ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ
admincoorgdaily

ಕುಶಾಲನಗರ, ಆ.29 : ಕುಶಾಲನಗರ ಸಮೀಪದ ಹೆಬ್ಬಾಲೆಯ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಪರಿಸರ ಜಾಗೃತಿ ಕಾರ್ಯಕ್ರಮ ಜರುಗಿತು. ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ (2001) ಪುರಸ್ಕೃತ ಟಿ.ಸಿ. ದೇವನಾಥ್ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಪರಿಸರ ಜಾಗೃತಿ ನುಡಿಗಳಾನ್ನಾಡಿದರು.
ಪರಿಸರವನ್ನು ರಕ್ಷಿಸುವ ಮತ್ತು ಸಂರಕ್ಷಿಸುವ ಮಹತ್ವದ ಬಗ್ಗೆ ಮಾತನಾಡಿದ ಅವರು ಪ್ರಕೃತಿಯ ಸಂರಕ್ಷಣೆ, ಮಾಲಿನ್ಯ ನಿಯಂತ್ರಣ, ಹಸಿರು ಮತ್ತು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛ ಮತ್ತು ಆರೋಗ್ಯಕರವಾಗಿಡುವ ಅಗತ್ಯತೆಯ ಬಗ್ಗೆ ವಿಸ್ಕೃತವಾಗಿ ಮಾಹಿತಿಯನ್ನು ಹಂಚಿಕೊಂಡರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. "ಹಸಿರು ನಮ್ಮ ಉಸಿರು, ಆರೋಗ್ಯಕರ ಜೀವನಕ್ಕೆ ಸ್ವಚ್ಛ ಮತ್ತು ಮಾಲಿನ್ಯರಹಿತ ವಾತಾವರಣ ಅತ್ಯಗತ್ಯ" ಎಂಬ ಸಂದೇಶ ನೀಡಿದರು. ಶಾಲೆಯ ವ್ಯವಸ್ಥಾಪಕ ಎಚ್.ಎಸ್. ಲೋಕೇಶ್ , ಶಿಕ್ಷಕರು ಉಪಸ್ಥಿತರಿದ್ದರು.