ಸಂಭ್ರಮದಿಂದ ಜರುಗಿದ ಕಕ್ಕಬ್ಬೆ ಬಳಿಯ ವಯಕೋಲ್ ಪುಳಿಙೋಂ ಉರೂಸ್

Apr 14, 2026 - 11:16
Apr 14, 2026 - 11:17
 0  79
ಸಂಭ್ರಮದಿಂದ ಜರುಗಿದ ಕಕ್ಕಬ್ಬೆ ಬಳಿಯ ವಯಕೋಲ್ ಪುಳಿಙೋಂ ಉರೂಸ್

ವರದಿ :ಝಕರಿಯ ನಾಪೋಕ್ಲು

 ನಾಪೋಕ್ಲು :ಕಕ್ಕಬ್ಬೆ ಸಮೀಪದ ವಯಕೋಲ್ ಗ್ರಾಮದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಪುಳಿಙೋಂ ಔಲಿಯಾಗಳ ಹೆಸರಿನಲ್ಲಿ ವರ್ಷಂ ಪ್ರತಿ ಆಚರಿಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ಜರುಗಿತು.

 ಶನಿವಾರ ಮಗ್ರಿಬ್ ನಮಾಜ್ ಬಳಿಕ ವಯಕೋಲ್ ಮಸ್ಜಿದುರ್ರಹ್ಮಾನ್ ಮಸೀದಿಯ ಅಧ್ಯಕ್ಷರಾದ ಅಹ್ಮದ್ ಹಾಜಿ ವಿ.ಎ. ಧ್ವಜಾರೋಹಣ ನೆರವೇರಿಸುವ ಮೂಲಕ ಉರೂಸಿಗೆ ವಿದ್ಯುಕ್ತ ಚಾಲನೆ ನೀಡಿದರು. ಬಳಿಕ ಅಹ್ಮದ್ ಹಾಜಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸದರ್ ಮುಹಲ್ಲಿಂ ಅಬ್ದುಲ್ ನಾಸರ್ ಲತೀಫಿ ಉದ್ಘಾಟಿಸಿ ಮಾತನಾಡಿದರು.

 ಭಾನುವಾರ ಮಧ್ಯಾಹ್ನ ಪೈನರಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಸೌಕತ್ ಅಲಿ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭವನ್ನು ವಯಕೋಲ್ ಮಸೀದಿಯಾ ಇಮಾಮರಾದ ರಫೀಕ್ ಸಖಾಫಿ ಅಲ್ ಅಝ್ಹರಿ ಉದ್ಘಾಟಿಸಿದರು. ಪ್ರಖ್ಯಾತ ವಾಗ್ಮಿ ಮೊಹಮ್ಮದ್ ರಾಫಿ ಹಿಮಮಿ ಖಾಮಿಲ್ ಸಖಾಫಿ ಧಾರ್ಮಿಕ ಪ್ರವಚನ ನಡೆಸಿದರು. ಪೈನರಿ ಮುಸ್ಲಿಂ ಜಮಾಅತ್ ಮುದರ್ರಿಸ್ ನಿಝಾರ್ ಅಹ್ಸನಿ ಕಕ್ಕಡಿಪುರಂ ಪ್ರಾರ್ಥನೆಗೆ ನೇತೃತ್ವ ನೀಡಿದರು.

ಸಂಜೆ ಮಸೀದಿಯಲ್ಲಿ ಮೌಲೂದ್ ಪಾರಾಯಣ ನಡೆದ ಬಳಿಕ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭ ವಯಕೋಲ್ ಮಸೀದಿಯ ಅಧ್ಯಕ್ಷರಾದ ಅಹ್ಮದ್ ಹಾಜಿ,ಉಪಾಧ್ಯಕ್ಷ ಮೊಯ್ದು,ಕೋಶಾಧಿಕಾರಿ ಉಸ್ಮಾನ್,ಪೈನರಿ ಮಸೀದಿಯ ಕಾರ್ಯದರ್ಶಿ ಸಹೀದ್ ಪಯ್ಯಡತ್,ಹುಸೈನ್ ಮುಸ್ಲಿಯಾರ್,ನಿವೃತ್ತ ಪೊಲೀಸ್ ಅಧಿಕಾರಿ ಮೂಸ,ವಯಕೋಲ್ ಮಸ್ಜಿದ್ ರಹ್ಮಾನ್ ಮಸೀದಿಯ ಆಡಳಿತ ಮಂಡಳಿ ಪದಾಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು. ಮಸೀದಿಯ ಪ್ರಧಾನ ಕಾರ್ಯದರ್ಶಿ ಅಬು ವಿ.ಎ. ಸ್ವಾಗತಿಸಿ,ಉಸ್ಮಾನ್ ವಿ.ಎಂ. ವಂದಿಸಿದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0