ಏ.27 ರಿಂದ ಚೆಯ್ಯಂಡಾಣೆ ಚೇಲಾವರ ಚೇಲಮಾನಿ ಶ್ರೀ ಚೋಯಿಲಿ ಭಗವತಿ ದೇವಸ್ಥಾನದ 16ನೇ ವಾರ್ಷಿಕೋತ್ಸವ ಆರಂಭ

Apr 26, 2026 - 12:30
 0  55
ಏ.27 ರಿಂದ ಚೆಯ್ಯಂಡಾಣೆ ಚೇಲಾವರ ಚೇಲಮಾನಿ ಶ್ರೀ ಚೋಯಿಲಿ ಭಗವತಿ ದೇವಸ್ಥಾನದ 16ನೇ ವಾರ್ಷಿಕೋತ್ಸವ ಆರಂಭ

ವರದಿ :ಝಕರಿಯ ನಾಪೋಕ್ಲು

ನಾಪೋಕ್ಲು :ಚೆಯ್ಯಂಡಾಣೆ ಸಮೀಪದ ಚೇಲಾವರ ಗ್ರಾಮದ ಚೇಲಮಾನಿ ಶ್ರೀ ಚೋಯಿಲಿ ಭಗವತಿ ದೇವಸ್ಥಾನದ 16ನೇ ವಾರ್ಷಿಕೋತ್ಸವವು ಏ.27 ರಿಂದ 30ರ ವರೆದೆ ವಿವಿಧ ದೈವ ಕೋಲಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.

 ಏ.27 ರಂದು ಬೆಳಿಗ್ಗೆ 9ಗಂಟೆಗೆ ಸ್ವಚ್ಛತಾ ಕಾರ್ಯಕ್ರಮ, ಸಂಜೆ 5ಕ್ಕೆ ಬಾಚಮಂಡ ತಕ್ಕರ ಮನೆಯಿಂದ ಬಂಢಾರ ಆಗಮಿಸುವುದು, ರಾತ್ರಿ 7 ಕ್ಕೆ ದೀಪಾರಾಧನೆ , ತೂಚಂಬಲಿ ಮತ್ತು ದೇವರು ಹೊರಗೆ ಬರುವುದು ಹಾಗೂ ಮಹಾ ಪೂಜೆ ನಡೆಯಲಿದೆ. ಏ.28 ರಂದು ಪ್ರಾತಕಾಲ 5.30 ಗಂಟೆಗೆ ದೇವರ ನೃತ್ಯ 9.30ಕ್ಕೆ ವಿಶೇಷ ಪೂಜೆ,11 ಕ್ಕೆ ಎತ್ತು ಪೋರಾಟ,ತೆಂಗಿನಕಾಯಿಗೆ ಗುಂಡು ಹೊಡೆಯುವುದು,ಮಹಾ ಪೂಜೆ ನಂತರ ಅನ್ನದಾನ ಕಾರ್ಯಕ್ರಮ ನಡೆಯಲಿದೆ.

ಅಂದು ಅಪರಾಹ್ನ 2 ಗಂಟೆಗೆ ದೇವರು ಹೊರಗೆ ಬರುವುದು ಮತ್ತು ನೆರಪು ನೃತ್ಯ,3 ಗಂಟೆಗೆ ದೇವರು ಪೋನ್ನೊಲ ಸಾರ್ಥಾವು ದೇವಸ್ಥಾನಕ್ಕೆ ಮಲೆ ಮುರಿಯುವುದು,ಪೋನ್ನೊಲ ದೇವಸ್ಥಾನದಲ್ಲಿ ಪೂಜೆ,ಸಂಜೆ 7ಕ್ಕೆ ಮಂಟಪದಲ್ಲಿ ವಸಂತ ಪೂಜೆ ರಾತ್ರಿ 8ಕ್ಕೆ ಮಹಾಪೂಜೆ ಮತ್ತು ಅನ್ನದಾನ ನಡೆದ ಬಳಿಕ ರಾತ್ರಿ 9 ಗಂಟೆಗೆ ಭದ್ರಕಾಳಿಗೆ ಬಲಿ ಕೊಡುವುದು ನಡೆಯಲಿದೆ.

ಏ.29 ರಂದು ಬೆಳಿಗ್ಗೆ 9 ಗಂಟೆಯಿಂದ ವಿಶೇಷ ಪೂಜೆ ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ,1.30 ಕ್ಕೆ ವಾರ್ಷಿಕ ಮಹಾಸಭೆ,3ಗಂಟೆಗೆ ದೇವರು ಅವವೃತ ಸ್ನಾನಕ್ಕೆ ಹೊರಡುವುದು ನಂತರ ದೇವರ ನೃತ್ಯ, ಮಹಾಪೂಜೆ,ಅನ್ನದಾನ ನಡೆಯಲಿದೆ.

 ಏ.30 ರ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಭಂಢಾರ ಲೆಕ್ಕ ಮಾಡುವುದು,ಶುದ್ಧ ಕಲಶ, ಸಮಾರಾಧನೆ ಪೂಜೆ,ಮಂತ್ರಾಕ್ಷತೆ,ದೇವತಕ್ಕರ ಮನೆಗೆ ಭಂಡಾರ ಇಳಿಯುವ ಕಾರ್ಯಕ್ರಮ ನಡೆಯಲಿದೆ.

ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ತಕ್ಕ ಮುಖ್ಯಸ್ಥರು ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0