ವಿಜೃಂಭಣೆಯಿಂದ ನಡೆದ ಚೇಲಾವರ ಕಡಿಯತ್ ನಾಡು ಪೊನ್ನೋಲ ಸಾರ್ಥಾವು ಬೈತೂರ್ ಕಾರ್ಯಾರು ಹಾಗೂ ಪುದಿಯೋದಿ ದೇವರ ವಾರ್ಷಿಕ ಉತ್ಸವ
admincoorgdaily

ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು :ಚೆಯ್ಯಂಡಾಣೆ ಸಮೀಪದ ಚೇಲಾವರ ಗ್ರಾಮದ ಕಡಿಯತ್ ನಾಡು ಪೊನ್ನೋಲ ಸಾರ್ಥಾವು ಬೈತೂರ್ ಕಾರ್ಯಾರು ಹಾಗೂ ಪುದಿಯೋದಿ ದೇವರ ವಾರ್ಷಿಕ ಉತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಉತ್ಸವದ ಅಂಗವಾಗಿ ಪಡಿಞರಮ್ಮಂಡ ದೇವತಕ್ಕರ ಮನೆಯಿಂದ ಬಂಢಾರ ಆಗಮಿಸುವ ಮೂಲಕ ಧಾರ್ಮಿಕ ವಿಧಿವಿಧಾನಗಳು ಆರಂಭ ಗೊಂಡವು. ಧಾರ್ಮಿಕ ಕಾರ್ಯಕ್ರಮಗಳಾದ ಕಾರ್ಯಕ್ರಮಗಳಾದ ಎತ್ತು ಪೋರಾಟ,ಮಹಾ ಪೂಜೆ, ದೀಪಾರಾಧನೆ,ತೆಂಗಿನಕಾಯಿ ಪೊರುವುದು,ಕಣಿ ಪೂಜೆ,ವಿಶೇಷ ಪೂಜೆ,ವಾರ್ಷಿಕ ಮಹಾ ಸಭೆ,ದೇವ ತಕ್ಕರ ಮನೆಗೆ ಬಂಢಾರ ಹೊರಡುವುದು,ಪುದಿಯೋದಿ ದೇವರಿಗೆ ಮೇಲೇರಿ ಸೌದೆ ಕಡಿಯುವುದು,ದೇವತಕ್ಕರ ಮನೆಯಿಂದ ಬಂಢಾರ ಬರುವುದು,ಮೊದಲ ತೋತ,ಎರಡನೇ ತೋತ,ಮೇಲೇರಿಗೆ ಅಗ್ನಿ ಹಾಕುವುದು,ಮೂರನೇ ತೋತ,ಬಿರಾಳಿ ತೆರೆ,ಪುದಿಯೋದಿ ತೆರೆ,ಭದ್ರಕಾಳಿ ತೆರೆ ನಡೆದ ಬಳಿಕ ದೇವತಕ್ಕರ ಮನೆಗೆ ಬಂಢಾರ ಹಿಂದಿರುಗಿಸಲಾಯಿತು .
ಈ ಬಾರಿ ಸ್ಥಳೀಯ 3 ಜನ ತಿರುವಳಕಾರರು,ಕೇರಳದ ಪ್ರಖ್ಯಾತ ಚಂಡೆ ಮೇಳದ ತಂಡದವರಿಂದ ಚಂಡೆ ವಾಧ್ಯ, ಹಾಗೂ ಆಕರ್ಷಕ ದೀಪಾಲಂಕಾರ ನೋಡುಗರ ಗಮನ ಸೆಳೆಯಿತು. ಉತ್ಸವದಲ್ಲಿ ಊರಿನ ಪರ ಊರಿನ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಪ್ರಸಾದ ಸ್ವೀಕರಿಸಿ ಪುನೀತರಾದರು.