Kodagu

ಅನಾಹುತ ಸಂಭವಿಸಿದರೆ ಇಲಾಖೆಯೇ ನೇರ ಹೊಣೆ : ಎಸ್‌ಡಿಪಿಐ ಎಚ್ಚರಿಕೆ

admincoorgdaily

ಅನಾಹುತ ಸಂಭವಿಸಿದರೆ ಇಲಾಖೆಯೇ ನೇರ ಹೊಣೆ : ಎಸ್‌ಡಿಪಿಐ ಎಚ್ಚರಿಕೆ

ಮಡಿಕೇರಿ: ಭಾಗಮಂಡಲದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಶಾಖಾಧಿಕಾರಿಗಳ ಕಚೇರಿ ಬಿಳುವ ಹಂತದಲ್ಲಿದೆ. ಈ ಕಟ್ಟಡದಲ್ಲಿ ಗ್ರಾಹಕ ಸೇವೆಗಳಿಗೆ ಜನರು ಸಾಲುಗಟ್ಟಿ ನಿಲ್ಲುತ್ತಿದ್ದು, ಮುಂದೆ ಅನಾಹುತ ಸಂಭವಿಸಿದರೆ ಅದಕ್ಕೆ ಇಲಾಖೆಯೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಟ್ಟಣ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಮುನೀರ್ ಎಂ.ಎಚ್. ಎಚ್ಚರಿಕೆ ನೀಡಿದ್ದಾರೆ.

ಕಟ್ಟಡ ಶಿಥಿಲಾವಸ್ಥೆಗೊಂಡಿರುವ ಕುರಿತು ಈ ಹಿಂದೆಯೇ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯಲಾಗಿದೆ. ಆದರೆ ಇಲ್ಲಿಯವರೆಗೆ ಯಾವುದೇ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಇದೇ ಮತ್ತೊಗಲ ಆತಂಕಗೊಂಡಿದ್ದು, ಯಾವಾಗ ಬೇಕಾದರೂ ಕಟ್ಟಡ ಬೀಳಬಹುದು. ಅಪಾಯದ ಸ್ಥಿತಿಯಲ್ಲಿರುವ ಕಟ್ಟಡದಲ್ಲಿ ಗ್ರಾಹಕ ಸೇವೆಗೆ ಸುರಕ್ಷತೆ ಇಲ್ಲದಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಅನಾಹುತ ಸಂಭವಿಸುವ ಮೊದಲು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಟ್ಟಡ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಕಟ್ಟಡ ದುರಸ್ತಿ ಆಗುವವರೆಗೆ ಪರ್ಯಾಯ ಕಟ್ಟಡಕ್ಕೆ ಕಚೇರಿಯನ್ನು ಸ್ಥಳಾಂತರಿಸುವ ಮೂಲಕ ಗ್ರಾಹಕರು ಹಾಗೂ ಸಿಬ್ಬಂದಿಗಳ ಸುರಕ್ಷತೆಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದ್ದಾರೆ.