ನಾಳೆಯಿಂದ ಇತಿಹಾಸ ಪ್ರಸಿದ್ಧ ನಾಪೋಕ್ಲು ಬೇತು ಗ್ರಾಮದ ಶ್ರೀ ಮಕ್ಕಿ ಶಾಸ್ತಾವು ದೇವರ ಎಡಮ್ಯಾರು ಹಬ್ಬ ಆರಂಭ

May 1, 2026 - 11:57
 0  179
ನಾಳೆಯಿಂದ ಇತಿಹಾಸ ಪ್ರಸಿದ್ಧ ನಾಪೋಕ್ಲು ಬೇತು ಗ್ರಾಮದ ಶ್ರೀ ಮಕ್ಕಿ ಶಾಸ್ತಾವು ದೇವರ ಎಡಮ್ಯಾರು ಹಬ್ಬ ಆರಂಭ

ವರದಿ :ಝಕರಿಯ ನಾಪೋಕ್ಲು

ನಾಪೋಕ್ಲು :ಕೊಡಗಿನ ಇತಿಹಾಸ ಪ್ರಸಿದ್ದ ನಾಪೋಕ್ಲು ಬಳಿಯ ಬೇತುಗ್ರಾಮದ ಶ್ರೀ ಮಕ್ಕಿ ಶಾಸ್ತಾವು ದೇವರ ಎಡಮ್ಯಾರು ಹಬ್ಬವು ಮೇ 2 ರಿಂದ 4ರವರೆಗೆ ನಡೆಯಲಿದೆ. ದಿನಾಂಕ 02 ರಂದು ರಾತ್ರಿ 9 ಗಂಟೆಗೆ ಶ್ರೀ ದೇವರನ್ನು ಕೊಟ್ಟಿ ಹಾಡುವುದು, ದಿನಾಂಕ 3 ರಂದು ಬೆಳಿಗ್ಗೆ 11.30 ಗಂಟೆಗೆ ಎತ್ತು ಪೋರಾಟ ಅಂದು ರಾತ್ರಿ 9.30 ಗಂಟೆಗೆ ಶ್ರೀ ಶಾಸ್ತಾವು ದೇವರ ಪ್ರಸಿದ್ದ ದೀಪಾರಾಧನೆ ( ಅಂದಿ ಬೊಳಕು) ನಡೆಯಲಿದೆ.

ದಿನಾಂಕ 4 ರಂದು ಬೆಳಿಗ್ಗೆ 9.30 ಗಟೆಗೆ ಶ್ರೀ ಕಲ್ಯಾಟ ಅಜ್ಜಪ್ಪ ದೇವರ ಕೋಲ ನಡೆಯಲಿದೆ. ಅಪರಾಹ್ನ 12.30 ಗಂಟೆಗೆ ಭಕ್ತಾಧಿಗಳಿಗೆ ಮಹಾ ಅನ್ನದಾನ ನಡೆಯಲಿದೆ.

ಅಪರಾಹ್ನ1 ಗಂಟೆಗೆ ಶ್ರೀ ವಿಷ್ಣು ಮೂರ್ತಿದೇವರ ಕೋಲ ನಡೆಯಲಿದೆ. ನಾಡಿನ ಭಕ್ತಾಧಿಗಳು ಅಧಿಕ ಸಂಖ್ಯೆಯಲ್ಲಿ ಆಗಮಿಸಿ ಶ್ರೀದೇವರ ತೀರ್ಥ ಪ್ರಸಾದವನ್ನು ಸ್ವೀಕರಿಸುವಂತೆ ದೇವಾಲಯದ ತಕ್ಕ ಮುಖುಸ್ಥರು ಹಾಗು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ಕೊರಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0