ಯಶಸ್ವಿಯಾಗಿ ನಡೆದ ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ವಾರ್ಷಿಕ ಮಹಾಸಭೆ
admincoorgdaily
ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು : ನಾಪೋಕ್ಲು ಸಮೀಪದ ಎಮ್ಮೆಮಾಡುವಿನ ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ನ ವಾರ್ಷಿಕ ಮಹಾಸಭೆಯು ಎಮ್ಮೆ ಮಾಡುವಿನಲ್ಲಿ ಯಶಸ್ವಿಯಾಗಿ ನಡೆಯಿತು. ಎಮ್ಮೆಮಾಡು ಮಸೀದಿಯ ಮದರಸ ಸಭಾಂಗಣದಲ್ಲಿ ಕೊಟ್ಟಮುಡಿ ಜಮಾಅತ್ ಅಧ್ಯಕ್ಷ ಹಾಗೂ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ಎ.ಹಂಸ ಕೊಟ್ಟಮುಡಿ ಅವರ ಅದ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಕಳೆದ 21 ತಿಂಗಳ ಲೆಕ್ಕಪತ್ರವನ್ನು ಮಂಡಿಸಿ ಅನುಮೋದನೆ ಪಡೆಯಲಾಯಿತು.
ಸಭೆಗೂ ಮೊದಲು ಎಮ್ಮೆಮಾಡುವಿನ ಸೂಫೀ ಶಹೀದ್ (ರ.ಅ)ಅವರ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭ ಸಭೆಯಲ್ಲಿ ಎಮ್ಮೆಮಾಡು ತಾಜಲ್ ಇಸ್ಲಾಂ ಮುಸ್ಲಿಂ ಜಮಾಅತ್ ನ ನೂತನ ಅಧ್ಯಕ್ಷರಾದ ಹುಸೈನ್ ಸಖಾಫಿ, ಕಾರ್ಯದರ್ಶಿ ಸೈಯ್ಯದ್ ಝಕರಿಯ,ಮಾಜಿ ಜಮಾಅತ್ ಅಧ್ಯಕ್ಷರಾದ ಅಬೂಬಕ್ಕರ್ ಸಖಾಫಿ, ಮಾಜಿ ಕಾರ್ಯದಶಿ ಹಾರಿಸ್,ಜಮಾಅತ್ ನ ನೂತನ ಸಮಿತಿ ಸದಸ್ಯರು, ಮಾಜಿ ಸಮಿತಿ ಸದಸ್ಯರು ಹಾಗೂ ಜಮಾಅತಿನ ಸರ್ವ ಸದಸ್ಯರು ಹಾಜರಿದ್ದರು.