ಪತ್ನಿಯನ್ನು ಕೊಲೆಮಾಡಿ, ವಿಡಿಯೋ ಕಳುಹಿಸಿ ಆತ್ಮಹತ್ಯೆಗೆ ಶರಣಾದ ಟೆಕ್ಕಿ

Sep 30, 2025 - 13:11
 0  769
ಪತ್ನಿಯನ್ನು ಕೊಲೆಮಾಡಿ, ವಿಡಿಯೋ ಕಳುಹಿಸಿ ಆತ್ಮಹತ್ಯೆಗೆ ಶರಣಾದ ಟೆಕ್ಕಿ
Photo credit: NDTV

ಗುರುಗ್ರಾಮ: ಗುರುಗ್ರಾಮದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ಪತ್ನಿಯನ್ನು ಕೊಲೆ ಮಾಡಿ, ಆತ್ಮಹತ್ಯೆಗೆ ಶರಣಾಗಿರುವ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ದಂಪತಿಗಳ ನಡುವಿನ ಜಗಳವೇ ಈ ಅಂತ್ಯಕ್ಕೆ ಕಾರಣವಾಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮೃತ ಅಜಯ್ ಕುಮಾರ್ (30) ಉತ್ತರ ಪ್ರದೇಶದ ಮೂಲದವರು. ಅವರ ಪತ್ನಿ ಸ್ವೀಟಿ ಶರ್ಮಾ (28) ಪಶ್ಚಿಮ ಬಂಗಾಳದ ಅಸನ್ಸೋಲ್ ನಿವಾಸಿ. ಮೂರು ವರ್ಷಗಳ ಹಿಂದೆ ಇವರ ವಿವಾಹವಾಗಿದ್ದು, ಇಬ್ಬರೂ ಗುರುಗ್ರಾಮದ ಐಟಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು.

 ಪೊಲೀಸರ ಪ್ರಕಾರ, ಭಾನುವಾರ ಮಧ್ಯಾಹ್ನ 3.15ರ ಸುಮಾರಿಗೆ ಅಜಯ್ ಕುಮಾರ್ ತಮ್ಮ ಸ್ನೇಹಿತನಿಗೆ ವಿಡಿಯೋ ಸಂದೇಶ ಕಳುಹಿಸಿ ಆತ್ಮಹತ್ಯೆಗೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಆ ವಿಡಿಯೋದಲ್ಲಿ ದಂಪತಿಯ ನಡುವೆ ತೀವ್ರ ವಾಗ್ವಾದ ನಡೆದಿರುವುದು ಸ್ಪಷ್ಟವಾಗಿದೆ.

ಸ್ನೇಹಿತನ ಮಾಹಿತಿ ಮೇರೆಗೆ ಪೊಲೀಸರು ಸೆಕ್ಟರ್–37 ರಲ್ಲಿರುವ ಅವರ ಫ್ಲಾಟ್‌ಗೆ ತಲುಪಿದಾಗ, ಸ್ವೀಟಿ ಶರ್ಮಾ ಅವರ ಶವ ನೆಲದ ಮೇಲೆ ಪತ್ತೆಯಾಯಿತು. ಸ್ಕಾರ್ಫ್‌ನಿಂದ ಕತ್ತು ಹಿಸುಕಿದ ಗುರುತುಗಳು ಕಂಡುಬಂದಿದೆ. ಇದೇ ವೇಳೆ, ಅಜಯ್ ಕುಮಾರ್ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

 “ಅಜಯ್ ಮೊದಲು ಪತ್ನಿಯನ್ನು ಕೊಂದು, ಬಳಿಕ ಆತ್ಮಹತ್ಯೆ ಮಾಡಿಕೊಂಡಿರಬಹುದು” ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆಗೆ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ.

 ಸ್ವೀಟಿ ಶರ್ಮಾ ಅವರ ಕುಟುಂಬವು ಕೊಲೆ ಆರೋಪ ಹೊರಿಸಿ ಅಜಯ್ ಕುಮಾರ್ ವಿರುದ್ಧ ದೂರು ದಾಖಲಿಸಿದೆ. ಪ್ರಕರಣದ ತನಿಖೆ ಮುಂದುವರಿದಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 0