ರಕ್ತದಾನ ಮಾಡಿ ಮಾದರಿಯಾದ ಸಿದ್ದಾಪುರದ ಮುನವ್ವಿರುಲ್ ಇಸ್ಲಾಮ್ ಮದರಸ ಅಧ್ಯಾಪಕರು

ರಕ್ತದಾನ ಮಾಡಿ ಮಾದರಿಯಾದ ಸಿದ್ದಾಪುರದ ಮುನವ್ವಿರುಲ್ ಇಸ್ಲಾಮ್ ಮದರಸ ಅಧ್ಯಾಪಕರು

ಸಿದ್ದಾಪುರ:ಎಸ್. ಕೆ. ಎಸ್. ಎಸ್. ಎಫ್ ಸಿದ್ದಾಪುರ ಶಾಖೆ ಮತ್ತು ಕೊಡಗು ಬ್ಲಡ್ ಡೋನರ್ಸ್ ಮಡಿಕೇರಿ ಇದರ ಸಂಯುಕ್ತ ಆಶ್ರಯದಲ್ಲಿ, ಕೊಡಗು ಜಿಲ್ಲೆಯ ರಕ್ತ ನಿಧಿ ಕೇಂದ್ರದಲ್ಲಿನ ರಕ್ತದ ಕೊರೆತೆಯನ್ನು ಮನಗಂಡು ಸಿದ್ದಾಪುರದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರದಲ್ಲಿ ಸಾರ್ವಜನಿಕರು ಗಳು ಪದಾಧಿಕಾರಿಗಳು ಹಾಗೂ ಸಿದ್ದಾಪುರ ಮದಸರ ಅಧ್ಯಾಪಕರಾದ ಏಳು ಮಂದಿ ಧಾರ್ಮಿಕ ಗುರುಗಳು ರಕ್ತ ದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ.