ಆ.22 ರಂದು ಭಾಗಮಂಡಲದಲ್ಲಿ 34ನೇ ವರ್ಷದ ರಾಜ್ಯ ಮಟ್ಟದ ಕೆಸರು ಗದ್ದೆ ಕ್ರೀಡಾಕೂಟ

Aug 14, 2026 - 18:43
 0  87
ಆ.22 ರಂದು ಭಾಗಮಂಡಲದಲ್ಲಿ 34ನೇ ವರ್ಷದ ರಾಜ್ಯ ಮಟ್ಟದ ಕೆಸರು ಗದ್ದೆ ಕ್ರೀಡಾಕೂಟ

ಮಡಿಕೇರಿ ಆ.14 : ಕೊಡಗು ಜಿಲ್ಲಾ ಪಂಚಾಯತ್, ಮಡಿಕೇರಿ, ಜಿಲ್ಲಾಡಳಿತ, ಕೊಡಗು ಜಿಲ್ಲೆ ಯುವ ಸಬಲೀಕರಣ ಮತ್ತು ಮತ್ತು ಕ್ರೀಡಾ ಇಲಾಖೆ, ಮಡಿಕೇರಿ. ಕೊಡಗು ಜಿಲ್ಲಾ ಯುವ ಒಕ್ಕೂಟ ಮಡಿಕೇರಿ, ವಿರಾಜಪೇಟೆ ಸೋಮವಾರಪೇಟೆ ತಾಲ್ಲೂಕು ಯುವ ಒಕ್ಕೂಟ ಹಾಗೂ ಶ್ರೀ ಕೃಷ್ಣ ಯುವಕ ಸಂಘ, ಅಯ್ಯಂಗೇರಿ ಇದರ ಸಂಯುಕ್ತಾಶ್ರದಲ್ಲಿ 2026-27ನೇ ಸಾಲಿನ 34ನೇ ವರ್ಷದ ರಾಜ್ಯ ಮಟ್ಟದ ಮುಕ್ತ ಕೆಸರು ಗದ್ದೆ ಕ್ರೀಡಾಕೂಟ ಮತ್ತು ಆಟೋಟ ಸ್ಪರ್ಧೆಗಳನ್ನು ಆ.22 ರಂದು ಆಯೋಜಿಸಲಾಗಿದೆ.

ರಾಜ್ಯ ಮಟ್ಟದ ಮುಕ್ತ ಕೆಸರು ಗದ್ದೆ ಕ್ರೀಡಾಕೂಟ ಮತ್ತು ಆಟೋಟ ಸ್ಪರ್ಧೆಗಳ ಕುರಿತು ಕ್ರೀಡಾ ಇಲಾಖೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ದಿನಾಂಕವನ್ನು ನಿಗಧಿ ಮಾಡಲಾಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಟಿ.ವಿಸ್ಮಯಿ ಹಾಗೂ ಮಡಿಕೇರಿ ತಾಲ್ಲೂಕು ಯುವ ಒಕ್ಕೂಟದ ಅಧ್ಯಕ್ಷ ಬಾಳಾಡಿ ದಿಲೀಪ್ ಕುಮಾರ್ ಅವರು ಸ್ಪರ್ಧೆಗಳ ಕುರಿತು ಮಾಹಿತಿ ನೀಡಿದರು.  

ಭಾಗಮಂಡಲ ಗ್ರಾಮದ ಬಳ್ಳಡ್ಕ ಅಪ್ಪಾಜಿ ಹಾಗೂ ಅನು ಅವರ ಗದ್ದೆಯಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳು ಆ.21 ರೊಳಗೆ ಹೆಸರು ನೋಂದಾಯಿಸಿಕೊಳ್ಳುವAತೆ ಮನವಿ ಮಾಡಿದರು.

ಜಿಲ್ಲಾ ಯುವ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಪಿ.ಪಿ.ಸುಕುಮಾರ್, ಕೆ.ಮಧು ಮೋಹನ್, ಶ್ರೀಕೃಷ್ಣ ಯುವಕ ಸಂಘದ ಅಧ್ಯಕ್ಷ ಲತೇಶ್, ಗೌರವ ಅಧ್ಯಕ್ಷ ಜೀವನ್ ಕುಮಾರ್, ಉಪಾಧ್ಯಕ್ಷ ರೀತನ್, ಸದಸ್ಯರಾದ ಪ್ರತೀಶ್ ಹಾಗೂ ಮಂಜು ಉಪಸ್ಥಿತರಿದ್ದರು.

ಬೆಳಿಗ್ಗೆ 9 ಗಂಟೆಯಿಂದ ಹಗ್ಗಜಗ್ಗಾಟ ಸ್ಪರ್ಧೆ

ಸಾರ್ವಜನಿಕ ಪುರುಷರ ವಿಭಾಗ 7 ಜನರ ತಂಡ, ಹಗ್ಗ ಜಗ್ಗಾಟ ಸಾರ್ವಜನಿಕ ಮಹಿಳೆಯರ ವಿಭಾಗ 7 ಜನರ ತಂಡ, ವಾಲಿಬಾಲ್ ಸಾರ್ವಜನಿಕ ಪುರುಷರ ವಿಭಾಗ 4 ಜನರ ತಂಡ, ಥ್ರೋಬಾಲ್ ಸಾರ್ವಜನಿಕ ಮಹಿಳೆಯರ ವಿಭಾಗ 6 ಜನರ ತಂಡ.

ಬೆಳಿಗ್ಗೆ 11 ಗಂಟೆಯಿಂದ ಕೆಸರು ಗದ್ದೆ ಓಟದ ಸ್ಪರ್ಧೆಗಳು 

ಕಿರಿಯರ ಪ್ರಾಥಮಿಕ ಶಾಲಾ ಬಾಲಕರು ಹಾಗೂ ಬಾಲಕಿಯರಿಗೆ (1 ರಿಂದ 4ನೇ ತರಗತಿಯವರೆಗೆ), ಹಿರಿಯರ ಪ್ರಾಥಮಿಕ ಶಾಲಾ ಬಾಲಕ ಹಾಗೂ ಬಾಲಕಿಯರಿಗೆ (5 ರಿಂದ 7 ತರಗತಿಯವರೆಗೆ), ಪ್ರೌಢಶಾಲಾ ಬಾಲಕ ಹಾಗೂ ಬಾಲಕಿಯರಿಗೆ (8 ರಿಂದ 10ನೇ ತರಗತಿಯವರೆಗೆ), ಪದವಿ ಪೂರ್ವ ಕಾಲೇಜು ಬಾಲಕ ಹಾಗೂ ಬಾಲಕಿಯರಿಗೆ, ಪದವಿ ಕಾಲೇಜು ಬಾಲಕ ಹಾಗೂ ಬಾಲಕಿಯರಿಗೆ, ಸಾರ್ವಜನಿಕ ಪುರುಷರ ಹಾಗೂ ಮಹಿಳೆಯರ ಮುಕ್ತ ಓಟ, ಆಯೋಜಕರಿಗೆ ಓಟದ ಸ್ಪರ್ಧೆ ನಡೆಯಲಿದೆ.

ಸಂಜೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದು ವಿ.ಟಿ.ವಿಸ್ಮಯಿ ಮಾಹಿತಿ ನೀಡಿದರು.  

ಹಗ್ಗ-ಜಗ್ಗಾಟಕ್ಕೆ ಸಾರ್ವಜನಿಕ (ಪುರುಷರ ವಿಭಾಗ) ತಂಡಗಳಿಗೆ ಪ್ರವೇಶ ಶುಲ್ಕ ರೂ.1,500, ಸಾರ್ವಜನಿಕ (ಮಹಿಳೆಯರ ವಿಭಾಗಕ್ಕೆ ಹಗ್ಗ-ಜಗ್ಗಾಟ ತಂಡಗಳಿಗೆ ಪ್ರವೇಶ ಶುಲ್ಕ 1,000 ಆಗಿರುತ್ತದೆ. ತಂಡಗಳು ಆ.21 ಸಂಜೆ 5 ಗಂಟೆಯ ಒಳಗಾಗಿ ತಂಡದ ಹೆಸರು ನೋಂದಾವಣೆ ಮಾಡಿ ಭಾಗವಹಿಸುವಿಕೆಯನ್ನು ಖಾತರಿಪಡಿಸಬೇಕು.

