ಮದುವೆಯಾಗುವಂತೆ ಪೀಡಿಸಿದ ಹಳೇ ಲವ್ವರ್ ನ ಹತ್ಯೆಗೈದ ಪ್ರೇಮಿ! | 15 ವರ್ಷಗಳ ಪ್ರೇಮ ಸಂಬಂಧಕ್ಕೆ ದುರಂತ ಅಂತ್ಯ ಕಂಡ ಪೊಲೀಸ್ ಕಾನ್‌ಸ್ಟೆಬಲ್

Oct 2, 2025 - 20:10
 0  2.2k
ಮದುವೆಯಾಗುವಂತೆ ಪೀಡಿಸಿದ ಹಳೇ ಲವ್ವರ್ ನ ಹತ್ಯೆಗೈದ ಪ್ರೇಮಿ! |  15 ವರ್ಷಗಳ ಪ್ರೇಮ ಸಂಬಂಧಕ್ಕೆ ದುರಂತ ಅಂತ್ಯ ಕಂಡ ಪೊಲೀಸ್ ಕಾನ್‌ಸ್ಟೆಬಲ್
Photo credit: INDIA TODAY

ಗಾಂಧಿನಗರ: 15 ವರ್ಷಗಳ ದೀರ್ಘಕಾಲದ ಪ್ರೇಮ ಸಂಬಂಧ ಕೊನೆಗೆ ದುರಂತ ಅಂತ್ಯ ಕಂಡಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ.

ಅಹಮದಾಬಾದ್ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಕಾನ್‌ಸ್ಟೆಬಲ್, ಮಂಗಳವಾರ ಗಾಂಧಿನಗರದ ಸಿಬ್ಬಂದಿ ಕ್ವಾರ್ಟರ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಶವ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.

 ತನಿಖೆ ಆರಂಭಿಸಿದ ಕೆಲವೇ ಗಂಟೆಗಳಲ್ಲಿ, ಪೊಲೀಸರು ತಾಂತ್ರಿಕ ಮಾಹಿತಿ ಆಧರಿಸಿ ಅಮ್ರೇಲಿಯಲ್ಲಿ ಆರೋಪಿ ಮೋಹನ್ ಪಾರ್ಘಿಯನ್ನು ಬಂಧಿಸಿದರು.

 ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಕಾನ್‌ಸ್ಟೆಬಲ್ ಮತ್ತು ಮೋಹನ್ 2012ರಲ್ಲಿ ಕಾಲೇಜು ದಿನಗಳಿಂದಲೇ ಪ್ರೇಮ ಸಂಬಂಧದಲ್ಲಿದ್ದರು. ಆದರೆ 2015ರಲ್ಲಿ ಮೋಹನ್ ಮತ್ತೊಬ್ಬ ಯುವತಿಯನ್ನು ವಿವಾಹವಾದ. ಆದರೂ, ನಂತರ ಮತ್ತೆ ಕಾನ್‌ಸ್ಟೆಬಲ್‌ನೊಂದಿಗೆ ಸಂಪರ್ಕ ಬೆಳೆಸಿ, ಅಕ್ರಮ ಸಂಬಂಧವನ್ನು ಮುಂದುವರೆಸಿದ್ದ.

ಕೊಲೆಯಾದ ಮಹಿಳಾ ಕಾನ್‌ಸ್ಟೆಬಲ್ ತನ್ನ ಸಹೋದರ ಮತ್ತು ಅತ್ತಿಗೆಯೊಂದಿಗೆ ವಾಸಿಸುತ್ತಿದ್ದರೂ, ಅವರು ಘಟನೆಗೆ ಎರಡು ದಿನಗಳ ಮೊದಲು ತನ್ನ ಹಳ್ಳಿಗೆ ತೆರಳಿದ್ದರಿಂದ ಮನೆಯಲ್ಲಿ ಒಬ್ಬಂಟಿಯಾಗಿದ್ದರು. ಈ ವೇಳೆ ಗಾಂಧಿನಗರದಲ್ಲಿ ಮೋಹನ್ ನನ್ನು ಭೇಟಿಯಾಗಲು ಅವಕಾಶ ಸಿಕ್ಕಿತು.

ಪೊಲೀಸರ ಹೇಳಿಕೆಯ ಪ್ರಕಾರ, ಮದುವೆ ಕುರಿತು ಅವರಿಬ್ಬರ ನಡುವೆ ಭಾರೀ ವಾಗ್ವಾದ ನಡೆಯಿತು. “ಮದುವೆಯಾಗಲು ಸಾಧ್ಯವಾಗದಿದ್ದರೆ, ಅವರಲ್ಲಿ ಒಬ್ಬರು ಸಾಯಬೇಕು ಎಂದು ಇಬ್ಬರೂ ಜಗಳವಾಡಿದೆವು” ಎಂದು ಮೋಹನ್ ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ. ಕಾನ್‌ಸ್ಟೆಬಲ್ ತನ್ನ ಜೀವವನ್ನು ಕೊನೆಗೊಳಿಸುವ ಬಗ್ಗೆ ಪ್ರಸ್ತಾಪಿಸಿದ ನಂತರ, ಆಕೆಯನ್ನು ಕೊಲೆ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.

 ಮೋಹನ್, ತಾನು ಈಗಾಗಲೇ ಮದುವೆಯಾಗಿದ್ದರೂ ಕಾನ್‌ಸ್ಟೆಬಲ್ ಮದುವೆಗೆ ಒತ್ತಡ ಹೇರುತ್ತಿದ್ದ ಕಾರಣ ಈ ಕೃತ್ಯ ಎಸಗಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. ಪೊಲೀಸರು ಹತ್ಯೆ ಪ್ರಕರಣ ದಾಖಲಿಸಿ ಆತನನ್ನು ವಶಕ್ಕೆ ಪಡೆದಿದ್ದಾರೆ.

What's Your Reaction?

Like Like 1
Dislike Dislike 1
Love Love 1
Funny Funny 0
Angry Angry 2
Sad Sad 4
Wow Wow 0