ಡಾ. ದುರ್ಗಾ ಪ್ರಸಾದ್ ಅವರು ವಿದೇಶಕ್ಕೆ ತೆರಳಿದ್ದ ವೇಳೆ ಅವರ ಜಾಗದಲ್ಲಿ ಚರಂಡಿ ನಿರ್ಮಾಣ ಮಾಡಿದ ಪುರಸಭೆ ಅಧಿಕಾರಗಳು
ವಿರಾಜಪೇಟೆ: ವಿರಾಜಪೇಟೆಯಲ್ಲಿ ಹಿರಿಯ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ದುರ್ಗಾ ಪ್ರಸಾದ್ ಅವರು ವಿದೇಶಕ್ಕೆ ತೆರಳಿದ್ದ ವೇಳೆ ಪುರಸಭೆ ಅಧಿಕಾರಿಗಳು ಅವರ ಜಾಗದಲ್ಲಿ ಚರಂಡಿ ನಿರ್ಮಾಣ ಮಾಡಿರುವ ಘಟನೆ ನಡೆದಿದೆ.
ಈ ಕುರಿತು ವಿರಾಜಪೇಟೆ ವೈದ್ಯರಾದ ಡಾ.ಐ.ಆರ್. ದುರ್ಗಾ ಪ್ರಸಾದ್ ಪಟ್ಟಣದಲ್ಲಿರುವ ವೈದ್ಯರ ಗೃಹ ಕಛೆರಿಯಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿ, ನಾನು ಉರಿನಲ್ಲಿಲ್ಲದ ಸಮಯದಲ್ಲಿ ನನಗೆ ತಿಳಿಸದಂತೆ ನನ್ನ ಜಾಗವನ್ನು ಅಕ್ರಮವಾಗಿ ಪ್ರವೇಶ ಮಾಡಿ ಅಲ್ಲಿ ಚರಂಡಿಯನ್ನು ನಿರ್ಮಿಸಿ ಸಾರ್ವಜನಿಕರು ರೋಗಿಗಳು ನರ್ಸಿಂಗ್ ಹೋಮಿಗೆ ಬರುವ ದಾರಿಯನ್ನು ಪುರಸಭೆ ಮುಖ್ಯಾಧಿಕಾರಿಗಳು ಹಾಗೂ ಕೆಲವು ಕಾಂಗ್ರೆಸಿಗರು ಹಾಳುಗೆಡವಿದ್ದಾರೆ ಎಂದು ದೂರಿದರು.
ಅವರು ನಮ್ಮ ನರ್ಸಿಂಗ್ ಹೋಮ್ [ಆಸ್ಪತ್ರೆ]ಗೆ ನಿತ್ಯ ಮಹಿಳೆಯರು ಮಕ್ಕಳು ಚಿಕಿತ್ಸೆಗಾಗಿ ಬಂದು ಹೋಗುತ್ತಾರೆ. ಆದರೆ ಈ ಮಳೆಯಲ್ಲಿ [ದಾರಿ]ರಸ್ತೆಯನ್ನು ಅಗೆದು ಚರಂಡಿ ಮಾಡಿದ್ದಾರೆ. ಕೊಚ್ಚೆಯಲ್ಲಿ ಜನರು ಬಂದು ಹೋಗುವುದು ಸಮಸ್ಯೆಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿದ್ದು ವಿರಾಜಪೇಟೆಯಲ್ಲಿ ಕೆಲವರು ಏನೆ ನಡೆಸಿದರು ನಮ್ಮನ್ನು ರಕ್ಷಿಸಲು ಶಾಸಕರಿದ್ದಾರೆ ಎನ್ನುವ ಚಿಂತೆಯಲ್ಲಿದ್ದಾರೆ. ಈ ಹಿಂದೆ ರಸ್ತೆ ಅಗಲೀಕರಿಸುತ್ತೇವೆ ಎಂದು ನಮ್ಮ ಜಾಗವನ್ನು ವಶಪಡಿಸಿಕೊಳ್ಳಲು ಮುಂದಾದಾಗ ರಸ್ತೆಯ ಎರಡು ಬದಿ ವಾಸಿಸುವ ೬೩ ಮಂದಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿ ನಮ್ಮ ಜಾಗವನ್ನು ಪಡೆಯಬೇಕಿದ್ದರೆ ಕಾನೂನು ರೀತಿಯಗಿ ಪರಿಹಾರ ಕೊಡಬೇಕೆಂದು ವಾದ ಮಂಡಿಸಿದೆವು.