ವಾಲಿಬಾಲ್ ಸಾರ್ವಜನಿಕ (ಪುರುಷರ ವಿಭಾಗ) ತಂಡಗಳಿಗೆ ಪ್ರವೇಶ ಶುಲ್ಕ ರೂ.1,000. ಥ್ರೋಬಾಲ್ ಸಾರ್ವಜನಿಕ (ಮಹಿಳೆಯರ ವಿಭಾಗ) ತಂಡಗಳಿಗೆ ಪ್ರವೇಶ ಶುಲ್ಕ ರೂ.1,000 ಆಗಿರುತ್ತದೆ. ತಂಡಗಳು ಆ.21 ಸಂಜೆ 5 ಗಂಟೆಯ ಒಳಗಾಗಿ ತಂಡದ ಹೆಸರು ನೋಂದಾವಣೆ ಮಾಡಿ ಭಾಗವಹಿಸುವಿಕೆಯನ್ನು ಖಾತರಿಪಡಿಸಬೇಕು ಭಾಗವಹಿಸುವ ತಂಡಗಳು ಕಡ್ಡಾಯವಾಗಿ ಸಮಯ ಪರಿಪಾಲನೆ ಮಾಡಬೇಕು. ಕ್ರೀಡಾ ಸ್ಪರ್ಧೆಗಳನ್ನು ಬೆಳಗ್ಗೆ 9 ಗಂಟೆಯಿAದ ಪ್ರಾರಂಭಿಸಲಾಗುವುದು. ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ (ಪ್ರಥಮ ಹಾಗೂ ದ್ವಿತೀಯ ಸ್ಥಾನಗಳಿಗೆ) ಪಾರಿತೋಷಕ ಮತ್ತು ನಗದು ಬಹುಮಾನಗಳನ್ನು ನೀಡಲಾಗುವುದು. ಓಟದ ಸ್ಪರ್ಧೆಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಪಾರಿತೋಷಕ ಮತ್ತು ನಗದು ಹಾಗೂ ಪ್ರಶಂಸನಾ ಪತ್ರವನ್ನು ನೀಡಲಾಗುವುದು. ತೀರ್ಪುಗಾರರ ಹಾಗೂ ಆಯೋಜಕರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ತಿಳಿಸಿದರು.

ವಾಲಿಬಾಲ್, ಥ್ರೋಬಾಲ್ ನೋಂದಣಿ ಮಾಡುವವರು ಅಭಿಷೇಕ್ 6361621643/ 7337779833 (ಶುಲ್ಕ ರೂ.1000), ಹಗ್ಗಜಗ್ಗಾಟ ಬಿದ್ದಿಯಂಡ ಸುಭಾಷ್ 9845053501/ 8431816593 (ಶುಲ್ಕ ರೂ.1500).

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ

ಬಾಳಾಡಿ ದಿಲೀಪ್ ಕುಮಾರ್, ಅಧ್ಯಕ್ಷರು, ತಾಲ್ಲೂಕು ಯುವ ಒಕ್ಕೂಟ ಮಡಿಕೇರಿ-8618568173, ಪಿ.ಪಿ.ಸುಕುಮಾರ್ ನಿಕಟಪೂರ್ವ ಅಧ್ಯಕ್ಷರು, ಕೊಡಗು ಜಿಲ್ಲಾ ಯುವ ಒಕ್ಕೂಟ ಮಡಿಕೇರಿ-9481213920, ಲತೇಶ್, ಅಧ್ಯಕ್ಷರು, ಶ್ರೀ ಕೃಷ್ಣ ಯುವಕ, ಸಂಘ, ಅಯ್ಯಂಗೇರಿ-9483662610, ಜೀವನ್ ಕುಮಾರ್, ಗೌರವ ಅಧ್ಯಕ್ಷರು, ಶ್ರೀ ಕೃಷ್ಣ ಯುವಕ, ಸಂಘ, ಅಯ್ಯಂಗೇರಿ -9353426073, ರಿತನ್ ಬಿ.ಪಿ ಉಪಾಧ್ಯಕ್ಷರು, ಶ್ರೀ ಕೃಷ್ಣ ಯುವಕ, ಸಂಘ, ಅಯ್ಯಂಗೇರಿ- 7337779833, ಪ್ರತೀಶ್, ಸದಸ್ಯರು, ಶ್ರೀ ಕೃಷ್ಣ ಯುವಕ, ಸಂಘ(ರಿ), ಅಯ್ಯಂಗೇರಿ- 8217801336, ಮಂಜು ಬಿ.ಪಿ., ಸದಸ್ಯರು, ಶ್ರೀ ಕೃಷ್ಣ ಯುವಕ, ಸಂಘ ಅಯ್ಯಂಗೇರಿ- 9632062107

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0