ಡಿವೈಡರ್‌ ಗೆ ಡಿಕ್ಕಿ ಹೊಡೆದ ಥಾರ್ ಜೀಪ್; ಭೀಕರ ಅಪಘಾತಕ್ಕೆ 5 ಮಂದಿ ಬಲಿ

Sep 27, 2025 - 11:26
 0  1.3k
ಡಿವೈಡರ್‌ ಗೆ ಡಿಕ್ಕಿ ಹೊಡೆದ ಥಾರ್ ಜೀಪ್;  ಭೀಕರ ಅಪಘಾತಕ್ಕೆ 5 ಮಂದಿ ಬಲಿ
Photo credit: NDTV

ನವದೆಹಲಿ: ಗುರುಗ್ರಾಮ್ ಹೆದ್ದಾರಿಯಲ್ಲಿ ಶನಿವಾರ ಬೆಳಗಿನ ಜಾವ ಸಂಭವಿಸಿದ ಭೀಕರ ಅಪಘಾತದಲ್ಲಿ ಐವರು ಮೃತಪಟ್ಟಿದ್ದಾರೆ. ಬೆಳಿಗ್ಗೆ ಸುಮಾರು 4:30ಕ್ಕೆ ವೇಗವಾಗಿ ಚಲಿಸುತ್ತಿದ್ದ ಮಹೀಂದ್ರಾ ಥಾರ್ ಜೀಪ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದೆ.

 ಪೊಲೀಸರ ಪ್ರಕಾರ, ಉತ್ತರ ಪ್ರದೇಶದಿಂದ ಗುರುಗ್ರಾಮ್‌ ಗೆ ಪ್ರಯಾಣಿಸುತ್ತಿದ್ದ ಮೂವರು ಪುರುಷರು ಹಾಗೂ ಮೂವರು ಮಹಿಳೆಯರು ಕಾರಿನಲ್ಲಿ ಇದ್ದರು. ಡಿಕ್ಕಿಯ ತೀವ್ರತೆಯಿಂದ ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ, ಉಳಿದಿಬ್ಬರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರಲ್ಲಿ ಒಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ಮತ್ತೊಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ಅಪಘಾತದ ತೀವ್ರತೆಗೆ ಥಾರ್ ಜೀಪ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮಹೀಂದ್ರಾ ಥಾರ್ ವಾಹನವು ವೇಗದ ಚಾಲನೆ ಹಾಗೂ ಅಪಘಾತ ಪ್ರಕರಣಗಳಿಂದ ನಿರಂತರವಾಗಿ ಸುದ್ದಿಯಲ್ಲಿದೆ. ಕಳೆದ ತಿಂಗಳು ದೆಹಲಿಯ ಮೋತಿ ನಗರದಲ್ಲಿ ನಡೆದ ಅಪಘಾತದಲ್ಲಿ ಥಾರ್ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟಿದ್ದರು. ಚಾಣಕ್ಯಪುರಿ ಪ್ರದೇಶದಲ್ಲಿಯೂ ಇದೇ ರೀತಿಯ ಘಟನೆ ಸಂಭವಿಸಿತ್ತು. ಅಲ್ಲದೆ, ಈ ತಿಂಗಳ ಆರಂಭದಲ್ಲಿ ದೆಹಲಿಯ ಪ್ರೀತ್ ವಿಹಾರ್‌ನ ಶೋ ರೂಂನಿಂದ ಹೊಸದಾಗಿ ಖರೀದಿಸಿದ ಥಾರ್ ಗೆ ಪೂಜೆ ಮಾಡುವ ಆಕಸ್ಮಿಕವಾಗಿ ಎಕ್ಸಲರೇಟರ್ ಒತ್ತಿದ್ದರಿಂದ ಗಾಜಿನ ಗೋಡೆಯನ್ನು ಒಡೆದು ಕಾರು ಮಹಡಿಯಿಂದ ಉರುಳಿ ಬಿದ್ದಿತ್ತು.

What's Your Reaction?

Like Like 1
Dislike Dislike 0
Love Love 0
Funny Funny 1
Angry Angry 1
Sad Sad 1
Wow Wow 0