ವಿರಾಜಪೇಟೆ ಬೆಚ್ಚಿಬೀಳಿಸಿದ ನಾಲ್ಕು ವರ್ಷದ ಬಾಲಕನ ಕೊಲೆ

Aug 14, 2026 - 00:00
 0  244
ವಿರಾಜಪೇಟೆ ಬೆಚ್ಚಿಬೀಳಿಸಿದ ನಾಲ್ಕು ವರ್ಷದ ಬಾಲಕನ ಕೊಲೆ

ವಿರಾಜಪೇಟೆ:ಗರ್ಭಿಣಿಯಾದರು ಲೈಂಗಿಕ ಸಂಪರ್ಕಕ್ಕೆ ಪ್ರಯತ್ನಿಸಿ ಒಲ್ಲೆ ಎಂದ ಕಾರಣಕ್ಕೆ ಹಲ್ಲೆ ನಡೆಸಿ ಬಾಲಕನ ಹೊಡೆದು ಕೊಲೆ ಮಾಡಿದ ಘಟನೆ ವಿರಾಜಪೇಟೆ ಚಿಕ್ಕಪೇಟೆಯಲ್ಲಿ ನಡೆದಿದೆ.

ವಿರಾಜಪೇಟೆ ನಗರದ ಚಿಕ್ಕಪೇಟೆ ನಿವಾಸಿ ಪಿ. ಬೋಪಣ್ಣ ಅವರ ಲೈನ್ ಮನೆಯಲ್ಲಿ ವಾಸವಿದ್ದ ಪಂಪನ ಗೌಡ ಎಂಬುವವರ ಪತ್ನಿ ಸುಚಿತ್ರ (23) ಹಲ್ಲೆಗೊಳಗಾದ ಮಹಿಳೆ.ಸುಚಿತ್ರ ಮತ್ತು ಪಂಪನ ಗೌಡ ದಂಪತಿಗಳ ದ್ವಿತೀಯ ಪುತ್ರ ಚರಣ್ (04) ವರ್ಷ ಮೃತನಾದ ಬಾಲಕ.ಕದನೂರು ಕಾಲೋನಿ ನಿವಾಸಿ ಹೆಚ್.ಕೆ. ಪ್ರತಾಪ್ (40) ಹಲ್ಲೆ ಮತ್ತು ಬಾಲಕನನ್ನು ಕೊಲೆಗೈದ ವ್ಯಕ್ತಿ.

ಘಟನೆ ವಿವರ:

ಕದನೂರು ನಿವಾಸಿ ಸುಚಿತ್ರ ರಾಯಚೂರು ನಿವಾಸಿ ಪಂಪನಗೌಡ ಪ್ರೀತಿಸಿ ಮದುವೆಯಾಗಿ ಬೆಂಗಳೂರು ನಲ್ಲಿ ನೆಲೆಸಿದ್ದರು. ದಂಪತಿಗಳಿಗೆ ಚೇತನ್ (06) ಮತ್ತು ಚರಣ್ (04) ಈರ್ವರು ಪುತ್ರರಿದ್ದಾರೆ.