ನಮ್ಮ ರಿಟ್ ಅರ್ಜಿ ವಿಲೇವಾರಿಯಾಗದೆ ಉಚ್ಚ ನ್ಯಾಯಾಲಯದಲ್ಲಿದೆ ಆದರೂ ನಾವು ಊರಿನಲ್ಲಿ ಇಲ್ಲದ ಸಂದರ್ಭ ನೋಡಿ ನನ್ನ ಜಾಗದಲ್ಲಿ ಕಾಮಗಾರಿ ನಡೆಸಿದ್ದಾರೆ. ಈ ಜಾಗದಲ್ಲಿ ಪುರಸಭೆಯ ಕೆಲಸ ಆದರೂ ನನ್ನ ಜಾಗದಲ್ಲಿ ನಮ್ಮ ಅನುಮತಿ ಇಲ್ಲದೆ ಕಾಮಗಾರಿ ನಡೆಸಿರುವುದು ಸಂವಿಧಾನದ ಹಕ್ಕಿನ ಹರಣವಾಗಿದೆ, ಪುರಸಭೆ ಅಧಿಕಾರಿಗಳ ಸರ್ವಾಧಿಕಾರಿ ವರ್ತನೆಗೆ ಅಧಿಕಾರರೂಢ ಕಾಂಗ್ರೆಸ್ ಪಕ್ಷದ ಕೆಲವು ಮುಖಂಡರು ಒತ್ತಾಸೆ ನೀಡಿರುವುದನ್ನು ಖಂಡಿಸುವುದಾಗಿ ಹೇಳಿದ ಡಾ, ದುರ್ಗಾಪ್ರಸಾದ್ ಅವರು ಪುರಸಭೆ ಮಾಡಿರುವ ಕಾಮಗಾರಿ ಅರ್ಥಹೀನವಾಗಿದ್ದು, ಸಾರ್ವಜನಿಕರು ತಮ್ಮ ದುಡಿಮೆಯ ಫಲವನ್ನು ತೆರಿಗೆn ರೂಪದಲ್ಲಿ ಕಟ್ಟುವ ಹಣದ ದುರುಪಯೋಗವಾಗಿದೆ ಎಂದು ದೂರಿದರು.
ವಿರಾಜಪೇಟೆಯಲ್ಲಿ ದೊಡಟ್ಟಿ ಚೌಕಿಯಿಂದ ಬಸವನಗುಡಿಯವರೆಗೆ ಇರುವ ರಸ್ತೆಯ ಬದಿಗಳಲ್ಲಿ ಚರಂಡಿಗಳಿದ್ದವು. ಅವುಗಳನ್ನು ಈಗ ಮುಚ್ಚಿದ್ದಾರೆ. ಅದರ ಪಕ್ಕದಲ್ಲಿ ನನಗೆ ಜಾಗವಿದೆ(ಬ್ಲಾಕ್ ೪) ೭೪/೧ ಮತ್ತು ೭೪/೨) ಈ ಜಾಗದ ಹಿಂದೆ ಅದರ ಒತ್ತಿಕೊಂಡು ಮತ್ತೊಂದು ಜಾಗವಿದೆ. ನಾನು ಈ ಜಾಗದಲ್ಲಿ ನರ್ಸಿಂಗ್ ಹೋಮ್ ಕಟ್ಟಬೇಕೆಂದು ೧೯೮೪ರಲ್ಲಿ ತೀರ್ಮಾನಿಸಿದ ಸಂದರ್ಭದಲ್ಲಿ ಆ ಬಗ್ಗೆ ಅಂದಿನ ಪಂಚಾಯಿತಿಗೆ ಅರ್ಜಿ ಕೊಟ್ಟಿದ್ದೆ. ಆಗ ಅವರು ನನಗೆ ಕೊಟ್ಟ ಒಪ್ಪಿಗೆ ಪತ್ರದಲ್ಲಿ "ರಸ್ತೆ ಬದಿಯಿಂದ ೧ ೧/೨ ಮೀಟರ್ ಬಿಟ್ಟು ನೀವು ಕಟ್ಟತಕ್ಕದ್ದು" ಎಂದು ಉತ್ತರ ಕೊಟ್ಟರು. ನಾನು ನರ್ಸಿಂಗ್ ಹೋಮಿನ ಕಟ್ಟಡವನ್ನು ಸಾಕಷ್ಟು ಹಿಂದೆ ಕಟ್ಟಿದೆ.
