ವಿಕಲಚೇತನರ ತಾಲೂಕು ಮಟ್ಟದ ಕ್ರೀಡಾಕೂಟ

Nov 28, 2025 - 15:58
 0  245
ವಿಕಲಚೇತನರ ತಾಲೂಕು ಮಟ್ಟದ ಕ್ರೀಡಾಕೂಟ

ಸಿದ್ದಾಪುರ:- ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನ ವಿಕಲಚೇತನರಿಗೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಶೇಷ ಚೇತನರು ಕುಣಿದು ಸಂಭ್ರಮಿಸಿದರು.

 ಪೊನ್ನಂಪೇಟೆ ಶಿಶು ಅಭಿವೃದ್ಧಿ ಇಲಾಖೆ, ಗೋಣಿಕೊಪ್ಪ ಗ್ರಾಮ ಪಂಚಾಯಿತಿ, ಸತ್ಯಸಾಯಿ ಸೇವಾ ಟ್ರಸ್ಟ್, ಪಾಲಿಬೆಟ್ಟ ಚೆಶೈರ್ ಹೋಮ್, ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಯಕಿಯರ ಸಂಘಟನೆ, ತಾಲೂಕು ಎಂಆರ್ ಡಬ್ಲ್ಯೂ, ವಿ.ಆರ್.ಡಬ್ಲ್ಯೂ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

 ಚೆಶೈರ್ ಹೋಮ್, ಆಡಳಿತ ಮಂಡಳಿ ಅಧ್ಯಕ್ಷೆ ಗೀತಾ ಚೆಂಗಪ್ಪ ತಾಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟಿಸಿದರು ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಮಾತನಾಡಿ,ವಿಶೇಷ ಚೇತನರ ಪೋಷಣೆ ಜವಾಬ್ದಾರಿಯಲ್ಲಿ ತ್ಯಾಗವೇ ಹೆಚ್ಚಿರುತ್ತದೆ. ಪಾಲಕರು, ಕುಟುಂಬ ಹಾಗೂ ವಿಶೇಷ ಶಾಲೆಗಳಲ್ಲಿನ ಸಿಬ್ಬಂದಿ ವಿಶೇಷ ಚೇತನರಿಗೆ ನೆರವಾಗಿರುವುದು ಗೌರಯುತವಾಗಿರುತ್ತದೆ. ಅದೇ ರೀತಿ ಪ್ರೋತ್ಸಾಹ ಮುಖ್ಯ ಎಂದರು.

ಚೆಶೈರ್ ಹೋಮ್ ಮುಖ್ಯ ಶಿಕ್ಷಕ ಶಿವರಾಜ್ ಮಾತನಾಡಿ, ತಾಲೂಕಿನಲ್ಲಿ ಕ್ರೀಡೆ ಆಯೋಜಿ ಸಲು ದಾನಿಗಳ ಪ್ರೋತ್ಸಾಹವೇ ಕಾರಣ, ಪ್ರತೀ ಹಂತಕ್ಕೂ ಸಾರ್ವಜನಿಕರ ಬೆಂಬಲ ಮಕ್ಕಳ ಉತ್ಸಾಹಕ್ಕೆ ಕಾರಣವಾಗಿದೆ ಎಂದರು.

 ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ವಿಮಲಾ, ಗೋಣಿಕೊಪ್ಪ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಕುಟ್ಟಂಜೀಟ್ಟೀರ ತಿಮ್ಮಯ್ಯ, ಪೊನ್ನಂಪೇಟೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪೂಣಚ್ಚ, ಸಹಾಯಕ ಶಿಶು ಯೋಜನಾಧಿಕಾರಿ ರೀತಾ,ಗ್ರಾ. ಪಂ. ಸದ್ಯಸೆ ನೂರೇರ ರತಿ, ಸ್ವಾಮಿ ವಿವೇಕಾನಂದ ಮೂಮೆಂಟ್ ಕಾರ್ಯಕ್ರಮ ನಿರ್ವಾಹಕ ಬೊರಪ್ಪ, ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಚ್. ಕೆ ಕುಮಾರ್, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ನಳಿನಾಕ್ಷಿ, ಖಜಾಂಜಿ ರಾಜೇಶ್ವರಿ ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0