ರೋಟರಿ ಮಡಿಕೇರಿ ವುಡ್ಸ್ ನಿಂದ ಶಿಕ್ಷಕರಿಗೆ ಸನ್ಮಾನ
ಮಡಿಕೇರಿ:ರೋಟರಿ ಮಡಿಕೇರಿ ವುಡ್ಸ್ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿಕ್ಷಣ ಕ್ಷೇತ್ರದಲ್ಲಿ ಕೊಡುಗೆ ನೀಡುತ್ತಾ ಬಂದಿರುವ ವಿವಿಧ ಶಾಲಾಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಒಂಭತ್ತು ಶಿಕ್ಷಕರನ್ನು ಆತ್ಮೀಯವಾಗಿ ನೇಷನ್ ಬಿಲ್ಡರ್ ಸನ್ಮಾನಿಸಲಾಯಿತು. ಶ್ರೀಮತಿ ರಾಖಿ ಪೂವಣ್ಣ, ಶ್ರೀಮತಿ ಸವಿತಾ ಪ್ರಶಾಂತ್, ಶ್ರೀಮತಿ ವೀಣಾ ದಿವಾಕರ್, ಶ್ರೀಮತಿ ಉಷಾ ಪ್ರದೀಪ್, ಶ್ರೀಮತಿ ಶಶಿಕಲಾ ರವೀಂದ್ರ, ಶ್ರೀಮತಿ ಕಾವೇರಿ, ಶ್ರೀಮತಿ ವಿದ್ಯಾ ಬಿ.ಸಿ, ಶ್ರೀಮತಿ ಶೋಭಿತಾ ರವೀಂದ್ರ ಮತ್ತು ಶ್ರೀ ಡೀನಾ ಹೆಚ್.ಡಿ ಕ್ಲಬ್ ನ ಸನ್ಮಾನಕ್ಕೆ ಪಾತ್ರರಾದರು.
ಕಾರ್ಯಕ್ರಮದಲ್ಲಿ ಮಾತನಾಡಿದ ರೋಟರಿ ವಲಯ ಆರರ ಎ.ಜಿ. ರೊ.ಧಿಲನ್ ಚಂಗಪ್ಪ ಮಾತನಾಡಿ, ವುಡ್ಸ್ ಸಂಸ್ಥೆ ಆರಂಭದಿಂದಲೂ ಉತ್ತಮ ಕೆಲಸಗಳನ್ನು ಮಾಡುತ್ತಾ ಬಂದಿದೆ. ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ವೇಗವಾಗಿ ಅತ್ಯುತ್ತಮ ಕ್ಲಬ್ ಆಗುವತ್ತ ಹೆಜ್ಜೆ ಹಾಕುತ್ತಿದೆ. ಭವಿಷ್ಯದ ದಿನಗಳಲ್ಲೂ ಈ ರೀತಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ರೋಟರಿ ಜಿಲ್ಲೆಯಲ್ಲಿ ಬೆಳಗುವಂತಾಗಲಿ ಎಂದು ಹಾರೈಸಿದರು. ಝೋನಲ್ ಲೆಫ್ಟಿನೆಂಟ್ ರೊ.ಕೆ.ಸಿ ಕಾರ್ಯಪ್ಪನವರು ಮಾತನಾಡಿ ಶಿಕ್ಷಕರು ಭವಿಷ್ಯವನ್ನು ರೂಪಿಸುತ್ತಾರೆ. ಶಿಕ್ಷಕರನ್ನು ಗುರುತಿಸಿ ಸನ್ಮಾನಿಸುವುದು ರಾಷ್ಟ್ರಕ್ಕೆ ಕೊಡುಗೆ ನೀಡಿದಂತೆ ಎಂದು ಬಣ್ಣಿಸಿದರು.
ಕ್ಲಬ್ ಸದಸ್ಯ ರೊ.ಪ್ರಶಾಂತ್ ಶಿಕ್ಷಕರ ದಿನಾಚರಣೆಯ ಹಿನ್ನಲೆಯನ್ನು ಸಾಂದರ್ಭಿಕವಾಗಿ ಹಂಚಿಕೊಂಡರು. ಕ್ಲಬ್ ಅಧ್ಯಕ್ಷರಾದ ರೊ.ಕರಣ್ ಕುಂದರ್ ಮಾತನಾಡಿ ಮುಂದಿನ ದಿನಗಳಲ್ಲಿ ಕ್ಲಬ್ ವತಿಯಿಂದ ನಡೆಸಲಾಗುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು. ಆರಂಭದಲ್ಲಿ ಕ್ಲಬ್ ಕಾರ್ಯದರ್ಶಿಗಳಾದ ರೊ.ಪ್ರಮಿಳಾ ಶೆಟ್ಟಿಯವರು ವರದಿವಾಚಿಸಿ ಕೊನೆಯಲ್ಲಿ ವಂದನಾರ್ಪಣೆಯನ್ನು ನೆರವೇರಿಸಿದರು. ಇದೇ ಸಂದರ್ಭ ಶ್ರೀ ಮನೋಹರ್ ಹಾಗು ಶ್ರೀಮತಿ ವಿಸ್ಮಯಿ ಚಕ್ರವರ್ತಿಯವರನ್ನು ಕ್ಲಬ್ ಗೆ ನೂತನ ಸದಸ್ಯರನ್ನಾಗಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯ್ತು. ಸಭಾ ಕಾರ್ಯಕ್ರಮದ ನಂತರ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದಲ್ಲಿ ರೋಟರಿ ಮಿಸ್ಟಿಹಿಲ್ಸ್ ನ ರೊ.ಅನಂತಶಯನ ಅವರು ಹಾಜರಿದ್ದು ಶುಭ ಹಾರೈಸಿದರು. ಕ್ಲಬ್ ನ ಎಲ್ಲಾ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.