೇಶ್ ನಿರೂಪಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0