2026ರ ಜ.3ರಿಂದ ನಾಪೋಕ್ಲುವಿನಲ್ಲಿ ಡೆಕ್ಕನ್ ಯೂತ್ ಕ್ಲಬ್ ಆಶ್ರಯದಲ್ಲಿ 10ನೇ ವರ್ಷದ ನಾಲ್ಕುನಾಡು ಪ್ರೀಮಿಯರ್ ಲೀಗ್ ಕ್ರಿಕೆಟ್

Dec 20, 2025 - 09:14
Dec 20, 2025 - 11:03
 0  92
2026ರ ಜ.3ರಿಂದ ನಾಪೋಕ್ಲುವಿನಲ್ಲಿ ಡೆಕ್ಕನ್ ಯೂತ್ ಕ್ಲಬ್ ಆಶ್ರಯದಲ್ಲಿ 10ನೇ ವರ್ಷದ ನಾಲ್ಕುನಾಡು ಪ್ರೀಮಿಯರ್ ಲೀಗ್ ಕ್ರಿಕೆಟ್

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು :ನಾಪೋಕ್ಲುವಿನ ಡೆಕ್ಕನ್ ಯೂತ್ ಕ್ಲಬ್ ಆಶ್ರಯದಲ್ಲಿ 10ನೇ ವರ್ಷದ ನಾಲ್ಕು ನಾಡು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವನ್ನು 2026ರ ಜನವರಿ 3ರಿಂದ 5ರವರೆಗೆ ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯ ಆಟದ ಮೈದಾನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಪಂದ್ಯಾವಳಿಯ ಆಯೋಜಕರಾದ ಸಹೀದ್ ಅಲವಿ ತಿಳಿಸಿದ್ದಾರೆ.

ನಾಪೋಕ್ಲುವಿನಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಹೀದ್ ಪ್ರತಿ ವರ್ಷದಂತೆ ನಡೆಸಿಕೊಂಡು ಬರುತ್ತಿರುವ ಪಂದ್ಯಾವಳಿಯನ್ನು 2026ರ ಜ.3ರಿಂದ5ರವರೆಗೆ ನಡೆಸಲು ತೀರ್ಮಾನಿಸಲಾಗಿದೆ. ಪಂದ್ಯಾವಳಿಯ ಚಾಲನೆ ಹಾಗೂ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ರಾಜಕೀಯ ನೇತಾರರು ಹಾಗೂ ನಾಪೋಕ್ಲುವಿನ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ.

 ನಾಪೋಕ್ಲು ನಾಲ್ಕುನಾಡು ವಿಭಾಗದ ಎಲ್ಲಾ ಧರ್ಮದ 156 ಕ್ರೀಡಾಪಟುಗಳನ್ನು ಒಳಗೊಂಡ 12ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ. ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ 60 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 33,ಸಾವಿರ ಹಾಗೂ ಆಕರ್ಷಕ ಟ್ರೋಫಿ ನೀಡಲಿದ್ದೇವೆ. ಅದರಂತೆ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಕ್ರೀಡಾಪಟುಗಳಿಗೆ ವೈಯಕ್ತಿಕ ಬಹುಮಾನ ನೀಡಲಾಗುವುದು ಎಂದು ಸಹೀದ್ ತಿಳಿಸಿದರು. ಕ್ರೀಡಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಕ್ರೀಡಾಕೂಟವನ್ನು ಯಶಸ್ಸಿಗೊಳಿಸಬೇಕೆಂದು ಸಹೀದ್ ಮನವಿ ಮಾಡಿದರು. 

 ಸುದ್ದಿಗೋಷ್ಠಿಯಲ್ಲಿ ಪಂದ್ಯಾವಳಿಯ ಸ್ಥಾಪರಾದ ಅಬ್ದುಲ್ ಖಾದರ್,ಸಿ.ಎ. ನೌಫಲ್,ಆಯೋಜಕರಾದ ಪಿ. ಆರ್.ಮುನೀರ್,ಎ.ವಿ. ಸತೀಶ್,ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0