ಶ್ರದ್ಧಾಭಕ್ತಿಯಿಂದ ಜರುಗಿದ ಕೊಳಕೇರಿ ಬೊಮ್ಮಂಜಿಕೇರಿ ಭದ್ರಕಾಳಿ ದೇವರ ಉತ್ಸವ
admincoorgdaily

ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು :ನಾಪೋಕ್ಲು ಸಮೀಪದ ಕೊಳಕೇರಿ ಗ್ರಾಮದ ಬೊಮ್ಮಂಜಿ ಕೇರಿಯಲ್ಲಿ ವಾರ್ಷಿಕವಾಗಿ ಆಚರಿಸಲ್ಪಡುವ ಶ್ರೀ ಭದ್ರಕಾಳಿ ದೇವರ ಉತ್ಸವವು ವಿವಿಧ ದೈವ ಕೋಲಗಳೊಂದಿಗೆ ಸಂಭ್ರಮ ಶ್ರದ್ಧಾ ಭಕ್ತಿಯಿಂದ ನಡೆಯಿತು.
ಕಳೆದ ಎರಡು ದಿನಗಳಿಂದ ನಡೆದ ಉತ್ಸವದಲ್ಲಿ ಪೂದ ಮತ್ತು ಭದ್ರಕಾಳಿ ದೇವರ ತೆರೆ ನಡೆದು ಉತ್ಸವ ಸಂಪನ್ನಗೊಂಡಿತು. ದೇವರ ಉತ್ಸವದಲ್ಲಿ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಇಷ್ಟಾರ್ಥ ಹರಕೆ, ಕಾಣಿಕೆಗಳನ್ನು ಒಪ್ಪಿಸಿ ದೇವರ ಪ್ರಸಾದ ಸ್ವೀಕರಿಸಿ ಪುನೀತರಾದರು.
ಈ ಸಂದರ್ಭ ದೇವಾಲಯದ ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿ ಪದಾಧಿಕಾರಿಗಳು, ಊರಿನ ಪರ ಊರಿನ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.