ಹೆತ್ತ ತಂದೆ-ತಾಯಿ ಮತ್ತು ಒಡಹುಟ್ಟಿದ ಸಹೋದರಿಯನ್ನೇ ಬರ್ಬರವಾಗಿ ಹತ್ಯೆಗೈದ ವ್ಯಕ್ತಿ

Jan 31, 2026 - 14:23
 0  2.4k
ಹೆತ್ತ ತಂದೆ-ತಾಯಿ ಮತ್ತು ಒಡಹುಟ್ಟಿದ ಸಹೋದರಿಯನ್ನೇ ಬರ್ಬರವಾಗಿ ಹತ್ಯೆಗೈದ ವ್ಯಕ್ತಿ
ಬಂಧಿತ ಆರೋಪಿ

ವಿಜಯನಗರ, ಜ30: ಹೆತ್ತ ತಂದೆ-ತಾಯಿ ಮತ್ತು ಒಡಹುಟ್ಟಿದ ಸಹೋದರಿಯನ್ನೇ ವ್ಯಕ್ತಿಯೋರ್ವ ಬರ್ಬರವಾಗಿ ಹತ್ಯೆ (murder) ಮಾಡಿರುವಂತಹ ಘಟನೆ ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ನಡೆದಿದೆ. ಅಕ್ಷಯ ಕುಮಾರ ಕೊಲೆ ಮಾಡಿದ ವ್ಯಕ್ತಿ.

ಕೊಲೆಗೈದ ಅಕ್ಷಯ ಕುಮಾರ ಬೆಂಗಳೂರುಗೆ ತೆರಳಿ ತಂದೆ, ತಾಯಿ ಮತ್ತು ಸಹೋದರಿ ನಾಪತ್ತೆ ಆಗಿದ್ದಾರೆ ಎಂದು ಬೆಂಗಳೂರಿನ ತಿಲಕ್​ನಗರ ಠಾಣೆಗೆ ದೂರು ನೀಡಿದ್ದ. ಮೃತರ ಹೆಸರು ಮತ್ತು ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

 ಪೊಲೀಸ್​​ ವಿಚಾರಣೆ ವೇಳೆ ಅಸಲಿ ಸತ್ಯ ಬಾಯ್ಬಿಟ್ಟ ಪುತ್ರ; ಇನ್ನು ಅನುಮಾನಗೊಂಡ ತಿಲಕ್​ನಗರ ಠಾಣೆ ಪೊಲೀಸರು ಪುತ್ರನ ವಿಚಾರಣೆ ಮಾಡಿದ್ದಾರೆ. ಈ ವೇಳೆ ಕೊಲೆ ಬಗ್ಗೆ ಅಸ್ಪಷ್ಟ ಹೇಳಿಕೆ ನೀಡಿದ್ದಾನೆ.

ವಿಜಯನಗರ ಜಿಲ್ಲೆಯ ಕೊಟ್ಟೂರಿನ ಮನೆಯಲ್ಲಿ ಮೂವರನ್ನು ಕೊಂದು ಹೂತಿದ್ದಾಗಿ ಒಮ್ಮೆ ಹೇಳಿಕೆ ನೀಡಿದರೆ, ಮತ್ತೊಮ್ಮೆ ಸಂಡೂರಲ್ಲಿ ಶವ ಎಸೆದಿರುವುದಾಗಿ ಹೇಳಿಕೆ ನೀಡಿದ್ದಾನೆ. ಸದ್ಯ ವ್ಯಕ್ತಿ ನೀಡಿದ ಅಸ್ಪಷ್ಟ ಹೇಳಿಕೆ ಬಗ್ಗೆ ಕೊಟ್ಟೂರು ಠಾಣೆಗೆ ತಿಲಕ್​ನಗರ ಠಾಣೆ ಪೊಲೀಸರಿಂದ ಮಾಹಿತಿ ನೀಡಿದ್ದು, ಆ ಮಾಹಿತಿ ಆಧರಿಸಿ ವ್ಯಕ್ತಿ ಹೇಳಿರುವ ಸ್ಥಳದಲ್ಲಿ ಶವಗಳಿಗಾಗಿ ಕೊಟ್ಟೂರು ಠಾಣೆ ಪೊಲೀಸರು ಶೋಧ ನಡೆಸಿದ್ದಾರೆ.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 1
Sad Sad 5
Wow Wow 2