ಬೆಂಗಳೂರು ಕೆಲಸ ಬಿಟ್ಟು ರಾಯಚೂರು ನ ಪಂಪನಗೌಡ ಮನೆಯಲ್ಲಿ ನೆಲೆಸಿದ್ದರು. ಮಾರ್ಚ್ ತಿಂಗಳಲ್ಲಿ ಕದನೂರು ಗ್ರಾಮದಲ್ಲಿ ಹಬ್ಬಯಿದ್ದ ಕಾರಣ ಸುಚಿತ್ರ ಮಕ್ಕಳೊಂದಿಗೆ ಅಜ್ಜಿ ಮನೆಗೆ ಆಗಮಿಸಿದ್ದಳು.ಲೈನ್ ಮನೆಯಲ್ಲಿ ವಾಸವಿದ್ದು ಚಿಕ್ಕಪುಟ್ಟ ತೋಟದ ಕೆಲಸಕ್ಕೆ ತೆರಳುತ್ತಿದ್ದಳು.ಅದೇ ಗ್ರಾಮದಲ್ಲಿ ಸುಚಿತ್ರಳ ಅಕ್ಕ ಪಲ್ಲವಿ ಮತ್ತು ಗಂಡ ಪ್ರತಾಪ್ ಹಾಗೂ ಮಕ್ಕಳು ವಾಸವಿದ್ದರು. ಒಂಟಿಯಾಗಿ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದ ಸುಚಿತ್ರಳ ಮನೆಗೆ ಪ್ರತಾಪ್ ಬಂದುಹೊಗುವುದು ಮಾಡುತ್ತಿದ್ದ. ನೀನು ಒಬ್ಬಳೇ ಇದ್ದಿಯಾ ನಾನು ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದ ಪ್ರತಾಪ್, ಹೀಗಿರುವಾಗ ಪ್ರತಾಪ್ ನ ಕಾಮುಕ ಮನಸ್ಸು ಹೊರಹೊಮ್ಮಿತು. ಸುಚಿತ್ರಳೊಂದಿಗೆ ದೈಹಿಕ ಸಂಪರ್ಕ ಸಾಧಿಸಲು ಪ್ರಯತ್ನ ಮಾಡಿದ ಹಲವು ಬಾರಿ ಈರ್ವರ ನಡುವೆ ಕಲಹಗಳು ನಡೆದಿವೆ.

ಏಪ್ರಿಲ್ ಒಂದು ರಂದು ಬಲವಂತವಾಗಿ ಆಕೆ ಮಲಗಿರುವ ಸಂದರ್ಭ ಸುಚಿತ್ರಳ ಮೇಲೆ ದೈಹಿಕ ಸಂಪರ್ಕ ಸಾಧಿಸಿ ಗರ್ಭಿಣಿಯಾಗಿಸಿದ. ಇದರಿಂದಾಗಿ ಈತನಿಂದ ಬೇಸತ್ತು ಸುಚಿತ್ರ ಕದನೂರು ತೋಟದ ಲೈನ್ ಮನೆಯನ್ನು ತೊರೆದು ವಿರಾಜಪೇಟೆ ಚಿಕ್ಕಪೇಟೆ ಪಿ. ಬೋಪಣ್ಣ ಅವರ ಲೈನ್ ಮನೆಯಲ್ಲಿ ವಾಸಕ್ಕೆ ಬರುತ್ತಾಳೆ. ಕೆಲವು ದಿನಗಳು ಕಳೆದಂತೆ ಪ್ರತಾಪ್ ಮತ್ತು ಅಕ್ಕ ಪಲ್ಲವಿ ಹಾಗೂ ಮಕ್ಕಳು ಚಿಕ್ಕ ಪೇಟೆ ಲೈನ್ ಮನೆಯಲ್ಲಿ ತಂಗುತ್ತಾರೆ. ತಾ.12-08-2026 ರಾತ್ರಿ ಅಕ್ಕ ಮತ್ತು ಮಕ್ಕಳು ಮಲಗಿದ್ದ ವೇಳೆ ಬಲವಂತವಾಗಿ ಸುಚಿತ್ರಳ ಬಳಿ ಬಂದು ಲೈಂಗಿಕ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಾನೆ. ಇದಕ್ಕೆ ಒಪ್ಪದ ಸುಚಿತ್ರ ನಿನ್ನಿಂದ ನಾನು ಗರ್ಭಿಣಿಯಾಗಿದ್ದೇನೆ. ನಾನು ಮಕ್ಕಳೊಂದಿಗೆ ರಾಯಚೂರುಗೆ ಹೋಗುತ್ತೇನೆ ಎಂದು ಹೇಳುತ್ತಾ ಮನೆಯಿಂದ ಹೊರ ನಡೆಯುತ್ತಾಳೆ. ಇದರ ಮದ್ಯೆ ಚರಣ್ ( ಮೃತನಾದ ಬಾಲಕ) ನನ್ನ ಹೊಡೆದು ಸಾಯಿಸುತ್ತಾನೆ ಎಂದು ಬೆದರಿಕೆ ಹಾಕುತ್ತಾನೆ.