ಅನಂತರ ಗೇಟ್ ಕಟ್ಟುವಾಗ ನನ್ನ ಜಾಗದಲ್ಲಿ ನನ್ನ ಸೌಕರ್ಯಕ್ಕಾಗಿ ಕಟ್ಟಿದೆ. ಅದರ ಅರ್ಥ ಅದರ ಮುಂದಿನ ಜಾಗವನ್ನು ಬಿಟ್ಟುಕೊಟ್ಟಿದ್ದೇನೆಂದಲ್ಲ. ಅದರ ಮುಂದಿನ ಜಾಗವೂ ನನ್ನದೇ ಆಗಿದ್ದು ನನ್ನ ಸ್ವಂತಕ್ಕಾಗಿ ನಾನು ಬಳಸುತ್ತಿದ್ದೇನೆ. ಪುರಸಭೆಯವರು ಮಾಡಿರುವ ಕಾಮಗಾರಿಯೂ ಅರ್ಥಹೀನವಾಗಿದೆ.
ಸಾರ್ವಜನಿಕರು ತಮ್ಮ ದುಡಿಮೆಯ ಫಲವನ್ನು ತೆರಿಗೆಯ ರೂಪದಲ್ಲಿ ಕೊಟ್ಟ ಹಣ ದುರುಪಯೋಗವಾಗಿದೆ ಎಂದು ದೂರಿದರು. ಸಾಮಾಜಿಕ ಕಾರ್ಯಕರ್ತ ಮಾಳೇಟಿರ ಕಾಳಯ್ಯ ಮಾತನಾಡಿ ಅಧಿಕಾರವಿದೆ. ಎಂದು ಯಾರು ದಬ್ಬಾಳಿಕೆ ಮಾಡುವುದು ಸರಿಯಲ್ಲ. ಜನರ ಕಷ್ಟಗಳನ್ನು ಅರಿತುಕೊಂಡು ಕೆಲಸ ಮಾಡಬೇಕಾಗಿದೆ. ರಸ್ತೆ ಅಗಲೀಕರಣದ ಹೆಸರಿನಲ್ಲಿ ಏನು ಬೇಕಾದರೂ ಮಾಡಬಹುದು ಎನ್ನುವ ಹಂಬಲ ಬೇಡ. ರಸ್ತೆ ಬದಿಯಲ್ಲಿ ಕಡು ಬಡವರಿದ್ದಾರೆ. ಕಾರ್ಮಿಕರಿದ್ದರೆ ಅಂತವರ ಮನ ಒಲಿಸಿ ಸಹಾಯ ನೀಡಿ ಅಭಿವೃದ್ಧಿ ಕೆಲಸ ಮಾಡುವಂತಾಗಬೇಕು ಎಂದು ಕಿವಿಮಾತು ಹೇಳಿದರು.
What's Your Reaction?
Like
0
Dislike
0
Love
1
Funny
1
Angry
0
Sad
0
Wow
0
