Kodagu

ರಸ್ತೆ ಕಾಮಗಾರಿ ಉದ್ಘಾಟನೆಗೆ ಬಂದ ಶಾಸಕರು ಕಾಮಗಾರಿ ವೀಕ್ಷಿಸಿ ಅತೃಪ್ತಗೊಂಡು ಉದ್ಘಾಟಿಸದೆ ವಾಪಸ್

admincoorgdaily

ರಸ್ತೆ ಕಾಮಗಾರಿ ಉದ್ಘಾಟನೆಗೆ ಬಂದ ಶಾಸಕರು ಕಾಮಗಾರಿ ವೀಕ್ಷಿಸಿ ಅತೃಪ್ತಗೊಂಡು ಉದ್ಘಾಟಿಸದೆ ವಾಪಸ್

ಕುಶಾಲನಗರದ; ಹೃದಯ ಭಾಗದಲ್ಲಿರುವ ನಿಂಗೆಗೌಡ ಬಡಾವಣೆಯ ಎರಡನೇ ಹಂತದ ಕಾಮಗಾರಿಯನ್ನು ಮಡಿಕೇರಿ ಕ್ಷೇತ್ರದ ಶಾಸಕರು, ಮಂತರ್ ಗೌಡ ರವರು ಇಂದು ಖುದ್ದಾಗಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಕಾಮಗಾರಿಯ ಗುಣಮಟ್ಟವನ್ನು ಕಣ್ಣಾರೆ ನೋಡಿದ ನಂತರ, ಇದು ಕಳಪೆ, ಅಸಮರ್ಪಕ ಹಾಗೂ ಸಾರ್ವಜನಿಕ ಹಣದ ದುರುಪಯೋಗಕ್ಕೆ ಸಾಕ್ಷಿಯಾಗುವ ಕಾಮಗಾರ ಎಂಬುದು ಸ್ಪಷ್ಟವಾದ ಹಿನ್ನೆಲೆಯಲ್ಲಿ, ಉದ್ಘಾಟನೆಗೆಂದು ಬಂದಿದ್ದರೂ ಉದ್ಘಾಟನೆ ಮಾಡದೆ ಹಿಂತಿರುಗಿದ ಅಪರೂಪದ ಘಟನೆ ನಡೆದಿದೆ.