ಬೆದರಿಕೆಗೆ ಓಗೊಡದ ಸುಚಿತ್ರಳ ಹೊರಡಲು ಮುಂದಾಗಿದ್ದಾಳೆ.ಈ ವೇಳೆ ಬಾಲಕ ಚರಣ್ ನ ಮುಖ ,ಬೆನ್ನು ಮತ್ತು ಮರ್ಮಾಂಗಕ್ಕೆ ಒದ್ದಿರುತ್ತಾನೆ. ಅಕ್ಕ ಪಲ್ಲವಿ ಪ್ರತಾಪ್ ನನ್ನ ಸಮಾಧಾನ ಪಡಿಸಲು ಯತ್ನಿಸಿದರು. ಕೃತ್ಯ ನಡೆಯುತಿದ್ದ ಸಮಯ ಸುಚಿತ್ರಳ ಹಿರಿಯ ಮಗ ಚೇತನ್ ಗಮನಿಸಿ ಅಳುತಿದ್ದ. ಸುಚಿತ್ರ ಗಾಬರಿಗೊಂಡು ಅಲ್ಪ 

ಸಮಯದ ನಂತರ ಅಕ್ಕ ಪಲ್ಲವಿ ಮತ್ತು ಬಾವ ಪ್ರತಾಪ್ ಮಲಗಿದ ನಂತರ ಗಾಯಗೊಂಡ ಮಗನನ್ನು ನೋಡಲು ತೆರಳಿದ್ದಾಳೆ. ನೋಡಲಾಗಿ ಯಾವುದೇ ಪ್ರತಿಕ್ರಿಯೆ ಬಾರದಾಗಿತ್ತು. ಮರಣ ಹೊಂದಿದ್ದಾನೆ ಎಂದು ದೃಡಪಟ್ಟು ಸುಚಿತ್ರಳು ಚೀರಿಕೊಂಡಿದ್ದಾಳೆ. ನಿದ್ರೆಯಿಂದ ಎಚ್ಚರಗೊಂಡ ಪ್ರತಾಪ್ ಕಿರುಚಬೇಡ ಎಂದು ಕೊಡಲಿ ಕಾವುನ್ನು ಹಿಡಿದುಕೊಂಡು ಸುಚಿತ್ರಳ ಮೇಲೆ ಹಲ್ಲೆ ನಡೆಸಿದ್ದೇನೆ. ಗಾಯಗೊಂಡ ಸುಚಿತ್ರ ಹಿರಿಯ ಮಗ ಚೇತನ್ ನೊಂದಿಗೆ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಗಾಗಿ ದಾಖಲಾಗಿದ್ದಾಳೆ.

 ಮಾಹಿತಿ ಪಡೆದು ಪೊಲೀಸರು ಸ್ಥಳಕ್ಕೆ ಆಗಮಿಸಿ ಮಾಹಿತಿ ಬಯಸಿದ್ದಾರೆ. ಬಾಲಕ ಚರಣ್ ನ ತಾಯಿ ಸುಚಿತ್ರ ನೀಡಿರುವ ದೂರಿನ ಅನ್ವಯ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರತಾಪ ನ ಮೇಲೆ 103(1),109(1) 64(2) ಹೆಚ್ 64(2) ಎಂ ಬಿ.ಎನ್.ಎಸ್ ಕಾಯ್ದೆ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.ದೂರಿನ ಹಿನ್ನಲೆಯಲ್ಲಿ ಪ್ರತಾಪನನ್ನು ಬಂಧಿಸಿದ್ದು,ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ. ಸ್ಥಳಕ್ಕೆ ವಿಧಿ ವಿಜ್ಞಾನ ವಿಭಾಗದ ಅಧಿಕಾರಿಗಳು ಆಗಮಿಸಿ ಮಾಹಿತಿ ಕಲೆಹಾಕಿದ್ದು. ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳು, ವೃತ್ತ ನಿರೀಕ್ಷಕರು, ನಗರ ಠಾಣೆಯ ಠಾಣಾಧಿಕಾರಿಗಳು,ಗ್ರಾಮಾಂತರ ಪೊಲೀಸ್ ಠಾಣೆ ಯ ಠಾಣಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿದ್ದು ಹೆಚ್ಚಿನ ತನಿಖೆ ನಡೆಸುತಿದ್ದಾರೆ.

ಕಿಶೋರ್ ಕುಮಾರ್ ಶೆಟ್ಟಿ

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0